ETV Bharat / state

ಅತ್ಯುತ್ಸಾಹದಲ್ಲಿ ಅರ್ಜಿ ಕರೆದಿದ್ದೆ ಕಾಂಗ್ರೆಸ್​ಗೆ ಇಕ್ಕಟ್ಟಾಯ್ತಾ.. ಮುಂದಿನ ಪರಿಸ್ಥಿತಿಗೆ ಪರಿಹಾರ ಏನು? - Congress leader Rahul Gandhi

ರಾಹುಲ್​ ಗಾಂಧಿ ಹೇಳಿರುವಂತೆ ಈಗ ಅರ್ಜಿ ಸಲ್ಲಿಸಿರುವ ಯುವ ಆಕಾಂಕ್ಷಿಗಳಿಗೆ ಕಾಂಗ್ರೆಸ್​ ಮಣೆ ಹಾಕುತ್ತಾ ಅಥವಾ ಅನುಭವಿಗಳಿಗೆ ಮಣೆ ಹಾಕುತ್ತಾ ಕಾದು ನೋಡಬೇಕಿದೆ.

Siddaramaiah and DK Shivakumar
ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್
author img

By

Published : Nov 28, 2022, 6:59 AM IST

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಆಕಾಂಕ್ಷಿಗಳ ಒತ್ತಡ ಎಷ್ಟಿದೆ ಎನ್ನುವುದನ್ನು ಅರಿಯಲು ಕಾಂಗ್ರೆಸ್ ಹೈಕಮಾಂಡ್ ಸೂಚನೆ ಹಿನ್ನೆಲೆ ಅರ್ಜಿ ಆಹ್ವಾನಿಸಿದ ಕಾಂಗ್ರೆಸ್​ಗೆ ನಿಜವಾದ ಒತ್ತಡ ಆರಂಭವಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ಅದರಲ್ಲೂ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಲ್ಲಿ ಆತಂಕ, ಒತ್ತಡ ಸಹಜವಾಗಿ ಹೆಚ್ಚಾಗಿದೆ. ಭಾರಿ ಸಂಖ್ಯೆಯಲ್ಲಿ ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ನಿರೀಕ್ಷೆಗೂ ಮೀರಿದ ಅರ್ಜಿ ಸಲ್ಲಿಕೆ ಆಗಿದೆ. ಅಲ್ಲದೇ ಆಕಾಂಕ್ಷಿಗಳು ಈಗಾಗಲೇ ತಮಗೇ ಟಿಕೆಟ್ ನೀಡುವಂತೆ ಪಕ್ಷದ ರಾಜ್ಯ ನಾಯಕರ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ.

ರಾಜಧಾನಿಗೆ ಆಗಮಿಸಿ ಶಕ್ತಿ ಪ್ರದರ್ಶನ ಆರಂಭಿಸಿದ್ದಾರೆ. ವಿಶೇಷ ಬೆಳವಣಿಗೆ ಅಂದರೆ ಸಾಕಷ್ಟು ಸಂಖ್ಯೆಯಲ್ಲಿ ಹೊಸ ಮುಖಗಳು, ಯುವ ನಾಯಕರು ಅರ್ಜಿ ಸಲ್ಲಿಸಿದ್ದಾರೆ. ಇವರ ಜತೆ ಹಳೆಯ ನಾಯಕರು, ಮಾಜಿ ಸಚಿವರು, ಶಾಸಕರು ಸಹ ಅರ್ಜಿ ಸಲ್ಲಿಸಿದ್ದಾರೆ. ಈಗ ಇವರ ನಡುವೆಯೇ ಮಾತಿನ ಚಕಮಕಿ ಆರಂಭವಾಗಿದೆ.

ಯುವ ನಾಯಕತ್ವಕ್ಕೆ ಮಣೆ ಹಾಕುವುದಾಗಿ ಹಿಂದೆ ಪಕ್ಷದ ರಾಷ್ಟ್ರೀಯ ನಾಯಕರ ರಾಹುಲ್ ಗಾಂಧಿ ತಿಳಿಸಿದ್ದಾರೆ. ಇದರಿಂದ ನಮಗೆ ಅವಕಾಶ ಕೊಡಿ ಎಂದು ಯುವ ಸಮುದಾಯದ ನಾಯಕರು ಒತ್ತಡ ಹಾಕುತ್ತಿದ್ದಾರೆ. ಇನ್ನೊಂದೆಡೆ ಹಿರಿಯರಿಗೆ ಮಣೆ ಹಾಕದಿದ್ದರೆ ಪಕ್ಷದ ಅಸ್ಥಿತ್ವ ನಾಶವಾಗಲಿದೆ. ಅನುಭವಕ್ಕೆ ಮಣೆ ಹಾಕಲೇಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಇದೀಗ ರಾಜ್ಯ ನಾಯಕರಿಗೆ ಸಮಜಾಯಿಷಿ ನೀಡುವುದು, ಮನವೊಲಿಸುವುದು ಹಾಗೂ ಸಮಾಧಾನಪಡಿಸುವುದು ದೊಡ್ಡ ತಲೆನೋವಾಗಿದೆ.

ಇಂದು ರಾಜ್ಯ ನಾಯಕರು ನಡೆಸಿದ ಜೂಮ್ ಸಭೆಯಲ್ಲಿ ಸಹ ಇದೇ ವಿಧದ ಸಮಸ್ಯೆ ಎದುರಾಗಿದೆ. ಇದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಂದು ಗಂಟೆ ಸಭೆ ನಡೆಸಿ, ಕೇವಲ ಒಂದಿಷ್ಟು ಸೂಚನೆ ನೀಡಿದ್ದಾರೆ. ಸಲಹೆ ಸ್ವೀಕರಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಸಲಹೆ ಸ್ವೀಕರಿಸುವ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳು ನಾಳೆಯಿಂದ ಮತ್ತೆ ಬೆಂಗಳೂರಿನಲ್ಲಿ ಬೀಡು ಬಿಟ್ಟು ತಮ್ಮ ಪ್ರಭಾವ ಬೀರುವ ಯತ್ನ ಆರಂಭಿಸಲಿದ್ದಾರೆ.

ಹೇಗಿದೆ ಸ್ಥಿತಿ?: ರಾಜ್ಯದ ಒಟ್ಟು 224 ವಿಧಾನಸಭಾ ಕ್ಷೇತ್ರಗಳಲ್ಲಿ 69 ಮಂದಿ ಕಾಂಗ್ರೆಸ್​ ಶಾಸಕರಿದ್ದಾರೆ. ಈ ಎಲ್ಲ ಶಾಸಕರು ಮರು ಆಯ್ಕೆ ಬಯಸಿದ್ದಾರೆ. 2018 ರ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ 16 ಸಚಿವರು ಹಾಗೂ ಇಬ್ಬರು ಸಂಸದರು 2023 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇವರ ಜತೆ ಮಾಜಿ ಶಾಸಕರ ಪಟ್ಟಿಯೂ ದೊಡ್ಡದಾಗಿದೆ.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಶಾಸಕರಾಗಿರುವ ಶಿಕಾರಿಪುರವನ್ನು ಈ ಬಾರಿ ಪುತ್ರ ವಿಜಯೇಂದ್ರಗೆ ಬಿಟ್ಟುಕೊಡಲು ತೀರ್ಮಾನಿಸಿದ್ದಾರೆ. ಇಲ್ಲಿಂದ ಸ್ಪರ್ಧಿಸಲು ಕಾಂಗ್ರೆಸ್​ನಲ್ಲಿ ಒಟ್ಟು 15 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಮಾಜಿ ಸಚಿವೆ ಉಮಾಶ್ರಿ ಸ್ಪರ್ಧಿಸಿದ್ದ ತೆರದಾಳ ಕ್ಷೇತ್ರದಿಂದ ಕಾಂಗ್ರೆಸ್​ನಿಂದ ಸ್ಪರ್ಧೆಗೆ 14 ಅರ್ಜಿ ಸಲ್ಲಿಕೆಯಾಗಿವೆ. ಉಮಾಶ್ರಿ ಸಹ ಇವರಲ್ಲಿ ಒಬ್ಬರು. ಶಿವಮೊಗ್ಗ ಗ್ರಾಮಾಂತರದಿಂದ 12 ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮಂಡ್ಯದಿಂದ 11 ಹಾಗೂ ಮುಳಬಾಗಿಲಿನಿಂದ ಸ್ಪರ್ಧಿಸಲು 9 ಮಂದಿ ಆಸಕ್ತಿ ತೋರಿಸಿದ್ದಾರೆ. ಶಿವಮೊಗ್ಗ ನಗರಕ್ಕೆ 17 ಆಕಾಂಕ್ಷಿಗಳ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಬಳ್ಳಾರಿ ಹಾಗೂ ಹರಪನಹಳ್ಳಿಗೆ ತಲಾ 13 ಮಂದಿಯಿಂದ ಅರ್ಜಿ ಸಲ್ಲಿಕೆಯಾಗಿದೆ.

ಈ ರೀತಿ ರಾಜ್ಯದ ಎಲ್ಲ 224 ಕ್ಷೇತ್ರದಿಂದಲೂ ಒಟ್ಟು ಅರ್ಜಿ ಪಡೆದವರು 1450 ಆಗಿದ್ದರೆ, ಭರ್ತಿ ಮಾಡಿದ ಅರ್ಜಿ ಸಲ್ಲಿಸಿದವರ ಸಂಖ್ಯೆ 1350 ಆಗಿದೆ. ಪ್ರತಿ ಕ್ಷೇತ್ರದಿಂದಲೂ ಅತ್ಯಂತ ಕಡಿಮೆ ಅಂದರೂ ಐದು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಇವರ ಮನವೊಲಿಕೆ ಕಾಂಗ್ರೆಸ್ ನಾಯಕರಿಗೆ ಸವಾಲಿನದ್ದಾಗಲಿದೆ.

ಇದನ್ನೂ ಓದಿ: ಒಕ್ಕಲಿಗ ಸಂಘದ ಸಭೆಯಲ್ಲಿ ಭಾಗಿಯಾಗುವೆ, ಮೀಸಲಾತಿ ಚರ್ಚೆಯಾಗಲಿದೆ: ಡಿ ಕೆ ಶಿವಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.