ETV Bharat / state

ಆಂಬ್ಯುಲೆನ್ಸ್‌ ಅಪಘಾತದಿಂದ ರೋಗಿ ಸಾವು ಪ್ರಕರಣ: ಪರಿಹಾರ ನೀಡಲು ಹೈಕೋರ್ಟ್ ಆದೇಶ - ETV Bharat Kannada News

ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಅಪಘಾತದಿಂದ ರೋಗಿ ಪ್ರಾಣ ಕಳೆದುಕೊಂಡ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌, ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಆದೇಶಿಸಿದೆ.

High Court notice
ಹೈಕೋರ್ಟ್ ಸೂಚನೆ
author img

By

Published : Jan 27, 2023, 7:09 AM IST

Updated : Jan 27, 2023, 12:02 PM IST

ಬೆಂಗಳೂರು : ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್‌ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಗಾಯಗೊಂಡು ರೋಗಿ ಸಾವನ್ನಪ್ಪಿದ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ಪಾವತಿಸುವಂತೆ ಹೈಕೋರ್ಟ್ ತಿಳಿಸಿದೆ. ನ್ಯಾಯಮೂರ್ತಿ ಎ.ಆರ್.ಹೆಗ್ಡೆ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿತು. ಪ್ರಕರಣವೇನು?, ಹೈಕೋರ್ಟ್‌ ಹೇಳಿದ್ದೇನು ವಿವರವಾದ ಮಾಹಿತಿ ಇಲ್ಲಿದೆ.

ಹೈಕೋರ್ಟ್‌ ವಿಚಾರಣೆ: ಪ್ರಕರಣ ಸಂಬಂಧದ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ರವಿ ಎಂಬವರ ಸಾವು ಜಾಂಡಿಸ್‌ನಿಂದ ಸಂಭವಿಸಿರುವುದಾಗಿ ಉಲ್ಲೇಖವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗುತ್ತಿತ್ತು. ಅಲ್ಲಿ ಚಿಕಿತ್ಸೆ ಕಲ್ಪಿಸಿದ್ದರೆ ಆತ ಗುಣಮುಖರಾಗುತ್ತಿದ್ದರು. ಆದರೆ, ಜಾಂಡಿಸ್ ಮಾರಣಾಂತಿಕವಲ್ಲ. ರೋಗಿಯನ್ನು ಕರೆದೊಯ್ಯುತ್ತಿರುವ ಬಗ್ಗೆ ತಿಳುವಳಿಕೆಯಿದ್ದರೂ ಚಾಲಕ ಆಂಬ್ಯುಲೆನ್ಸ್ ಅನ್ನು ಅಜಾಗರೂಕತೆಯಿಂದ ಚಲಾಯಿಸಿ ಅಪಘಾತಕ್ಕೆ ಕಾರಣನಾಗಿದ್ದಾನೆ. ಘಟನೆಯಲ್ಲಿ ತೀವ್ರ ಗಾಯಗಳಾಗಿ ಕಾಯಿಲೆಯೂ ಉಲ್ಭಣಗೊಂಡು ರವಿ ಮೃತಪಟ್ಟಿದ್ದಾರೆ. ಹಾಗಾಗಿ, ಆತನ ಸಾವಿಗೂ ಮತ್ತು ಅಪಘಾತಕ್ಕೂ ಸಂಬಂಧವಿದೆ ಎಂದು ಹೈಕೋರ್ಟ್​ ತೀರ್ಮಾನಿಸಿತು. ಮೃತ ರವಿ ಮಾಸಿಕವಾಗಿ ದುಡಿಯುತ್ತಿದ್ದ ವೇತನದ ಅಂದಾಜು ಆಧರಿಸಿ ನ್ಯಾಯಾಧೀಕರಣ ಪ್ರಕಟಿಸಿದ್ದ 5.5 ಲಕ್ಷ ರೂ ಪರಿಹಾರವನ್ನು 4.62 ಲಕ್ಷ ರೂ. ಇಳಿಸಿದ ಹೈಕೋರ್ಟ್, ಆ ಮೊತ್ತವನ್ನು ಎಂಟು ವಾರದಲ್ಲಿ ಮೃತನ ಕುಟುಂಬದವರಿಗೆ ಪಾವತಿಸುವಂತೆ ವಿಮಾ ಕಂಪನಿಗೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಚಿಕ್ಕಮಗಳೂರಿನ ಕಬ್ಬಿನಹಳ್ಳಿ ಗ್ರಾಮದ ನಿವಾಸಿ ರವಿ ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು 2010ರ ಏ.13ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು. ಬೆಳಗಿನ ಜಾವ 2.30ಕ್ಕೆ ವೇಗವಾಗಿ ಸಂಚರಿಸುತ್ತಿದ್ದ ಆಂಬ್ಯುಲೆನ್ಸ್ ಮುಗುಚಿಬಿದ್ದಿತ್ತು. ರವಿ ತೀವ್ರವಾಗಿ ಗಾಯಗೊಂಡಿದ್ದರು. ನಂತರ ಅವರನ್ನು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಪ್ರಕರಣಕ್ಕೆ ಸಂಬಂಧಿಸಿದ ಪರಿಹಾರ ಕ್ಲೇಮಿನ ವಿಚಾರಣೆ ನಡೆಸಿದ್ದ ಮಂಗಳೂರಿನ ಎಂಎಸಿಟಿ, ಮೃತನ ಕುಟುಂಬದವರಿಗೆ ವಾರ್ಷಿಕ ಶೇ.6ರಷ್ಟು ಬಡ್ಡಿದರದೊಂದಿಗೆ 5.50 ಲಕ್ಷ ರೂ. ಪರಿಹಾರ ಪಾವತಿಸುವಂತೆ 2014ರ ಮಾ.3ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ವಿಮಾ ಕಂಪನಿ ಪರ ವಕೀಲರು ವಾದ ಮಂಡಿಸಿ, ನ್ಯುಮೋನಿಯಾ ಹಾಗೂ ಕ್ಷಯರೋಗದಿಂದ ರವಿ ಮೃತಪಟ್ಟಿದ್ದಾರೆಯೇ ಹೊರತು ಅಪಘಾತದಿಂದ ಅಲ್ಲ ಎಂಬುದಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿ ಸ್ಪಷ್ಟಪಡಿಸಿದೆ. ಅದರಂತೆ ಯಾವ ಕಾಯಿಲೆಯಿಂದ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತೋ, ಅದರಿಂದಲೇ ರವಿ ಮೃತಪಟಿದ್ದಾರೆ. ಹೀಗಾಗಿ ಮೃತನ ಸಾವಿಗೂ ಅಪಘಾತಕ್ಕೂ ಸಂಬಂಧವಿಲ್ಲದ ಕಾರಣ ನ್ಯಾಯಾಧೀಕರಣದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.

ಇದನ್ನೂ ಓದಿ :ಕಟಕಟೆಯಲ್ಲಿ ನಿಂತು ಸತ್ಯ ನುಡಿದ ವೃದ್ಧ: ಸೌಹಾರ್ದಯುತವಾಗಿ ಪ್ರಕರಣ ಬಗೆಹರಿಸಿಕೊಳ್ಳುವಂತೆ ಕೋರ್ಟ್‌ ಸಲಹೆ

Last Updated : Jan 27, 2023, 12:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.