ETV Bharat / state

ಹೊಸ ರೂಪದ ಕನ್ನಡ ಪುಸ್ತಕ ನೀತಿ ರಚನೆಗೆ ಸಮಿತಿ ನೇಮಕ: ಕ. ಪು. ಪ್ರಾ ಅಧ್ಯಕ್ಷ ನಂದೀಶ್ ಹಂಚೆ - ಆಧುನಿಕ ಮಾಧ್ಯಮ

ಈ ಹಿಂದೆ ಡಾ. ಸಿದ್ಧಲಿಂಗಯ್ಯ ಅಧ್ಯಕ್ಷತೆಯಲ್ಲಿ ರೂಪುಗೊಂಡಿದ್ದ, ಕನ್ನಡ ಪುಸ್ತಕ ನೀತಿಯನ್ನು ಹೊಸ ದೃಷ್ಟಿಕೋನದಿಂದ ನೋಡುವ ಅವಶ್ಯಕತೆ ಇದೆ ಎಂಬುದರ ಕುರಿತು ಇಂದು ನಡೆದ ಸಭೆಯಲ್ಲಿ ಚರ್ಚಿಸಲಾಯಿತು.

Committee to formulate new Kannada book policy: Nandish Hanche
ಹೊಸ ರೂಪದ ಕನ್ನಡ ಪುಸ್ತಕ ನೀತಿ ರಚನೆಗೆ ಸಮಿತಿ ನೇಮಕ: ಕ ಪು ಪ್ರಾ ಅಧ್ಯಕ್ಷ ನಂದೀಶ್ ಹಂಚೆ
author img

By

Published : Aug 10, 2021, 7:31 PM IST

ಬೆಂಗಳೂರು: ಕನ್ನಡ ಪುಸ್ತಕೋದ್ಯಮದ ಸಮಗ್ರ ಅಭಿವೃದ್ಧಿಗಾಗಿ ಆಧುನಿಕ ಮಾಧ್ಯಮಗಳ ಸವಾಲುಗಳನ್ನು ಒಳಗೊಂಡ ಹೊಸ ಪುಸ್ತಕ ನೀತಿ ರಚನೆಗೆ ನೂತನ ಸಮಿತಿಯೊಂದನ್ನು ರಚನೆ ಮಾಡಲಾಗುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಹೇಳಿದರು.

ಇಂದು ಕನ್ನಡ ಪುಸ್ತಕ ನೀತಿ ಕರಡು ರಚನೆಗಾಗಿ ರೂಪಿಸಲಾದ ಸಮಿತಿ ಸದಸ್ಯರ ಪ್ರಾಥಮಿಕ ಹಂತದ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕನ್ನಡ ಪುಸ್ತಕೋದ್ಯಮ ಇಂದು ಸಂಕ್ರಮಣದ ಕಾಲಘಟ್ಟದಲ್ಲಿದೆ. ಇ-ಬುಕ್, ಆಡಿಯೋ ಬುಕ್, ಅಂತರ್ಜಾಲ ಪುಸ್ತಕ ಪ್ರಕಟಣೆ ಮುಂತಾದವು ಕನ್ನಡ ಪುಸ್ತಕೋದ್ಯಮವನ್ನು ಕಾಗದರಹಿತವನ್ನಾಗಿ ಮಾಡಿದೆ. ಅದು ಪುಸ್ತಕೋದ್ಯಮದ ಅನಿವಾರ್ಯ ರೂಪವಾಗಿ ಪರಿವರ್ತನೆಯಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಪುಸ್ತಕೋದ್ಯಮ ಅದನ್ನೂ ಒಳಗೊಂಡಂತೆ ಬೆಳೆಯಬೇಕಾಗಿರುವ ಅನಿವಾರ್ಯತೆ ಇದೆ. ಹಾಗಾಗಿ ಈ ಹಿಂದೆ ಡಾ. ಸಿದ್ಧಲಿಂಗಯ್ಯ ಅಧ್ಯಕ್ಷತೆಯಲ್ಲಿ ರೂಪುಗೊಂಡಿದ್ದ, ಕನ್ನಡ ಪುಸ್ತಕ ನೀತಿಯನ್ನು ಹೊಸ ದೃಷ್ಟಿಕೋನದಿಂದ ನೋಡುವ ಅವಶ್ಯಕತೆ ಇದೆ ಎಂದರು.

ಈ ಹಿನ್ನೆಲೆಯಲ್ಲಿ ಆಧುನಿಕ ಮಾಧ್ಯಮಗಳ ಸವಾಲುಗಳ ಸಹಿತ ಕನ್ನಡ ಪುಸ್ತಕೋದ್ಯಮದ ಸಮಗ್ರ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ರೂಪದ ಕನ್ನಡ ಪುಸ್ತಕ ನೀತಿ ರಚನೆಗೆ ಕನ್ನಡ ಪುಸ್ತಕ ಪ್ರಾಧಿಕಾರ ಮುಂದಾಗಿದೆ. ಇದರ ಮುಖ್ಯ ಸಲಹೆಗಾರರಾಗಿ ಖ್ಯಾತ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಕೆಲಸ ಮಾಡಲಿದ್ದಾರೆ. ಇವರ ಜೊತೆ ಖ್ಯಾತ ಸಾಹಿತಿ ವಸುಧೇಂದ್ರ ಸಹ ಸಮಿತಿಯಲ್ಲಿರುತ್ತಾರೆ. ಪ್ರಾಥಮಿಕ ಹಂತದಲ್ಲಿ ಕನ್ನಡ ಪ್ರಕಾಶಕರ ಸಂಘದ ಅಧ್ಯಕ್ಷರಾದ ಪ್ರಕಾಶ ಕಂಬತ್ತಳ್ಳಿ, ಕಾರ್ಯದರ್ಶಿಗಳಾದ ನ. ರವಿಕುಮಾರ, ಕರ್ನಾಟಕ ಬರಹಗಾರರು ಮತ್ತು ಲೇಖಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಅಜರ್ಕಳ ಗಿರೀಶ್ ಭಟ್, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶಕುಮಾರ ಎಸ್. ಹೊಸಮನಿ, ಮೈಸೂರು ವಿಶ್ವವಿದ್ಯಾಲಯದ ನಿರ್ದೇಶಕ ವಿಜಯಕುಮಾರಿ ಕರೀಕಲ್ಲು, ಹಂಪಿ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಹೆಚ್.ಡಿ. ಪ್ರಶಾಂತ, ವೈ.ಜಿ. ಮುರಳೀಧರನ್, ಕಾನೂನು ಇಲಾಖೆಯಿಂದ ಕಾರ್ಯರ್ಶಿಗಳ ಪರವಾಗಿ ಎಸ್. ಅರುಣ್, ಇ-ಆಡಳಿತ (ಕೇಂದ್ರ) ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪರವಾಗಿ ಪುಷ್ಪ ಎಂ, ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಕೆ.ರಾಜಕುಮಾರ್ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಮತ್ತು ಸಹಾಯಕ ನಿರ್ದೇಶಕ ಸೌಭಾಗ್ಯ ಭಾಗಹಿಸಿದ್ದರು.

ಸಭೆಯಲ್ಲಿ ಪುಸ್ತಕ ನೀತಿಯ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಶೀಘ್ರದಲ್ಲೇ ಮತ್ತೊಂದು ಪೂರ್ಣ ಪ್ರಮಾಣದ ಸಮಿತಿ ರಚನೆ ಮಾಡಿ ಕನ್ನಡ ಪುಸ್ತಕ ನೀತಿ ರಚನೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಾ. ಎಂ.ಎನ್. ನಂದೀಶ್ ಹಂಚೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.