ಬೆಂಗಳೂರು: ರಾಜ್ಯಕ್ಕೆ ನೀಡಬೇಕಾಗಿರುವ ಜಿಎಸ್ಟಿ ಪಾಲನ್ನು ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ನಿರಂತರವಾಗಿ ಆರೋಪಿಸುತ್ತ ಬಂದಿರುವ ರಾಜ್ಯ ಕಾಂಗ್ರೆಸ್, ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಲೇವಡಿ ಮಾಡಿ ಟ್ವೀಟ್ ಮಾಡಿದೆ.
ಕಾಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ, 5 ದಶ ಲಕ್ಷ ಆರ್ಥಿಕತೆ ಎಂದು ಅಂಗೈಯಲ್ಲಿ ಆಕಾಶ ತೋರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ ರಾಜ್ಯಗಳಿಗೆ ಜಿಎಸ್ಟಿ ಪಾಲು ಪಾವತಿ ಮಾಡಲು ಕಷ್ಟವಾಗುತ್ತಿದೆ.ಆರ್ಥಿಕ ತಜ್ಞರನ್ನು ಪರಿಗಣನೆಗೆ ತೆಗೆದುಕೊಳ್ಳದೆ ದೇಶದ ಆರ್ಥಿಕತೆಯನ್ನು ದಿಕ್ಕು ತಪ್ಪಿಸಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ಎಂದಿದೆ.
-
5 ದಶ ಲಕ್ಷ ಆರ್ಥಿಕತೆ ಎಂದು ಅಂಗೈಯಲ್ಲಿ ಆಕಾಶ ತೋರಿಸಿದ್ದ ಪ್ರಧಾನಿ @narendramodi ಅವರಿಗೆ ಈಗ ರಾಜ್ಯಗಳಿಗೆ ಜಿಎಸ್ಟಿ ಪಾಲು ಪಾವತಿ ಮಾಡಲು ಕಷ್ಟವಾಗುತ್ತಿದೆ.
— Karnataka Congress (@INCKarnataka) July 29, 2020 " class="align-text-top noRightClick twitterSection" data="
ಆರ್ಥಿಕ ತಜ್ಞರನ್ನು ಪರಿಗಣನೆಗೆ ತೆಗೆದುಕೊಳ್ಳದೆ ದೇಶದ ಆರ್ಥಿಕತೆಯನ್ನು ದಿಕ್ಕು ತಪ್ಪಿಸಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?https://t.co/DubeUPBGPh
">5 ದಶ ಲಕ್ಷ ಆರ್ಥಿಕತೆ ಎಂದು ಅಂಗೈಯಲ್ಲಿ ಆಕಾಶ ತೋರಿಸಿದ್ದ ಪ್ರಧಾನಿ @narendramodi ಅವರಿಗೆ ಈಗ ರಾಜ್ಯಗಳಿಗೆ ಜಿಎಸ್ಟಿ ಪಾಲು ಪಾವತಿ ಮಾಡಲು ಕಷ್ಟವಾಗುತ್ತಿದೆ.
— Karnataka Congress (@INCKarnataka) July 29, 2020
ಆರ್ಥಿಕ ತಜ್ಞರನ್ನು ಪರಿಗಣನೆಗೆ ತೆಗೆದುಕೊಳ್ಳದೆ ದೇಶದ ಆರ್ಥಿಕತೆಯನ್ನು ದಿಕ್ಕು ತಪ್ಪಿಸಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?https://t.co/DubeUPBGPh5 ದಶ ಲಕ್ಷ ಆರ್ಥಿಕತೆ ಎಂದು ಅಂಗೈಯಲ್ಲಿ ಆಕಾಶ ತೋರಿಸಿದ್ದ ಪ್ರಧಾನಿ @narendramodi ಅವರಿಗೆ ಈಗ ರಾಜ್ಯಗಳಿಗೆ ಜಿಎಸ್ಟಿ ಪಾಲು ಪಾವತಿ ಮಾಡಲು ಕಷ್ಟವಾಗುತ್ತಿದೆ.
— Karnataka Congress (@INCKarnataka) July 29, 2020
ಆರ್ಥಿಕ ತಜ್ಞರನ್ನು ಪರಿಗಣನೆಗೆ ತೆಗೆದುಕೊಳ್ಳದೆ ದೇಶದ ಆರ್ಥಿಕತೆಯನ್ನು ದಿಕ್ಕು ತಪ್ಪಿಸಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?https://t.co/DubeUPBGPh
ರಾಜ್ಯದ ಪಾಲಿನ ಜಿಎಸ್ಟಿ ಮೊತ್ತವನ್ನು ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ನಿರಂತರವಾಗಿ ಒತ್ತಾಯಿಸುತ್ತ ಬಂದಿರುವ ಕಾಂಗ್ರೆಸ್ ನಾಯಕರು, ಇದೇ ವಿಚಾರವನ್ನು ಪ್ರಸ್ತಾಪಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮೇಲೆ ನಿರಂತರ ಒತ್ತಡ ಹೇರುತ್ತಲೇ ಬಂದಿದ್ದಾರೆ. ಇದೇ ವಿಚಾರವಾಗಿ ಸರ್ವಪಕ್ಷ ನಿಯೋಗ ಕರೆದೊಯ್ಯುವಂತೆಯೂ ಮನವಿ ಮಾಡಿದ್ದರು. ಇದೀಗ ಮತ್ತೊಮ್ಮೆ ಇದೆ ವಿಚಾರವನ್ನು ಟ್ವೀಟ್ ಮೂಲಕ ಪ್ರಸ್ತಾಪಿಸಿದ್ದಾರೆ.