ಬೆಂಗಳೂರು: ಇಂದು ಬೆಳಗ್ಗೆ ಮೂರನೇ ವಿಡಿಯೋ ರಿಲೀಸ್ ಮಾಡಿದ್ದ ಸಿಡಿ ಪ್ರಕರಣದ ಯುವತಿ ತನ್ನ ಪರ ವಕೀಲರಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸುವುದಾಗಿ ತಿಳಿಸಿದ್ದರು. ಅಂತಯೇ ಇಂದು ಮಧ್ಯಾಹ್ನ ವಕೀಲರು ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಯುವತಿಯ ಪರವಾಗಿ ದೂರು ನೀಡಿದ್ದಾರೆ.
ಯುವತಿ ದೂರಿನಲ್ಲಿರುವ ಅಂಶಗಳು ಹೀಗಿವೆ..
1. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಮಾಡಿದರು.
2. ವಿಡಿಯೋ ಕರೆ ಮೂಲಕ ಅಶ್ಲೀಲ ಮಾತನಾಡಿ, ನಗ್ನವಾಗಿ ಮಾತನಾಡಲು ಪುಸಲಾಯಿಸಿದರು. ಬಳಿಕ ಕೆಲಸ ಕೊಡಿಸದೆ ವಂಚಿಸಿ ಜೀವ ಬೆದರಿಕೆ ಹಾಕಿದ್ದಾರೆ
3. ಬೆಂಗಳೂರು ನಗರದಲ್ಲಿ ಉದ್ಯೋಗ ಹುಡುಕಿಕೊಂಡು ಬಂದು ನೆಲೆಸಿದ್ದು, ಕಿರುಚಿತ್ರ ಮಾಡುವ ಸಲುವಾಗಿ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಅವರನ್ನು ಒಮ್ಮೆ ಭೇಟಿ ಮಾಡಿದ್ದೆ.
4. ನಂತರ ಅವರು ನನ್ನ ಮೊಬೈಲ್ ನಂಬರ್ ಪಡೆದು ಕರೆ ಮಾಡುವುದಾಗಿ ತಿಳಿಸಿದರು. ಬಳಿಕ ಅವರು ಕರೆ ಮಾಡಿ ನನ್ನ ಬಗ್ಗೆ, ಕುಟುಂಬದ ಬಗ್ಗೆ ವಿಚಾರಿಸಿ ಸಲುಗೆಯಿಂದ ಮಾತನಾಡಲು ಆರಂಭಿಸಿದರು.
5. ನನಗೆ ತಮ್ಮ ಪ್ರಭಾವ ಬಳಸಿ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿದರು. ಇದಕ್ಕೆ ಬದಲಾಗಿ ನೀನು ನನ್ನ ಜೊತೆಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಕೇಳಿದರು. ಅವರು ಕೆಲಸ ಕೊಡಿಸುತ್ತಾರೆ ಎಂದು ನಾನು ನಂಬಿದೆ.
6. ದೆಹಲಿಯ ಕರ್ನಾಟಕ ಭವನದಲ್ಲಿ ಉಳಿದುಕೊಂಡಿದ್ದೇನೆ ಎಂದು ವಿಡಿಯೋ ಕರೆ ಮಾಡಿ ನನ್ನೊಂದಿಗೆ ಲೈಂಗಿಕ ವಿಚಾರಗಳನ್ನು ಮಾತನಾಡಿ ನನಗೆ ಬಟ್ಟೆ ತೆಗೆಯುವಂತೆ ತಿಳಿಸಿದರು. ನಾನು ಅವರು ಹೇಳಿದಂತೆಯೇ ಮಾಡಿದೆ.
7. ನಂತರ ಬೆಂಗಳೂರಿಗೆ ಬಂದು ನನ್ನ ನಿವಾಸಕ್ಕೆ ಬಾ ಎಂದು ಕೆಲಸದ ವಿಚಾರವಾಗಿ ಮಾತನಾಡಬೇಕು ಎಂದು ಕರೆದರು.
8. ನಾನು ಅವರ ಅಪಾರ್ಟ್ಮೆಂಟ್ಗೆ ಹೋದೆ. ಅವರು ನನ್ನೊಂದಿಗೆ ಅಶ್ಲೀಲವಾಗಿ ಮಾತನಾಡಿ, ತಮ್ಮ ರೂಂ ಗೆ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆ ಮಾಡಿದರು. ಇದೇ ರೀತಿ ಎರಡು ಬಾರಿ ಅವರ ಅಪಾರ್ಟ್ಮೆಂಟ್ಗೆ ಕರೆಸಿದ್ದಾರೆ.
9. ಬಳಿಕ ಕೆಲಸದ ಬಗ್ಗೆ ಕೇಳಿದಾಗ ಹಣ ಬೇಕಾದರೆ ಕೇಳು, ಕೆಲಸದ ಕಥೆ ಆಮೇಲೆ ನೋಡೋಣ ಎಂದರು. ನನಗೆ ಹಾಗೂ ನನ್ನ ಕುಟುಂಬದವರಿಗೆ ಜೀವ ಬೆದರಿಕೆ ಇದೆ. ರಕ್ಷಣೆ ಕೊಡಿ ಎಂದು ದೂರಿನಲ್ಲಿ ಯುವತಿ ಮನವಿ ಮಾಡಿದ್ದಾರೆ.