ಬೆಂಗಳೂರು: ಪೊಲೀಸ್ ಪರೇಡ್ನಲ್ಲಿ ಅಥವಾ ಗೌರವ ವಂದನೆ ನಡೆಯುವಾಗ ಹಿಂದಿಯಲ್ಲಿ ಕೇಳಿಬರುತ್ತಿದ್ದ ಸಾವ್ಧಾನ್ ವಿಶ್ರಾಮ್ ಎಂಬ ಕಮಾಂಡ್ಗಳನ್ನು ಇನ್ಮುಂದೆ ಕನ್ನಡದಲ್ಲೇ ನೀಡಲು ನಗರ ಪೊಲೀಸರು ಮುಂದಾಗಿದ್ದಾರೆ. ಹಿಂದಿ ಬದಲಿಗೆ ಕನ್ನಡದಲ್ಲಿ ಕಮಾಂಡ್ ನೀಡುವ ಪದ್ಧತಿಗೆ ನಾಂದಿ ಹಾಡಿದ್ದಾರೆ.
-
ಕನ್ನಡದ ಮಾತು ಚಂದ ; ಕನ್ನಡದ ಕಮಾಂಡ್ ಗಳು ಇನ್ನೂ ಚಂದ. ಏನಂತಿರಾ .... pic.twitter.com/6ZoIgAjbar
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) September 7, 2023 " class="align-text-top noRightClick twitterSection" data="
">ಕನ್ನಡದ ಮಾತು ಚಂದ ; ಕನ್ನಡದ ಕಮಾಂಡ್ ಗಳು ಇನ್ನೂ ಚಂದ. ಏನಂತಿರಾ .... pic.twitter.com/6ZoIgAjbar
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) September 7, 2023ಕನ್ನಡದ ಮಾತು ಚಂದ ; ಕನ್ನಡದ ಕಮಾಂಡ್ ಗಳು ಇನ್ನೂ ಚಂದ. ಏನಂತಿರಾ .... pic.twitter.com/6ZoIgAjbar
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) September 7, 2023
ಶಾಲೆಗಳಲ್ಲಿ ಸಾಮಾನ್ಯವಾಗಿ ಸಾವ್ಧಾನ್-ವಿಶ್ರಾಮ್ ಎಂಬ ಪದಗಳನ್ನ ಕೇಳಿರುತ್ತೀರಿ.. ಅದೇ ರೀತಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪರೇಡ್ ಅಥವಾ ಗೌರವ ವಂದನೆಯಲ್ಲಿ ಪೊಲೀಸರು ಹಿಂದಿಯಲ್ಲಿ ಕಮಾಂಡ್ ಮಾಡುವುದು ಸಾಮಾನ್ಯ. ಇದೀಗ ಹಳೆಯ ಸಂಪ್ರದಾಯದ ಬದಲಿಗೆ ಕನ್ನಡದಲ್ಲಿ ಕಮಾಂಡ್ ನೀಡುವಂತೆ ನಗರ ಪೊಲೀಸ್ ಆಯುಕ್ತ ದಯಾನಂದ ಸೂಚಿಸಿದ್ದಾರೆ.
ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಪೊಲೀಸ್ ಸಿಬ್ಬಂದಿ ಕನ್ನಡದಲ್ಲೇ ಕಮಾಂಡ್ ನೀಡಲಾಗುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ಯವಾಗುತ್ತಿದೆ. ಕನ್ನಡ ರಾಜೋತ್ಸವಕ್ಕೆ ಒಂದು ತಿಂಗಳಿರುವಾಗಲೇ ಕಾರ್ಯಕ್ರಮಕ್ಕೆ ಪೊಲೀಸರು ತಯಾರಿ ನಡೆಸುತ್ತಿದ್ದಾರೆ.
ಕನ್ನಡ ಮಾತು ಚಂದ.. ಕನ್ನಡದ ಕಮಾಂಡ್ ಇನ್ನು ಚೆಂದ.. ಸಾವ್ಧಾನ್-ವಿಶ್ರಾಮ್ ಬದಲಿಗೆ ಬಹಳಪಡೆ ವಂದನಾ ಶಸ್ತ್ರ ಮತ್ತು ಬಹಳಪಡೆ ವಿಸರ್ಜನೆ ಎಂಬ ಪದ ಬಳಕೆ ಮಾಡಲಾಗಿದೆ. ಎಕ್ಸ್ನಲ್ಲಿ ಕನ್ನಡ ಕಮಾಂಡ್ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಪೊಲೀಸ್ ಕಮೀಷನರ್ ಕನ್ನಡ ಮಾತು ಚೆಂದ.. ಕನ್ನಡದ ಕಮಾಂಡ್ ಇನ್ನು ಚೆಂದ ಎಂಬ ಟ್ಯಾಗ್ ಲೈನ್ ಹಾಕಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.