ETV Bharat / state

ನಾಳೆ ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್ ಪಕ್ಷಕ್ಕೆ ಸಿಗುತ್ತಾ ಸಿಹಿ!?

ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಫಲಿತಾಂಶ ನಾಳೆ ಹೊರಬೀಳಲಿದ್ದು, ಕಾಂಗ್ರೆಸ್​ ಗೆಲ್ಲುವ ವಿಶ್ವಾಸದಲ್ಲಿದೆ.

congress
congress
author img

By

Published : May 1, 2021, 4:09 PM IST

ಬೆಂಗಳೂರು: ಎರಡು ವಿಧಾನಸಭೆ ಹಾಗೂ ಒಂದು ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಕಾಂಗ್ರೆಸ್ ಪಾಳಯದಲ್ಲಿ ನಿರೀಕ್ಷೆಗಳು ಗರಿಗೆದರಿದೆ.

ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತ ಪಕ್ಷವಾದ ಬಿಜೆಪಿಗೆ ದೊಡ್ಡ ಸವಾಲನ್ನೇ ಒಡ್ಡಿದೆ. ಕಾಂಗ್ರೆಸ್​​ನ ಎಲ್ಲ ನಾಯಕರೂ ಒಟ್ಟಾಗಿ ಈ ಸಾರಿ ಪ್ರಚಾರ ನಡೆಸಿದ್ದಾರೆ. ಹೋದಲ್ಲೆಲ್ಲಾ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈ ಎಲ್ಲಾ ಕಾರಣಕ್ಕೆ ಕಾಂಗ್ರೆಸ್ ನಾಯಕರಿಗೆ ಗೆಲುವಿನ ರುಚಿ ಸಿಗಬಹುದಾ ಎಂಬ ನಿರೀಕ್ಷೆ ಹೆಚ್ಚಾಗಿದೆ. ಅಲ್ಲದೇ ಎರಡು ವಿಧಾನಸಭೆ ಕ್ಷೇತ್ರಗಳೂ ಈ ಹಿಂದೆ ಕಾಂಗ್ರೆಸ್ ಸದಸ್ಯರು ಇದ್ದದ್ದೇ ಎನ್ನುವುದು ವಿಶೇಷ. ಬಸವಕಲ್ಯಾಣ ಶಾಸಕರಾಗಿದ್ದ ಬಿ. ನಾರಾಯಣರಾವ್ ಕೋವಿಡ್​ಗೆ ಬಲಿಯಾಗಿದ್ದರಿಂದ ತೆರವಾಗಿತ್ತು, ಇನ್ನೊಂದು ಮಸ್ಕಿ ಕ್ಷೇತ್ರ. ಇದು ಪ್ರತಾಪ್​ಗೌಡ ಪಾಟೀಲ್ ರಾಜೀನಾಮೆ ನೀಡಿದ್ದರಿಂದ ತೆರವಾಗಿತ್ತು, ಎರಡೂ ಕ್ಷೇತ್ರದಲ್ಲಿಯೂ ಕಾಂಗ್ರೆಸ್​ಗೆ ಉತ್ತಮ ಜನ ಬೆಂಬಲ ಸಿಗುವ ನಿರೀಕ್ಷೆ ಇದೆ. ಮತದಾರರು ನೀಡಿರುವ ತೀರ್ಪು ನಾಳೆ ಲಭಿಸಲಿದ್ದು, ಕೈ ನಾಯಕರಲ್ಲಿ ಆಶಾವಾದ ಹೆಚ್ಚಾಗಿದೆ.

ಇದರ ಜತೆ ಬೆಳಗಾವಿ ಲೋಕಸಭೆ ಕ್ಷೇತ್ರವನ್ನೂ ತಮ್ಮದಾಗಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದು, ಪಕ್ಷದ ಆಂತರಿಕ ವರದಿ ಪ್ರಕಾರ ಸತೀಶ್ ಜಾರಕಿಹೊಳಿ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನು ಮಸ್ಕಿಯಲ್ಲಿ ಪ್ರತಾಪ್​ಗೌಡ ಪಾಟೀಲ್ ಬಗ್ಗೆ ಮತದಾರರ ಒಲವು ಕಡಿಮೆ ಆಗಿದೆ ಎನ್ನಲಾಗುತ್ತಿದ್ದು, ಇದು ತಮ್ಮ ಗೆಲುವಾಗಿ ಪರಿವರ್ತನೆಯಾಗಲಿದೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ. ಬಸವಕಲ್ಯಾಣದಲ್ಲಿ ಈ ಹಿಂದೆ ಸೋಲು ಖಚಿತ ಎಂದು ಭಾವಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಅಲ್ಲಿಯೂ ಗೆಲುವಿನ ಆಸೆ ಚಿಗುರಿದೆ ಎನ್ನಲಾಗುತ್ತಿದೆ. ಸದ್ಯ ಪಕ್ಕಾ ಕಾಂಗ್ರೆಸ್ ಗೆಲುವಿನ ನಿರೀಕ್ಷೆ ಇರಿಸಿಕೊಂಡಿರುವುದು ಮಸ್ಕಿ ಕ್ಷೇತ್ರದ ಮೇಲೆ ಎನ್ನಲಾಗುತ್ತಿದೆ. ಇದಕ್ಕೆ ತಕ್ಕ ಪ್ರಯತ್ನವನ್ನೂ ಪಕ್ಷ ಮಾಡಿದೆ.

ಸಾಕಷ್ಟು ಅಳೆದು ತೂಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ನಾಯಕರು, ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಇರುವ ಆಂತರಿಕ ಭಿನ್ನಾಭಿಪ್ರಾಯ, ಬಂಡಾಯ ಅಭ್ಯರ್ಥಿಗಳು ಕಣದಲ್ಲಿರುವುದನ್ನು ಧನಾತ್ಮಕವಾಗಿ ಬಳಸಿಕೊಂಡಿದ್ದಾರೆ. ಈ ಸಾರಿ ಉಪಚುನಾವಣೆಯಲ್ಲಿ ಪ್ರಚಾರ ಸಂದರ್ಭ ಕಾಂಗ್ರೆಸ್ ನಾಯಕರು ತಮ್ಮನ್ನು ಅಗಲಿದ ನಾಯಕನ ಪರ ಮತ ಕೊಡಿ, ತಮಗೆ ಮೋಸ ಮಾಡಿದ ಅಭ್ಯರ್ಥಿಗೆ ಮತ ನೀಡಬೇಡಿ ಎಂದು ಸ್ಪಷ್ಟವಾಗಿ ಜನರಿಗೆ ಮನವರಿಕೆ ಮಾಡಿಕೊಡುವ ಯತ್ನ ಮಾಡಿದ್ದಾರೆ. ಪ್ರಚಾರ ಸಂದರ್ಭ ಎಲ್ಲಿಯೂ ವೈಯಕ್ತಿಕ ನಿಂದನೆಗೆ ಅವಕಾಶ ನೀಡದೇ ಹಿಂದೆ ತಮ್ಮ ಸರ್ಕಾರ ಇದ್ದಾಗ ಈ ಕ್ಷೇತ್ರಗಳಿಗೆ ನೀಡಿದ ಅನುದಾನ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಕೊಟ್ಟ ಕೊಡುಗೆಯನ್ನು ಜನರಿಗೆ ತಿಳಿಸುವ ಯತ್ನ ಮಾಡುತ್ತಿದ್ದಾರೆ. ವಿಪರೀತ ಬಿಸಿಲು ಇರುವ ಹಿನ್ನೆಲೆ ದಿನವಿಡೀ ಪ್ರಚಾರ ಸಾಧ್ಯವಾಗದ ಹಿನ್ನೆಲೆ ಸಿಕ್ಕ ಅವಕಾಶವನ್ನು ಅವಹೇಳನಕ್ಕೆ ಬಳಸಿಕೊಳ್ಳದೇ, ಅವಕಾಶವಾಗಿ ಪರಿವರ್ತಿಸಿಕೊಳ್ಳುವ ಯತ್ನ ಮಾಡಿದ್ದಾರೆ.

ಮಸ್ಕಿ ವಿಧಾನಸಭೆ ಆಶಾದಾಯಕ:
ರಾಜ್ಯ ಕಾಂಗ್ರೆಸ್ ಪಾಲಿಗೆ ಮಸ್ಕಿ ವಿಧಾನಸಭೆ ಕ್ಷೇತ್ರ ಕೊಂಚ ಆಶಾದಾಯಕವಾಗಿದೆ. ಇಲ್ಲಿ ಪಕ್ಷ ತ್ಯಜಿಸಿದ ಪ್ರತಾಪ್ ಗೌಡ ಮಸ್ಕಿ ವಿರುದ್ಧ ಭರ್ಜರಿಯಾಗಿ ಪಕ್ಷ ಪ್ರಚಾರ ನಡೆಸಿದೆ. ಅಲ್ಲದೇ ಬಿಜೆಪಿ ಹೊಸ ಅಭ್ಯರ್ಥಿಗೆ ಮಣೆಹಾಕಿದೆ. ಅಲ್ಲದೇ ಹಿಂದೆ ಬಿಜೆಪಿ ಅಭ್ಯರ್ಥಿಯಾಗಿ ಅಲ್ಪ ಮತದಿಂದ ಸೋತಿದ್ದ ಮಲ್ಲಿಕಾರ್ಜುನ ಖೂಬಾ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಮೂರು ಸಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರೂ, ಕಳೆದ ಒಂದು ವರ್ಷದಿಂದ ಪ್ರತಾಪ್​​ಗೌಡ ವರ್ಚಸ್ಸು ಕೊಂಚ ಕಡಿಮೆ ಆಗಿದೆ. ಅಲ್ಲದೇ ಕಾಂಗ್ರೆಸ್ ಇಲ್ಲಿ ಗೆಲ್ಲುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಎಲ್ಲ ಪ್ರಯತ್ನವನ್ನೂ ಬಳಸಿಕೊಳ್ಳುತ್ತಾ ಸಾಗಿದೆ. ಒಟ್ಟಾರೆ ಇಲ್ಲಿ ಕಾಂಗ್ರೆಸ್ ನಿರೀಕ್ಷೆ ಹೆಚ್ಚಿದ್ದು, ಗೆಲ್ಲುವ ಅವಕಾಶವಿದೆ ಎಂದು ಸಹ ಹೇಳಲಾಗುತ್ತಿದೆ.

ಬಸವಕಲ್ಯಾಣ ಕಷ್ಟ:
ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕಂಪದ ಅಲೆ ಕೈ ಹಿಡಿಯುತ್ತಿಲ್ಲ. ಅಲ್ಲದೇ ಆಕಾಂಕ್ಷಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರು, ಎಲ್ಲರೂ ಒಟ್ಟಾಗಿ ಕೈ ಅಭ್ಯರ್ಥಿ ಪರ ಪ್ರಚಾರ ಮಾಡಿಲ್ಲ ಎನ್ನಲಾಗಿತ್ತು. ಪ್ರಚಾರಕ್ಕೆ ಮುನ್ನವೇ ಸೋಲು ಬಹುತೇಕ ಖಚಿತ ಎಂದು ನಿರೀಕ್ಷಿಸಿದ್ದ ಕಾಂಗ್ರೆಸ್ ಕಡೆಯ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಆಶಯದೊಂದಿಗೆ ಪ್ರಚಾರ ನಡೆಸಿದೆ. ಆದರೆ, ಕಡೆಯ ಕ್ಷಣದಲ್ಲಿ ಮತದಾರರು ಅನುಕಂಪದ ಜತೆ ಕಾಂಗ್ರೆಸ್ ಮೇಲಿನ ಅಭಿಮಾನಕ್ಕೂ ಕೈ ಹಿಡಿದಿದ್ದಾರೆ ಎಂಬ ಮಾಹಿತಿ ಕಾಂಗ್ರೆಸ್ ಗೆ ಲಭಿಸಿದೆ. ಇದರಿಂದ ಕೊಂಚ ಆಸೆ ಇಲ್ಲಿಯೂ ಚಿಗುರಿದೆ.

ಬೆಳಗಾವಿ ಆಸೆ:
ಬೆಳಗಾವಿ ಲೋಕಸಭೆ ಕ್ಷೇತ್ರ ಗೆಲ್ಲುವ ಉತ್ಸಾಹ ಕಡೆಯ ಕ್ಷಣದಲ್ಲಿ ಕಾಂಗ್ರೆಸ್ ಗೆ ಹೆಚ್ಚಾಗಿದೆ. ಸತೀಶ್ ಜಾರಕಿಹೊಳಿ ಪರ ಪಕ್ಷದ ಎಲ್ಲಾ ನಾಯಕರೂ ಒಂದಾಗಿ ಪ್ರಚಾರ ಮಾಡಿದ್ದು, ಇವರ ಪರವಾಗಿ ಮತದಾರರ ಒಲವು ವ್ಯಕ್ತವಾಗಿದೆ ಎಂಬ ವಿಚಾರ ಪಕ್ಷದ ಆಂತರಿಕ ವರದಿಯ ಮೂಲಕ ಸ್ಪಷ್ಟವಾಗಿದೆ. ಬಿಜೆಪಿಗೆ ಇಲ್ಲಿ ಅನುಕಂಪದ ಅಲೆ ಕೈಕೊಟ್ಟಿದೆ ಎಂಬ ಮಾಹಿತಿ ಕೈ ನಾಯಕರಿಗೆ ಲಭಿಸಿದೆ ಎಂಬ ಮಾಹಿತಿ ಇದ್ದು, ಇದು ಪಕ್ಷದ ಉತ್ಸಾಹ ಇಮ್ಮಡಿಗೊಳಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪ ಮತದಾರರನ್ನು ಪ್ರಭಾವಿಸಿದೆ. ಇದು ಮತವಾಗಿ ಪರಿವರ್ತನೆಗೊಂಡರೆ ಏಕಕಾಲಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ದೊಡ್ಡ ಹೊಡೆತ ಕೊಡಬಹುದು, ಜನರ ವಿಶ್ವಾಸವನ್ನು ಸರ್ಕಾರ ಕಳೆದುಕೊಂಡಿದೆ ಎಂಬುದನ್ನು ಸಾಬೀತುಪಡಿಸಬಹುದು ಎನ್ನುವ ಲೆಕ್ಕಾಚಾರ ಈಗ ಹೆಣೆಯಲಾಗುತ್ತಿದೆ.

ಒಟ್ಟಾರೆ ಬಿಜೆಪಿ ವಿರುದ್ಧ ಜನ ಸಿಡಿದೇಳುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಕನಿಷ್ಠ ಒಂದು ಗೆಲುವಾದರೂ ದಕ್ಕಿದರೆ ಅದಕ್ಕಿಂತ ದೊಡ್ಡ ಸಾಧನೆ ಬೇರೊಂದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.