ETV Bharat / state

ಸಂಸದರು ಸದನದಲ್ಲಿ ಹೇಗಿರಬೇಕು ಎಂದು ಪಕ್ಷಗಳು ನೀತಿ ಸಂಹಿತೆ ಪ್ರಕಟಿಸಬೇಕು: ವೆಂಕಯ್ಯ ನಾಯ್ಡು - ರಾಜ್ಯಸಭೆ ಕಲಾಪಕ್ಕೆ ಸಂಸದರ ಅಡ್ಡಿ

ರಾಜಕೀಯ ಪಕ್ಷಣಗಲು ಸಂಸತ್ತಿನ ಅಧಿವೇಶನದಲ್ಲಿ ತಮ್ಮ ಪಕ್ಷದ ಸಂಸದರುಗಳು ಯಾವ ರೀತಿ ಪಾಲ್ಗೊಳ್ಳುತ್ತಾರೆ ಎನ್ನುವ ಮಾಹಿತಿಯೂ ಸೇರಿದಂತೆ ಸಂಸದರ ಕಾರ್ಯನಿರ್ವಹಣೆ ಕುರಿತು ನೀತಿ ಸಂಹಿತೆ (Code of Conduct) ಪ್ರಕಟಿಸುವುದು ಸೂಕ್ತವೆಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯ ಪಟ್ಟರು.

code-of-conduct-for-members-of-parliament
ವೆಂಕಯ್ಯ ನಾಯ್ಡು
author img

By

Published : Aug 24, 2021, 6:45 PM IST

ಬೆಂಗಳೂರು: ಸಂಸತ್ತಿನ ಅಧಿವೇಶನದ ಕಾರ್ಯಕಲಾಪಗಳಲ್ಲಿ ಪಾಲ್ಗೊಳ್ಳುವಾಗ ತಮ್ಮ ಪಕ್ಷದ ಸಂಸದರ ವರ್ತನೆ ಹೇಗಿರಬೆಕೆನ್ನುವ ಬಗ್ಗೆ ರಾಜಕೀಯ ಪಕ್ಷಗಳು ಮತದಾರರ ಮುಂದೆ ಚುನಾವಣೆ ಪ್ರಣಾಳಿಕೆಯಲ್ಲಿ ನೀತಿ ಸಂಹಿತೆ ಘೋಷಿಸಿಕೊಳ್ಳಬೇಕೆಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಲಹೆ ನೀಡಿದ್ದಾರೆ.

ರಾಜಭವನದಲ್ಲಿ ಮಾಧ್ಯಮದವರ ಜತೆ ಔಪಚಾರಿಕವಾಗಿ ಮಾತನಾಡಿದ ಅವರು, ರಾಜ್ಯಸಭೆ ಕಲಾಪಕ್ಕೆ ಸಂಸದರ ಅಡ್ಡಿ ವಿಚಾರವಾಗಿ ಬೇಸರ ವ್ಯಕ್ತಪಡಿಸಿ, ಸಂಸತ್ತಿನ ಅಧಿವೇಶನದಲ್ಲಿ ತಮ್ಮ ಪಕ್ಷದ ಸಂಸದರು ಯಾವ ರೀತಿ ಪಾಲ್ಗೊಳ್ಳುತ್ತಾರೆ, ಪ್ರತಿಭಟನೆ, ಧರಣಿ, ಸಭಾತ್ಯಾಗ ನಡೆಸುವುದು, ಅಧಿವೇಶನದ ಕಾರ್ಯಕಲಾಪಗಳಿಗೆ ಎಂತಹ ಸಂದರ್ಭಗಳಲ್ಲಿ ಅವಕಾಶ ನೀಡಲಾಗುತ್ತದೆ. ಯಾವ ಸಂದರ್ಭಗಳಲ್ಲಿ ಅಡ್ಡಿಪಡಿಸಲಾಗುತ್ತದೆ ಎನ್ನುವ ಮಾಹಿತಿಯೂ ಸೇರಿದಂತೆ ಸಂಸದರ ಕಾರ್ಯನಿರ್ವಹಣೆ ಕುರಿತು ನೀತಿ ಸಂಹಿತೆ (Code of Conduct) ಪ್ರಕಟಿಸುವುದು ಸೂಕ್ತವೆಂದು ಅಭಿಪ್ರಾಯ ಪಟ್ಟರು.

ಸಂಸತ್ತಿನ ಅಧಿವೇಶನ ಸುಗಮವಾಗಿ, ಅರ್ಥಪೂರ್ಣವಾಗಿ ನಡೆಯಲು ಸಂಸದರುಗಳ ಪಾಲ್ಗೊಳ್ಳುವಿಕೆ ಬಗ್ಗೆ ರಾಜಕೀಯ ಪಕ್ಷಗಳು ನೀತಿ ಸಂಹಿತೆ ರೂಪಿಸಬೇಕು. ಚುನಾವಣೆ ಪ್ರಣಾಳಿಕೆಯಲ್ಲಿ ಅದನ್ನ ಘೋಷಣೆ ಮಾಡಬೇಕು. ಮತದಾರರು ಯಾವ ಪಕ್ಷಗಳ ಸಂಸದರ ನೀತಿ ಸಂಹಿತೆ ಉತ್ತಮ ಎನ್ನುವುದನ್ನು ತೀರ್ಮಾನಿಸಿ ಸಂಸದರನ್ನು ಆಯ್ಕೆ ಮಾಡುವ ಅವಕಾಶ ಇರಬೇಕು. ಆಗ ಸಂಸತ್ತಿನ ಅಧಿವೇಶನವು ಉತ್ತಮ ರೀತಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಬಲಗೊಳ್ಳುತ್ತದೆ ಎಂದು ವೆಂಕಯ್ಯ ನಾಯ್ಡು ತಿಳಿಸಿದರು.

ಸಂಸದರುಗಳ ಪಾಲ್ಗೊಳ್ಳುವಿಕೆ ಸಮರ್ಪಕವಾಗಿದ್ದರೆ, ಅಧಿವೇಶನದ ಕಲಾಪಗಳನ್ನು ನೂರು ದಿನ ನಡೆಸಬಹುದು. ಹಲವು ಸಂದರ್ಭಗಳಲ್ಲಿ ಪ್ರಶ್ನೋತ್ತರ, ಶೂನ್ಯವೇಳೆ, ಗಮನಸೆಳೆಯುವ ಸೂಚನೆಗೆ ಸರ್ಕಾರದ ಉತ್ತರ ಸಿದ್ಧವಾಗಿದ್ದರೂ ಸಂಸದರುಗಳ ಪ್ರತಿಭಟನೆ, ಧರಣಿ, ಗಲಾಟೆಗಳಂತಹ ವರ್ತನೆಯಿಂದಾಗಿ ಅವುಗಳ ಬಗ್ಗೆ ಚರ್ಚಿಸಲು ಸಾಧ್ಯವಾಗುತ್ತಿಲ್ಲ ಎಂದು ವೆಂಕಯ್ಯ ನಾಯ್ಡು ಅಸಹಾಯಕತೆ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.