ETV Bharat / state

ಪಕ್ಷ ಬಿಡುವವರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಹೆಚ್ಚಿದೆ ಚಿಂತೆ! - ಬಿಜೆಪಿ ಸರ್ಕಾರದ ವಿರುದ್ಧ ಜನ ಜಾಗೃತಿ

ವಿಧಾನಸಭಾ ಚುನಾವಣೆಗೆ ಈಗಾಗಲೇ ಜೆಡಿಎಸ್​ ತನ್ನ ಅರ್ಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಬಿಜೆಪಿ ಆಮಿಷವೊಡ್ಡುವ ಕಾರ್ಯವನ್ನು ಈಗಾಗಲೇ ಆರಂಭಿಸಿದೆ. ಹೀಗಾಗಿ ಕಾಂಗ್ರೆಸ್​​ಗೆ ಕೆಲ ನಾಯಕರು ಪಕ್ಷ ಬಿಡಬಹುದೆಂಬ ಭಯ ಇದೀಗ ಕಾಡಲಾರಂಭಿಸಿದೆ.

ಕಾಂಗ್ರೆಸ್ ನಾಯಕರಿಗೆ ಹೆಚ್ಚಿದೆ ಚಿಂತೆ
ಕಾಂಗ್ರೆಸ್ ನಾಯಕರಿಗೆ ಹೆಚ್ಚಿದೆ ಚಿಂತೆ
author img

By

Published : Dec 25, 2022, 1:59 PM IST

ಬೆಂಗಳೂರು: ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ ಹಾಗೂ ಬಿಜೆಪಿ ತಮ್ಮ ಹಾಲಿ ಶಾಸಕರನ್ನು ಸೆಳೆಯಲು ನಡೆಸಿರುವ ತಂತ್ರಗಾರಿಕೆ ಕಾಂಗ್ರೆಸ್ ನಾಯಕರಿಗೆ ದೊಡ್ಡ ತಲೆಬಿಸಿಯಾಗಿ ಕಾಡಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ತೊಟ್ಟು ಬಸ್​ ಯಾತ್ರೆಗೆ ಸಿದ್ಧತೆ ನಡೆಸಿರುವ ಕಾಂಗ್ರೆಸ್ ನಾಯಕರು, ಮುಂದಿನ 75 ದಿನ ಬಿಜೆಪಿ ಸರ್ಕಾರದ ವಿರುದ್ಧ ಜನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಜನರ ವಿಶ್ವಾಸಗಳಿಸಲು ಬಸ್​ ಯಾತ್ರೆ: ನಿರಂತರವಾಗಿ ಪ್ರವಾಸದಲ್ಲಿರುವ ಸಂದರ್ಭದಲ್ಲಿ ಬಿಜೆಪಿ ನಾಯಕರು ಎಲ್ಲೆಲ್ಲಿ ತಮ್ಮ ನಾಯಕರನ್ನು ಸಂಪರ್ಕಿಸಿ ವಿವಿಧ ರೀತಿಯ ಆಮಿಷ, ಬೆದರಿಕೆ ಒಡ್ಡಿ ಪಕ್ಷ ಬಿಡುವಂತೆ ಮಾಡಲಿದ್ದಾರೋ ಎಂಬ ಆತಂಕ ಕಾಂಗ್ರೆಸ್ ನಾಯಕರನ್ನು ಕಾಡಿದೆ. ಉತ್ತರ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದ ಹಲವು ಜಿಲ್ಲೆಗಳ ಅಭ್ಯರ್ಥಿಗಳನ್ನು ಜೆಡಿಎಸ್ ಘೋಷಿಸಿದ್ದು, ಇದೀಗ ಕಾಂಗ್ರೆಸ್​ಗೆ ಇನ್ನಷ್ಟು ಇಕ್ಕಟ್ಟನ್ನು ಹೆಚ್ಚಿಸಿದೆ. ಬಸ್​ ಯಾತ್ರೆಯಲ್ಲಿ ಜನರ ವಿಶ್ವಾಸಗಳಿಸುವ ಕಾರ್ಯ ಮಾಡುತ್ತಿದ್ದರೆ, ಇನ್ನೊಂದೆಡೆ ಎಲ್ಲಿ ಬಿಜೆಪಿ ಹಾಗೂ ಜೆಡಿಎಸ್​ ಪಕ್ಷಗಳು ತಮ್ಮ ಜನಪ್ರತಿನಿಧಿಗಳನ್ನು ಸೆಳೆಯುತ್ತಾರೋ ಅನ್ನುವ ಭೀತಿ ಕೈ ನಾಯಕರಿಗೆ ಕಾಡಲಾರಂಭಿಸಿದೆ.

ನಾಯಕರು ಪಕ್ಷ ಬಿಟ್ಟು ಹೋಗುವ ಭಯ: ಬಿಜೆಪಿ ಹಾಗೂ ಜೆಡಿಎಸ್​ನಿಂದ ಹಲವು ಶಾಸಕರು ತಮ್ಮ ಪಕ್ಷಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಒಳಗೊಳಗೆ ತಮ್ಮವರು ಎಷ್ಟು ಮಂದಿ ಅತ್ತ ತೆರಳುತ್ತಾರೆ ಎನ್ನುವ ಮಾಹಿತಿ ಸ್ಪಷ್ಟವಾಗಿ ಸಿಗುತ್ತಿಲ್ಲ. ವಿವಿಧ ರೀತಿಯ ಆಮಿಷ ಒಡ್ಡುವ ಕಾರ್ಯವನ್ನು ಬಿಜೆಪಿ ಈಗಾಗಲೇ ಆರಂಭಿಸಿದೆ. ಹೊಸಬರಿಗೆ ಅವಕಾಶ ನೀಡಬೇಕೆಂಬ ಒತ್ತಡ ಕಾಂಗ್ರೆಸ್​ನಲ್ಲಿ ಹೆಚ್ಚಾಗಿದೆ. ಹಿರಿಯರಿಗೆ ಮಣೆ ಹಾಕಿದರೆ ಯುವಕರಿಗೆ ಅಸಮಾಧಾನ, ಯುವಕರಿಗೆ ಮಣೆ ಹಾಕಿದರೆ ಹಿರಿಯರಿಗೆ ಬೇಸರ. ಈ ಕಾರಣದಿಂದ ಪಕ್ಷದ ನಾಯಕರನ್ನು ಮನವೊಲಿಸುವುದೇ ಕಾಂಗ್ರೆಸ್​ ರಾಜ್ಯ ನಾಯಕರಿಗೆ ಸವಾಲಾಗಿ ಪರಿಣಮಿಸಿದೆ.

ವಿಶೇಷ ಸಮಿತಿ ರಚನೆ: ಈಗಾಗಲೇ ಮುಂಬರುವ ವಿಧಾನಸಭೆ ಚುನಾವಣೆಗೆ ಆಕಾಂಕ್ಷಿಗಳಿಂದ ಕಾಂಗ್ರೆಸ್ ಅರ್ಜಿ ಆಹ್ವಾನಿಸಿತ್ತು. ಒಂದೊಂದು ಕ್ಷೇತ್ರದಿಂದ ಕನಿಷ್ಠ 5 ರಿಂದ 15ರವರೆಗೂ ಅರ್ಜಿ ಸಲ್ಲಿಕೆಯಾಗಿದೆ. ಇದೀಗ ಅಂತಿಮವಾಗಿ ಒಂದರಿಂದ ಮೂರು ಅಭ್ಯರ್ಥಿಗಳ ಆಯ್ಕೆ ಮಾಡಿ ಪಟ್ಟಿ ಸಲ್ಲಿಸಲು ವಿಶೇಷ ಸಮಿತಿ ರಚಿಸಲಾಗಿದೆ. ಜನವರಿ ಮೊದಲ ವಾರದಲ್ಲಿ ಸಮಿತಿ ಪಟ್ಟಿ ಸಲ್ಲಿಸಬೇಕಿದೆ. ಈ ಮಧ್ಯೆ ಜನರ ನಡುವೆ ತೆರಳಿ ಕಾಂಗ್ರೆಸ್ ರಾಜ್ಯ ನಾಯಕರು ತಮ್ಮ ಒಗ್ಗಟ್ಟು ಪ್ರದರ್ಶಿಸಬೇಕಿದೆ.

ಸರ್ಕಾರ ಅಧಿಕಾರಕ್ಕೆ ಬಂದರೆ ಏನು ನೀಡುತ್ತೇವೆ ಎಂಬ ವಿವರ ಕೊಡಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪರಿಣಾಮಕಾರಿಯಾಗಿ ರಾಜ್ಯ ಸರ್ಕಾರದ ವೈಫಲ್ಯವನ್ನು ಜನರಿಗೆ ವಿವರಿಸಬೇಕಿದೆ. ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯಬೇಕಿದೆ. ಹಾಲಿ, ಮಾಜಿ ಶಾಸಕರು, ನಾಯಕರು, ಆಕಾಂಕ್ಷಿಗಳು, ಮುಖಂಡರನ್ನು ಸಂಪೂರ್ಣ ವಿಶ್ವಾಸಕ್ಕೆ ಪಡೆಯಬೇಕಿದೆ. ಚಿಕ್ಕಪುಟ್ಟ ನಾಯಕರು ಪಕ್ಷ ತ್ಯಜಿಸಿದರೆ ಅಂತಹ ಸಮಸ್ಯೆ ಇಲ್ಲ. ಜಿಲ್ಲಾ ಮಟ್ಟದಲ್ಲಿ ಉತ್ತಮ ಹೆಸರು ಸಂಪಾದಿಸಿದವರು ಬಿಟ್ಟು ಹೋಗದಂತೆ ತಡೆಯಬೇಕಿದೆ.

ಜೆಡಿಎಸ್ ಮೊದಲ ಪಟ್ಟಿ ಪ್ರಕಟ: ಶನಿವಾರ ಎಚ್​.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ಅಭ್ಯರ್ಥಿ ಹೆಸರು ಘೋಷಿಸಿದ್ದಾರೆ. ಬಿಜೆಪಿ ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿದ್ದು, ಹಾಲಿ 40 ಶಾಸಕರಿಗೆ ಕೈಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಸಂದರ್ಭ ಅಲ್ಲಿಂದ ತಮ್ಮ ಪಕ್ಷದತ್ತ ಬರುವವರನ್ನು ಸೇರಿಸಿಕೊಳ್ಳಬೇಕೋ ಬೇಡವೋ, ಅವರಿಗೆ ಗೆಲ್ಲುವ ಶಕ್ತಿ ಇದೆಯೋ ಇಲ್ಲವೋ, ಜಿಲ್ಲೆ, ಕ್ಷೇತ್ರ ಮಟ್ಟದಲ್ಲಿ ಕಾರ್ಯಕರ್ತರಿಗೆ ಬರುವ ನಾಯಕರ ಮೇಲೆ ವಿಶ್ವಾಸ ಇದೆಯೋ ಇಲ್ಲವೋ ಅನ್ನುವುದನ್ನು ತಿಳಿದುಕೊಳ್ಳಬೇಕಿದೆ.

ನಮಗೆ ಆತಂಕವಿಲ್ಲ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ಧ. ರಾಜ್ಯ ಬಿಜೆಪಿ ಸರ್ಕಾರದ ಹಗರಣಗಳು, ಜನವಿರೋಧಿ ಆಡಳಿತ, ಅನಗತ್ಯ ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳು ನಾವು ಅಧಿಕಾರಕ್ಕೆ ಬರಲು ಸಹಕರಿಸಲಿವೆ. ನಾವು ಅರಂಭಿಸಿದ ಹಲವು ಯೋಜನೆಗಳನ್ನು ಬಿಜೆಪಿ ಸರ್ಕಾರ ಕೈಬಿಟ್ಟಿದೆ. ಇದನ್ನು ಜನರಿಗೆ ತಿಳಿಸುತ್ತೇವೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದಾಗ ನೀಡಿದ ಜನಸ್ನೇಹಿ ಯೋಜನೆಗಳನ್ನು ವಿವರಿಸುತ್ತೇವೆ.

ಇದನ್ನೂ ಓದಿ: ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಆಗ್ರಹ: ಸರ್ಕಾರಿ ನೌಕರರ ಪ್ರತಿಭಟನೆಗೆ ಸಿದ್ದರಾಮಯ್ಯ ಸಾಥ್‌

ಬಿಜೆಪಿ ಬಗೆಗಿನ ತಾತ್ಸಾರ ಹಾಗೂ ಹಿಂದೆ ನಾವು ಕೊಟ್ಟ ಕೊಡುಗೆ ಮತ್ತೆ ನಮ್ಮನ್ನು ಅಧಿಕಾರಕ್ಕೆ ತರಲಿದೆ. ನಮಗೆ ಗೆಲ್ಲುವ ವಿಶ್ವಾಸವಿದೆ. ಪಕ್ಷದಿಂದ ಯಾರೂ ಹೊರ ಹೋಗಲ್ಲ, ಬದಲಾಗಿ ಬಿಜೆಪಿ, ಜೆಡಿಎಸ್​ನಿಂದಲೇ ಸಾಕಷ್ಟು ಮಂದಿ ನಮ್ಮ ಪಕ್ಷಕ್ಕೆ ಸೇರಲಿದ್ದಾರೆ ಎಂದು ಮಾಜಿ ಗೃಹ ಸಚಿವ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.