ಬೆಂಗಳೂರು: ಸಮಾಜ ಕಟ್ಟುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುವ ಮಾಧ್ಯಮಗಳನ್ನು ಮುನ್ನೆಡೆಸುವ ಎಲ್ಲಾ ಪತ್ರಕರ್ತ ಬಂಧುಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 'ಪತ್ರಿಕಾ ದಿನ'ದ ಶುಭಾಶಯಗಳನ್ನು ಕೋರಿದ್ದಾರೆ.
ಕನ್ನಡದ ಮೊದಲ ಪತ್ರಿಕೆ 'ಮಂಗಳೂರು ಸಮಾಚಾರ' ಆರಂಭವಾದ ಜುಲೈ 1ನೇ ತಾರೀಕಿನಂದು ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳ ಮೂಲಕ ಪತ್ರಕರ್ತರು ರೂಪಿಸುವ ಸಾಮಾಜಿಕ ಅಭಿಪ್ರಾಯಗಳಿಗೆ ತುಂಬಾ ಮಹತ್ವವಿದೆ. ಪ್ರಜೆಗಳು ಮತ್ತು ಪ್ರಭುತ್ವದ ನಡುವಿನ ಕೊಂಡಿಯಂತೆ ಕೆಲಸ ಮಾಡುವ ಪತ್ರಿಕಾರಂಗ, ಪ್ರಜಾಪ್ರಭುತ್ವವನ್ನು ಬಲಗೊಳಿಸುವ ವಿಚಾರಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದೆ. ಇಂತಹ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿರುವ ಪತ್ರಕರ್ತ ಪರಿವಾರಕ್ಕೆ ಮತ್ತೊಮ್ಮೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
![ಪತ್ರಕರ್ತರಿಗೆ ಶುಭಾಶಯ ಸಲ್ಲಿಸಿದ ಸಿಎಂ ಬಿಎಸ್ವೈ](https://etvbharatimages.akamaized.net/etvbharat/prod-images/kn-bng-01-cm-tweet-patrika-dina-doctors-day-script-7208080_01072020095014_0107f_1593577214_233.jpg)
ಅದೇ ರೀತಿ ಸಾರ್ವಜನಿಕರ ಆರೋಗ್ಯದ ಕಾವಲುಗಾರರಂತೆ ದಿನವಿಡೀ ಕೆಲಸ ಮಾಡುವ ವೈದ್ಯ ಸಮೂಹಕ್ಕೆ ಸಿಎಂ ಬಿಎಸ್ವೈ 'ರಾಷ್ಟ್ರೀಯ ವೈದ್ಯ'ರ ದಿನದ ಶುಭಾಶಯಗಳನ್ನು ಕೋರಿದ್ದಾರೆ.
![ವೈದ್ಯರಿಗೆ ಶುಭಾಶಯ ಸಲ್ಲಿಸಿದ ಸಿಎಂ ಬಿಎಸ್ವೈ](https://etvbharatimages.akamaized.net/etvbharat/prod-images/kn-bng-01-cm-tweet-patrika-dina-doctors-day-script-7208080_01072020095014_0107f_1593577214_585.jpg)
ಆರೋಗ್ಯಪೂರ್ಣ ಸಮಾಜ ಕಟ್ಟುವಲ್ಲಿ ಆಂತರಿಕ ಸೈನಿಕರಂತೆ ಕೆಲಸ ಮಾಡುವ ವೈದ್ಯ ವೃಂದಕ್ಕೆ ಸಮಾಜ ಯಾವಾಗಲೂ ಋಣಿಯಾಗಿರುತ್ತಿದ್ದೆ. ಸಾಂಕ್ರಾಮಿಕ ರೋಗಗಳ ಸವಾಲಿನ ಸನ್ನಿವೇಶಗಳಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿ ತ್ಯಾಗ ದೊಡ್ಡದು. ವೈದ್ಯಕೀಯ ಕ್ಷೇತ್ರಕ್ಕೆ ಭಾರತರತ್ನ ಡಾ. ಬಿ.ಸಿ.ರಾಯ್ ಅವರು ನೀಡಿದ ಕೊಡುಗೆಯ ಸ್ಮರಣಾರ್ಥವಾಗಿ ಅವರ ಜನ್ಮದಿನದಂದು ಆಚರಿಸಲಾಗುವ 'ರಾಷ್ಟ್ರೀಯ ವೈದ್ಯರ ದಿನ'ದ ಸಂದರ್ಭದಲ್ಲಿ ವೈದ್ಯರು ಸಮೂಹಕ್ಕೆ ಹೃತ್ಪೂರ್ವಕ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.