ETV Bharat / state

ಜೇಟ್ಲಿ ನಿಧನಕ್ಕೆ ದಿನೇಶ್​​ ಗುಂಡೂರಾವ್​​​, ಕೃಷ್ಣಬೈರೇಗೌಡ ಸಂತಾಪ - ಅರುಣ್ ಜೇಟ್ಲಿ ನಿಧನ

ಮಾಜಿ ಹಣಕಾಸು‌ ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ರಾಜ್ಯ ಕಾಂಗ್ರೆಸ್​ ನಾಯಕರಾದ ದಿನೇಶ್​ ಗುಂಡೂರಾವ್, ಕೃಷ್ಣ ಬೈರೇಗೌಡ ಸಂತಾಪ ಸೂಚಿಸಿದ್ದಾರೆ.

ದಿನೇಶ್ ಗುಂಡೂರಾವ್
author img

By

Published : Aug 24, 2019, 8:04 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಅರುಣ್ ಜೇಟ್ಲಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಒಳ್ಳೆಯ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ: ದಿನೇಶ್ ಗುಂಡೂರಾವ್

ಅವರೊಬ್ಬ ಉತ್ತಮ ಸಂಸದೀಯ ಪಟು, ಒಳ್ಳೆಯ ವಾಗ್ಮಿ. ಅಷ್ಟೇ ಅಲ್ಲ ಉತ್ತಮ ವಕೀಲರೂ ಹೌದು. ಹಿಂದೆ ರಾಜ್ಯಸಭೆ ವಿಪಕ್ಷ ನಾಯಕರಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಇಂದು ನಾವು ಒಳ್ಳೆಯ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಸಂತಾಪ ಸೂಚಿಸಿದರು.

ಕೃಷ್ಣಬೈರೇಗೌಡ ಸಂತಾಪ:

ದೇಶದ ಹಿರಿಯ ರಾಜಕಾರಣಿ ಅರುಣ್​ ಜೇಟ್ಲಿ ನಿಧನ ನೋವು ತಂದಿದೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಸಂತಾಪ ವ್ಯಕ್ತಪಡಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ವಾಜಪೇಯಿ ಅವರ ಕಾಲದ ಬಿಜೆಪಿ ಮುಖಂಡರಲ್ಲಿ ಜೇಟ್ಲಿ ಕೊನೆಯ ಕೊಂಡಿ ಎನ್ನಬಹುದು. ಪ್ರತಿಪಕ್ಷಗಳು ಗೌರವ ನೀಡುವಂತಹ ವ್ಯಕ್ತಿತ್ವ ಜೇಟ್ಲಿ ಅವರದ್ದಾಗಿತ್ತು ಎಂದು ಸ್ಮರಿಸಿದರು.

ನಾನು ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ವಾಯಪೇಯಿ ಅವರ ಶೈಲಿಯನ್ನು ನೆನಪಿಸಿಕೊಡುವ ರಾಜಕಾರಣಿ ಅವರಾಗಿದ್ದರು. ಅವರಂತಹ ನಾಯಕತ್ವ ದೇಶಕ್ಕೆ ಬೇಕಿತ್ತು. ಅಂತವರು ಇಂದು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಂಬನಿ ಮಿಡಿದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸಂತಾಪ ಸೂಚಿಸಿ, ಅರುಣ್ ಜೇಟ್ಲಿ ಅವರ ರಾಜಕೀಯ ಹಿನ್ನೆಲೆಯನ್ನು ನಾನು ಸಾಕಷ್ಟು ವರ್ಷಗಳಿಂದ ನೋಡಿದ್ದೇನೆ. ತತ್ವ ಸಿದ್ಧಾಂತಗಳಿಗೆ ಅಂಟಿಕೊಂಡಿರೋ ಮತ್ತು ಉತ್ತಮ ವಿಚಾರಧಾರೆಗಳನ್ನ ಹೊಂದಿದ್ದ ರಾಜಕಾರಣಿಯಾಗಿದ್ದರು. ಅವರ ಸಾವು ನೋವು ತಂದಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

Intro:ggg

Body:ggg

Conclusion:gggg
ETV Bharat Logo

Copyright © 2024 Ushodaya Enterprises Pvt. Ltd., All Rights Reserved.