ETV Bharat / state

ತಾರಾ ಹೋಟೆಲ್​​​ಗಳಿಂದ ಪಾಲಿಕೆ ಬೊಕ್ಕಸಕ್ಕೆ ಕೋಟ್ಯಂತರ ನಷ್ಟ: ಪಾಲಿಕೆ ಕೆಲ ಜಂಟಿ ಆಯುಕ್ತರಿಂದಲೇ ಹಗರಣ..! - ಬಿಬಿಎಂಪಿ

ನಗರದ ತೆರಿಗೆದಾರರು ತಾರಾ ಹೋಟೆಲ್ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ರೂ, ಪಾಲಿಕೆ ಜಂಟಿ ಆಯುಕ್ತರೇ ಅದು ಹೋಟೆಲ್ ಹಾಗೂ ರೆಸ್ಟೋರೆಂಟ್ ಎಂದು ಮಾಡಿ ಪಾಲಿಕೆಯ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ.

bbmp
ಬಿಬಿಎಂಪಿ
author img

By

Published : Aug 10, 2020, 11:52 PM IST

ಬೆಂಗಳೂರು: ಬಿಬಿಎಂಪಿಯ ಕೆಲ ಅಧಿಕಾರಿಗಳಿಂದ ಜನಸಾಮಾನ್ಯರಿಗೊಂದು ನೀತಿ, ಶ್ರೀಮಂತರಿಗೊಂದು ನೀತಿ ಎಂಬುದು ಮತ್ತೆ ಬಯಲಾಗಿದೆ. ಸ್ಟಾರ್ ಹೋಟೆಲ್​​ ಮಾಲೀಕರ ಜೊತೆ, ಪಾಲಿಕೆ ಅಧಿಕಾರಿಗಳು ಶಾಮೀಲಾಗಿ ಬಿಬಿಎಂಪಿ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಮಾಡಿರುವುದು ಬಯಲಾಗಿದ್ದು, ಟೋಟಲ್ ಸ್ಟೇಷನ್ ಸರ್ವೇಯ ವರದಿಯನ್ನು ಇಂದು ಆಯುಕ್ತರು ಪಾಲಿಕೆ ಸಭೆಗೆ ಶ್ವೇತಪತ್ರ ಮಂಡನೆ ಮಾಡಿದ್ದಾರೆ.

ನಗರದ ತೆರಿಗೆದಾರರು ತಾರಾ ಹೋಟೆಲ್ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ರೂ, ಪಾಲಿಕೆ ಜಂಟಿ ಆಯುಕ್ತರೇ ಅದು ಹೋಟೆಲ್ ಹಾಗೂ ರೆಸ್ಟೋರೆಂಟ್ ಎಂದು ಮಾಡಿ ಪಾಲಿಕೆಯ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ.

ನಗರದ ಆಯ್ದ ದೊಡ್ಡ ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೇ ನಡೆಸಿ, ಸ್ವಯಂಘೋಷಿತ ಆಸ್ತಿಗಳನ್ನು ಪುನರ್ ಪರಿಶೀಲಿಸಿದಾಗ, ತಪ್ಪಾಗಿ ಆಸ್ತಿ ಘೋಷಿಸಿರುವುದು ಕಂಡುಬಂದಿದೆ. ಇದಕ್ಕೆ ಪಾಲಿಕೆ ಜಂಟಿ ಆಯುಕ್ತರಿಗೆ ಅಧಿಕಾರ ನೀಡಿ, ನೋಟೀಸ್​​​ ನೀಡಿ ತೆರಿಗೆ ಪಾವತಿಸುವಂತೆ ತಿಳಿಸಿದ್ದಾರೆ. ಆದರೆ ಆಸ್ತಿ ಮಾಲೀಕರು ಅಪೀಲು ಮಾಡಿದಾಗ ಕಾನೂನು ಬಾಹಿರವಾಗಿ ತೆರಿಗೆ ಕಡಿತಗೊಳಿಸಿ, ಕೇವಲ 20 ಕಟ್ಟಡಗಳಿಂದಲೇ 270 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗುವಂತೆ ಮಾಡಿರುವುದು ವರದಿಯಲ್ಲಿ ಬಯಲಾಗಿದೆ.

ಇನ್ನು ಟೋಟಲ್ ಸ್ಟೇಷನ್ ಸರ್ವೇ ನಡೆಸಿಯೂ ವ್ಯತ್ಯಾಸ ಕಂಡುಬಂದ ಕಟ್ಟಡಗಳ ಮಾಲೀಕರಿಗೆ ನೋಟೀಸ್ ನೀಡದೆ, ₹270 ಕೋಟಿಗೂ ಹೆಚ್ಚು ನಷ್ಟ ಆಗಿದೆ. ಮಹದೇವಪುರದ ಎಂಟು ಕಟ್ಟಡದಿಂದ 217 ಕೋಟಿ, ಪೂರ್ವ ವಲಯದಿಂದ 117 ಕೋಟಿ ನಷ್ಟವಾಗಿದೆ ಎಂದು ಪಾಲಿಕೆ ಸದಸ್ಯ ಪದ್ಮನಾಭ ರೆಡ್ಡಿ ಸಭೆಗೆ ತಿಳಿಸಿದರು.

ಈ ಬಗ್ಗೆ ಮಾತನಾಡಿದ ಮಾಜಿ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಶ್ವೇತ ಪತ್ರ ಮಂಡನೆಯಲ್ಲಿ ತೃಪ್ತಿ ತಂದಿದ್ದು, ರಾಯಲ್ ಆರ್ಕೀಡ್ ಹೋಟೆಲ್ ತೆರಿಗೆದಾರರು ತಾರಾ ಹೋಟೆಲ್ ಎಂದು ಸ್ವಯಂಘೋಷಣೆ ಮಾಡಿದ್ರೂ, ಪಾಲಿಕೆ ಜಂಟಿ ಆಯುಕ್ತರು ಹೋಟೆಲ್ ರೆಸ್ಟೋರೆಂಟ್ ಎಂದು ಘೋಷಣೆ ಮಾಡಿದ್ದಾರೆ. ಅವರಿಂದ 21 ಕೋಟಿ 45 ಲಕ್ಷದಷ್ಟು ಪಾಲಿಕೆಗೆ ನಷ್ಟವಾಗಿದೆ. ಏಟ್ರಿಯಾ ಹೋಟೆಲ್​ಗೂ ಅಧಿಕಾರಿಗಳೇ 11 ಕೋಟಿ 52 ಲಕ್ಷ ರೂ. ಕಡಿಮೆ ಮಾಡಿದ್ದಾರೆ ಎಂದರು.

ಸಾಸ್ಕಿನ್ ಟೆಕ್ ಪಾರ್ಕ್ ನಿಂದ 25 ಕೋಟಿ 72 ಲಕ್ಷ ರೂ , ಪ್ಯಾಲೇಸ್ ರಸ್ತೆಯ ರಾಮಲೀಲಾ ಡೆವಲಪರ್ಸ್ ನಿಂದ 1 ಕೋಟಿ 11 ಲಕ್ಷ ರೂ ನಷ್ಟವಾಗಿದೆ. ಲಲಿತ್ ಅಶೋಕ ಹೋಟೆಲ್ 5 ಸ್ಟಾರ್ ಹೋಟೆಲ್ ಆಗಿದ್ದರೂ ಅಲ್ಲ ಎಂದು ಘೋಷಿಸಿ ತ್ರಿ ಸ್ಟಾರ್ ಎನ್ನಲಾಗಿದೆ. ಇದರಿಂದ 3,44,59,330 ರೂ ನಷ್ಟವಾಗಿದೆ. ರೆಸಿಡೆನ್ಸಿ ರಸ್ತೆಯ ಚಾನ್ಸರಿ ಪೆವಿಲಿಯನ್ ಹೋಟೆಲ್ ನಿಂದ 37,27 ಲಕ್ಷ ರೂ, ಈಸ್ಟ್ ವೆಸ್ಟ್ 2 ಕೋಟಿ ರೂ, ಒಬಿರಾಯ್ ಹೋಟೆಲ್ ನಿಂದ 11 ಕೋಟಿ ರೂಪಾಯಿ, ನವೀನ್ ಹೋಟೆಲ್ ನಿಂದ ಮೂರು ಕೋಟಿ ರೂಪಾಯಿ ಪಾಲಿಕೆಗೆ ನಷ್ಟವಾಗಿದೆ ಎಂದು ತಿಳಿಸಿದರು.

ಇಷ್ಟು ಕೇವಲ ಪೂರ್ವ ವಲಯದ್ದಾಗಿದ್ದು, ಪೂರ್ವ ವಲಯವೊಂದರಿಂದಲೇ 116,93,05,038 ರೂಪಾಯಿ ಪಾಲಿಕೆ ನಷ್ಟವಾಗಿದೆ. ಜಂಟಿ ಆಯುಕ್ತರಾಗಿದ್ದ ರವೀಂದ್ರ ಅವರು ಇಷ್ಟೆಲ್ಲ ಹಗರಣ ಮಾಡಿದ್ದಾರೆ. ಅವರನ್ನು ಪಾಲಿಕೆ ಅಧಿಕಾರದಿಂದ ಬಿಡಿಗಡೆಗೊಳಿಸಿ, ಮಾತೃ ಇಲಾಖೆಗೆ ವಾಪಾಸು ಕಳಿಸಲಾಗಿದೆ. ಆದರೆ ಪಾಲಿಕೆಗೆ ಆದ ನಷ್ಟಕ್ಕೆ ಆ ಅಧಿಕಾರಿ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ನೋಟೀಸ್ ಕೊಟ್ಟು ಹಣ ವಸೂಲಿ ಮಾಡಬಹುದಾಗಿದೆ. ಇದಕ್ಕೆ ಪಾಲಿಕೆ ಇಂದೇ ನಿರ್ಣಯ ಕೈಗೊಂಡು ಪಾಲಿಕೆಗಾಗಿರುವ ನಷ್ಟ ಭರಿಸಿಕೊಡಬೇಕು ಎಂದರು.

ಕೇವಲ 17-18 ಕಟ್ಟಡದಿಂದಲೇ 232 ಕೋಟಿ ನಷ್ಟವಾಗಿದೆ. ಕೇವಲ ಅಧಿಕಾರಿಗಳೇ ಅಲ್ಲದೆ ಕೆಲ ರಾಜಕಾರಣಿಗಳ ಪಾಲೂ ಇದೆ. ಬಿಬಿಎಂಪಿ ಸೂಕ್ತ ತನಿಖೆ ಮಾಡಿಸಬೇಕಿದೆ ಎಂದರು.

ಜಂಟಿ ಆಯುಕ್ತರೇ ಇಷ್ಟು ಕಟ್ಟಿ ಎಂದು ಹೇಳಿ, ಅಪೀಲು ಬಂದಾಗ ಇವರೇ ಆ ಹಣ ಕಡಿಮೆ ಮಾಡಿ ನಿರ್ಧಾರ ಮಾಡಿದ್ದಾರೆ. ಆ ಮೂಲಕ ಪಾಲಿಕೆಯ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ. 7 ಕೋಟಿ 19 ಲಕ್ಷ ರೂ ಟೋಟಲ್ ಸ್ಟೇಷನ್ ಸರ್ವೇ ಮಾಡಿರುವವರಿಗೇ ಬಿಲ್ ನೀಡಲಾಗಿದೆ. ಆದ್ರೆ ಈವರೆಗೆ 0 ರೂಪಾಯಿ ತೆರಿಗೆ ಬಂದಿದೆ. ತೆರಿಗೆ ವಂಚನೆ ಮಾಡಿರುವವರು ಕೋರ್ಟ್ ಗೆ ಹೋದರೂ, ಪಾಲಿಕೆ ಕಾನೂನು ಹೋರಾಟ ಮಾಡಿ ತೆರಿಗೆ ಬರುವಂತೆ ಮಾಡಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.