ಬೆಂಗಳೂರು: ಯಾರು ಏನೇ ಹೇಳಿಕೆಗಳನ್ನು ನೀಡಲಿ, ಪಕ್ಷ ಅಧಿಕಾರಕ್ಕೆ ಬಂದರೆ ಸಿಎಂ ಯಾರಾಗಬೇಕೆಂದು ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ರಾಜ್ಯದಲ್ಲಿ 113 ಸ್ಥಾನಗಳನ್ನು ಗೆಲ್ಲಬೇಕು. ನಂತರ ಯಾರು ಮುಖ್ಯಮಂತ್ರಿಗಳಾಬೇಕೆಂದು ಹೈಕಮಾಂಡ್ ತೀರ್ಮಾನ ಮಾಡಲಿದೆ. ಇದಕ್ಕಾಗಿ ನಾವೆಲ್ಲ ಒಟ್ಟಾಗಿ ಸೇರಿ ಪಕ್ಷ ಅಧಿಕಾರಕ್ಕೆ ಬರುವ ಹಾಗೆ ಕೆಲಸ ಮಾಡಬೇಕು. ಇದರ ಕಡೆ ಎಲ್ಲರೂ ಗಮನ ಕೇಂದ್ರೀಕರಿಸಬೇಕು. ಸಣ್ಣ ಪುಟ್ಟ ಹೇಳಿಕೆಗಳನ್ನು ಕೊಟ್ಟು ಗೊಂದಲ ಉಂಟು ಮಾಡಬಾರದು ಎಂದರು.
ಸಿದ್ದರಾಮಯ್ಯ ಹುಟ್ಟುಹಬ್ಬಾಚರಣೆಯ ಬಗ್ಗೆ ಮಾತನಾಡಿ, ಆಗಸ್ಟ್ 3ರಂದು ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಭರ್ಜರಿ ತಯಾರಿ ನಡೆದಿದೆ. ಇದು ಸಿದ್ದರಾಮಯ್ಯ ಹೇಳಿ ಮಾಡಿಸುತ್ತಿರುವ ಕಾರ್ಯಕ್ರಮವಲ್ಲ. ಕಾಂಗ್ರೆಸಿಗರ ಸಮಾವೇಶ. ಚುನಾವಣೆಯ ವರ್ಷ ಇದು. ಏನೇ ಮಾಡಿದರೂ ಪಕ್ಷಕ್ಕೇ ಲಾಭ. ಭವಿಷ್ಯದ ಬಗ್ಗೆ ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ಮಾಡುತ್ತೇವೆಂದು ಹೇಳಿದರು.
ಇದನ್ನೂ ಓದಿ: ಕನ್ನಡ ಕಡ್ಡಾಯ ಆದೇಶ ತಡೆಯಾಜ್ಞೆ ತೆರವಿಗೆ ಹೈಕೋರ್ಟ್ ಮೊರೆ ಹೋದ ಕ.ಅ.ಪ್ರಾಧಿಕಾರ