ETV Bharat / state

ಶಕ್ತಿ ಪ್ರದರ್ಶನದಲ್ಲಿ ಕಾಂಗ್ರೆಸ್ ಯಶಸ್ಸು.. ಕಾರ್ಯಕರ್ತರನ್ನು ಹಿಡಿದಿಡುವಲ್ಲಿ ವಿಫಲ..

ಸಾಕಷ್ಟು ಮಂದಿ ಸಣ್ಣಪುಟ್ಟ ಬಟ್ಟೆ ಖರೀದಿ ತಿಂಡಿ-ತಿನಿಸುಗಳ ಖರೀದಿ ಹಾಗೂ ತಮ್ಮ ಪಾಡಿಗೆ ತಾವು ಹರಟೆ ಹೊಡೆಯುವುದರಲ್ಲಿ ನಿರತರಾಗಿರುವುದು ಕಂಡು ಬಂತು. ಸಮಾರಂಭದಲ್ಲಿ ಭಾಗವಹಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಥಳದಿಂದ ತೆರಳಿದ್ದು ಕಾಣಿಸಿತು..

protest
protest
author img

By

Published : Jan 20, 2021, 8:07 PM IST

ಬೆಂಗಳೂರು : ಒಂದೆಡೆ ಕಾಂಗ್ರೆಸ್ ಪಕ್ಷದ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಮಾತ್ರ ಇನ್ನೊಂದೆಡೆ ಶಾಪಿಂಗ್​ನಲ್ಲಿ ತೊಡಗಿದ್ದು ಕಂಡು ಬಂತು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಕರೆ ಕೊಟ್ಟಿದ್ದ ಪ್ರತಿಭಟನೆಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ಪಾಲ್ಗೊಳ್ಳುವ ಆಸಕ್ತಿ ಕಾರ್ಯಕರ್ತರಲ್ಲಿ ಇರುವುದು ಕಾಣಸಿಗಲಿಲ್ಲ.

ಸಾವಿರಾರು ಮಂದಿ ಕಾರ್ಯಕರ್ತರ ಜೊತೆಗೆ ಕಾಂಗ್ರೆಸ್ ನಾಯಕರು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹೊರಟು ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ತೆರಳಿದರು. ಅಲ್ಲಿ ಸಮಾವೇಶಗೊಂಡು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವೇದಿಕೆಯ ಮುಂಭಾಗ ನೂರಾರು ಮಂದಿಗೆ ಕೂರುವ ಆಸನ ವ್ಯವಸ್ಥೆ ಮಾಡಲಾಗಿತ್ತು.

ಆದರೆ, ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರಿಂದ ಹಲವರು ರಸ್ತೆಯಲ್ಲಿ ಕುಳಿತು ಬೃಹತ್ ಡಿಜಿಟಲ್ ಡಿಸ್ಪ್ಲೇ ಮೂಲಕ ಕಾರ್ಯಕ್ರಮ ವೀಕ್ಷಿಸಿದರು. ವೇದಿಕೆ ಕಾರ್ಯಕ್ರಮ ವೀಕ್ಷಿಸುವ ತಾಳ್ಮೆ ಕಾರ್ಯಕರ್ತರಲ್ಲಿ ಅಷ್ಟಾಗಿ ಕಾಣಸಿಗಲಿಲ್ಲ.

ಕಾಂಗ್ರೆಸ್ ಪ್ರತಿಭಟನೆ

ಸಾಕಷ್ಟು ಮಂದಿ ಸಣ್ಣಪುಟ್ಟ ಬಟ್ಟೆ ಖರೀದಿ ತಿಂಡಿ-ತಿನಿಸುಗಳ ಖರೀದಿ ಹಾಗೂ ತಮ್ಮ ಪಾಡಿಗೆ ತಾವು ಹರಟೆ ಹೊಡೆಯುವುದರಲ್ಲಿ ನಿರತರಾಗಿರುವುದು ಕಂಡು ಬಂತು. ಸಮಾರಂಭದಲ್ಲಿ ಭಾಗವಹಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಥಳದಿಂದ ತೆರಳಿದ್ದು ಕಾಣಿಸಿತು.

congress protest
ಕಾಂಗ್ರೆಸ್ ಪ್ರತಿಭಟನೆ

ರೈತರು V/S ಕೇಂದ್ರ: ಮುಂದಿನ ಸುತ್ತಿನ ಮಾತುಕತೆ ಜನವರಿ 22ಕ್ಕೆ

ಗಮನ ಸೆಳೆದ ಅಂಶಗಳು :

ಸಾವಿರಾರು ಜನರನ್ನು ಒಗ್ಗೂಡಿಸಿ ತನ್ನ ಶಕ್ತಿಪ್ರದರ್ಶನ ಮಾಡಿದ ಕಾಂಗ್ರೆಸ್ ಇಂದು ನಗರ ಕೇಂದ್ರ ಭಾಗದ ಸಂಚಾರ ವ್ಯವಸ್ಥೆಯನ್ನು ಮೂರರಿಂದ ನಾಲ್ಕು ಗಂಟೆ ಸ್ತಬ್ಧವಾಗುವಂತೆ ಮಾಡಿತ್ತು.

ಆದರೆ, ಕಡೆಯ ಕ್ಷಣಗಳಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ರಾಜಭವನ ಮುತ್ತಿಗೆಗೆ ತೆರಳಿದ ಸಂದರ್ಭ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರ ಕೊರತೆ ಎದ್ದು ಕಾಡಿತು.

ರಾಜ್ಯದ ವಿವಿಧ ಭಾಗಗಳಿಂದ ಹಾಗೂ ನಗರದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಕಾರ್ಯಕರ್ತರು ಸಮಾರಂಭ ಪೂರ್ಣಗೊಳ್ಳುವ ಮುನ್ನವೇ ತೆರಳಿದ್ದು ಕೊರತೆ ಎದುರಾಗಲು ಕಾರಣವಾಯಿತು.

ವಿಶೇಷ ಸ್ತಬ್ಧ ಚಿತ್ರಗಳು, ಎತ್ತಿನ ಗಾಡಿ ಹಾಗೂ ವಿವಿಧ ವೇಷ-ಭೂಷಣಗಳನ್ನು ಧರಿಸಿ ಕಾರ್ಯಕರ್ತರು ಆಗಮಿಸಿ ಪ್ರತಿಭಟನೆ ಗಮನ ಸೆಳೆಯುವಂತೆ ಮಾಡಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ಹಳದಿ ಬಣ್ಣದ ಪೇಟ ಧರಿಸಿ ರಾಜಭವನ ಮುತ್ತಿಗೆಗೆ ಮುಂದಾಗಿ ಗಮನ ಸೆಳೆದರು. ಪ್ರತಿಭಟನೆಯಲ್ಲಿ ಮೊದಲಿಗೆ ಬಂಧನಕ್ಕೊಳಗಾದ ಇವರು ತಮ್ಮ ವೇಷಭೂಷಣಗಳ ಮೂಲಕವೇ ಗಮನ ಸೆಳೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.