Congress ಅಧಿಕಾರಕ್ಕೆ ಬರುವುದು ಖಚಿತ, CM ಆಯ್ಕೆ ಮಾಡುವುದು ಶಾಸಕರು & ಹೈಕಮಾಂಡ್: ಮುನಿಯಪ್ಪ - K H Muniyappa
ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು. ಸಿದ್ದರಾಮಯ್ಯ ಕಾಲದಲ್ಲಿ ಕೊಟ್ಟ ಆಡಳಿತ ಮತ್ತೆ ನಾವು ಕೊಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಸುರ್ಜೇವಾಲಾ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಆದೇಶ ಪಾಲಿಸುವುದು ನಮ್ಮ ಕೆಲಸ. ಸುರ್ಜೇವಾಲಾ ಎಚ್ಚರಿಕೆ ಭೀಮನಾಯ್ಕ್ಗೆ ಗೊತ್ತಿಲ್ಲ. ಅವರಿಗೆ ತಿಳಿಸುವ ಕೆಲಸ ಮಾಡ್ತೀವಿ..
ಬೆಂಗಳೂರು : ಕಾಂಗ್ರೆಸ್ ಪಕ್ಷ ಮುಂದೆ ಅಧಿಕಾರಕ್ಕೆ ಬರುವುದು ಖಚಿತ. ಸಿಎಂ ಆಯ್ಕೆ ಮಾಡುವುದು ಶಾಸಕರು ಮತ್ತು ಹೈಕಮಾಂಡ್ ಎಂದು ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ ತಿಳಿಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರು ಕೂಡಿ ಕೆಲಸ ಮಾಡಬೇಕು ಎಂದರು.
ಕಳೆದ ವರ್ಷ ಈ ಸಂಬಂಧ ಇಬ್ಬರಿಗೂ ಸಲಹೆ ನೀಡಿದ್ದೆ. ಕೆಪಿಸಿಸಿ ಅಧ್ಯಕ್ಷರು ಮತ್ತು ವಿಪಕ್ಷ ನಾಯಕ ಸೇರಿ ಕೆಲಸ ಮಾಡಬೇಕು ಎಂದು ಹೇಳಿದ್ದೆ. ಪಕ್ಷ ಅಧಿಕಾರಕ್ಕೆ ತರುವುದು ನಮ್ಮ ಕೆಲಸ. ಪಕ್ಷ ಕಟ್ಟುವ ಕೆಲಸ ಶಿವಕುಮಾರ್ಗೆ ನೀಡಿದ್ದಾರೆ. ಪಕ್ಷ ದೊಡ್ಡದು, ವ್ಯಕ್ತಿ ದೊಡ್ಡವರಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ವಿಫಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಯಡಿಯೂರಪ್ಪ ಬದಲಾವಣೆ ಮಾಡುವ ಕೆಲಸ ಬಿಜೆಪಿಯಲ್ಲಿ ನಡೆಯುತ್ತಿದೆ. ಕೋವಿಡ್ ನಿರ್ವಹಣೆ ಬಿಟ್ಟು ಸಿಎಂ ಬದಲಾವಣೆಗೆ ಬಿಜೆಪಿ ಮುಂದಾಗಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು. ಸಿದ್ದರಾಮಯ್ಯ ಕಾಲದಲ್ಲಿ ಕೊಟ್ಟ ಆಡಳಿತ ಮತ್ತೆ ನಾವು ಕೊಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಸುರ್ಜೇವಾಲಾ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಆದೇಶ ಪಾಲಿಸುವುದು ನಮ್ಮ ಕೆಲಸ. ಸುರ್ಜೇವಾಲಾ ಎಚ್ಚರಿಕೆ ಭೀಮನಾಯ್ಕ್ಗೆ ಗೊತ್ತಿಲ್ಲ. ಅವರಿಗೆ ತಿಳಿಸುವ ಕೆಲಸ ಮಾಡ್ತೀವಿ. ಸೂಚನೆ ಅವರ ಗಮನಕ್ಕೆ ಬಂದಿಲ್ಲ ಅನಿಸುತ್ತದೆ. ಹೀಗಾಗಿ, ನಾಳೆಯಿಂದ ಅವರು ಈ ರೀತಿ ಮಾತನಾಡೋದಿಲ್ಲ ಎಂದು ಭಾವಿಸಿದ್ದೇನೆ ಎಂದರು.
ಅನಗತ್ಯವಾಗಿ ಆಶ್ವಾಸನೆ ನೀಡಬಾರದು : ಸಿದ್ದರಾಮಯ್ಯ ಈ ಹೇಳಿಕೆಗಳನ್ನ ನೀಡಿಲ್ಲ. ಉಳಿದವರು ಹೇಳುತ್ತಿದ್ದಾರೆ. ಈ ಬೆಳವಣಿಗೆ ಪಕ್ಷಕ್ಕೆ ಒಳ್ಳೆಯದಲ್ಲ. ಡಿ ಕೆ ಶಿವಕುಮಾರ್ ಹಿರಿಯ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗ್ತಾರೆ ಎಂದು ಭಾವಿಸಿದ್ದೇನೆ.
ಅದೇ ರೀತಿ ಮುಂದುವರಿಸುವುದು ಒಳ್ಳೆಯದು. ಪಕ್ಷದಲ್ಲಿ ಎಲೆಕ್ಷನ್ ಕಮಿಟಿ ಇದೆ. ಸೆಂಟ್ರಲ್ ಎಲೆಕ್ಷನ್ ಕಮಿಟಿ ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಕೆಲಸ ಮಾಡ್ತಾರೆ. ಹೀಗಾಗಿ, ಯಾರು ಏನು ಮಾತನಾಡ್ತಾರೆ. ಆಶ್ವಾಸನೆ ಕೊಡ್ತಾರೆ ಅದಕ್ಕೆ ಮಹತ್ವ ಕೊಡಬೇಕಿಲ್ಲ. ಪಕ್ಷದ ನಾಯಕರು ಅನಗತ್ಯವಾಗಿ ಆಶ್ವಾಸನೆ ನೀಡಬಾರದು ಎಂದು ಹೇಳಿದರು.
ಪಕ್ಷದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಮತ್ತು ಗೊಂದಲಗಳನ್ನ ಬಗೆಹರಿಸಬೇಕು. ಕೂಡಲೇ ಹಿರಿಯ ನಾಯಕರ ಸಭೆ ಕರೆದು ಸರಿಪಡಿಸಬೇಕು. ಹಿರಿಯ ನಾಯಕರ ಸಭೆ ಕರೆಯುವಂತೆ ಡಿಕೆಶಿಗೆ ಮುನಿಯಪ್ಪ ಇದೇ ವೇಳೆ ಒತ್ತಾಯ ಮಾಡಿದರು.
ಓದಿ: ಮಂಗಳೂರು ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಸಿಟಿ ರೌಂಡ್ಸ್-ನಿಯಮ ಉಲ್ಲಂಘಿಸಿದವರಿಗೆ ದಂಡ