ಬೆಂಗಳೂರು: ಹೊಂಗಸಂದ್ರ ವಾರ್ಡ್ನಿಂದ ಮೊದಲು ಕೊರೊನಾ ಪಾಸಿಟಿವ್ ಕೇಸ್ ಹಿನ್ನೆಲೆ ಇಂದು ಸಂಜೆಯೊಳಗೆ ಸಂಪೂರ್ಣ ಏರಿಯಾ ಸೀಲ್ ಡೌನ್ ಮಾಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹೇಳಿದ್ದಾರೆ.
ಹೊಂಗಸಂದ್ರ ಪ್ರದೇಶವೂ ಸೂಕ್ಷ್ಮ ಪ್ರದೇಶವಾಗಿದೆ. ಅಲ್ಲಿ ಬಹುತೇಕ ಎಲ್ಲರೂ ವಲಸೆ ಕಾರ್ಮಿಕರಿದ್ದು, ಸೋಂಕಿತನ ಜೊತೆ 150 ಜನ ಪ್ರೈಮರಿ ಸಂಪರ್ಕದಲ್ಲಿ ಇದ್ದವರಿದ್ದಾರೆ. ಸಿ.ವಿ.ರಾಮನ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಎಲ್ಲರನ್ನು ಕ್ವಾರಂಟೈನ್ ನಂತರ ಟೆಸ್ಟ್ ಮಾಡಿ ನೆಗೆಟಿವ್ ಬಂದರೆ ಮೊದಲು ಇದ್ದ ಜಾಗ ಬಿಟ್ಟು ಬೇರೆಡೆಗೆ ಶಿಫ್ಟ್ ಮಾಡುತ್ತೇವೆ. ಒಟ್ಟು 174 ಜನರನ್ನು ಗುರುತಿಸಿ, ಎಲ್ಲರನ್ನು ಟೆಸ್ಟ್ ಮಾಡಲಾಗುವುದು. ಪ್ಯಾಕರ್ಸ್ ಹಾಗೂ ಮೂವರ್ಸ್ನಲ್ಲಿ ಪ್ರಥಮ ಸೋಂಕಿತ ವ್ಯಕ್ತಿ ಕೆಲಸ ಮಾಡುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ.
ಕಂಟೈನ್ಮೆಂಟ್ ಏರಿಯಾಗಳಲ್ಲಿ ಲಾಕ್ಡೌನ್ ಮುಗಿದರೂ ಪಾಸಿಟಿವ್ ಕೇಸ್ ಕಂಡು ಬಂದರೆ ಮತ್ತೆ ಆ ಪ್ರದೇಶದಲ್ಲಿ ಲಾಕ್ಡೌನ್ ಮುಂದುವರೆಸುತ್ತೇವೆ. ಪಾದರಾಯನಪುರ ಹಾಗೂ ಬಾಪೂಜಿ ನಗರದ ಸೀಲ್ ಡೌನ್ ಮೇ 16ರವರೆಗೂ ಮುಂದುವರಿಯಲಿದೆ. ಕ್ವಾರಂಟೈನ್ ಆದ 28 ದಿನಗಳಲ್ಲಿ ಒಂದೇ ಒಂದು ಕೇಸ್ ಪಾಸಿಟಿವ್ ಬಂದ್ರೂ ಸೀಲ್ ಡೌನ್ ಮುಂದುವರೆಸುತ್ತೇವೆ ಎಂದು ಆಯುಕ್ತರು ತಿಳಿಸಿದರು.