ETV Bharat / state

ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ - ಪ್ರತ್ಯೇಕ ಸಚಿವಾಲಯ

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಪ್ರತ್ಯೇಕ ಸಚಿವಾಲಯಕ್ಕೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

CM Siddaramaiah
ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
author img

By ETV Bharat Karnataka Team

Published : Oct 28, 2023, 5:49 PM IST

Updated : Oct 28, 2023, 7:51 PM IST

ಬೆಂಗಳೂರು: ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಪ್ರತ್ಯೇಕ ಸಚಿವಾಲಯಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ವಿಧಾನಸೌಧದಲ್ಲಿ ನಡೆದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಪ್ರತ್ಯೇಕ ಸಚಿವಾಲಯಕ್ಕೆ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡುವ ಮೂಲಕ ಸಿಎಂ ಚಾಲನೆ ನೀಡಿದರು. ಬಳಿಕ ರಿಮೋಟ್ ಒತ್ತುವುದರ ಮೂಲಕ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನೂತನ ಸಚಿವಾಲಯದ ಕೊಠಡಿಯನ್ನು ಉದ್ಘಾಟಿಸಿದರು.

ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರ ಪ್ರತಿ ಸಾಧಕರಿಗೆ 5 ಲಕ್ಷ ರೂ. ನಗದು ಮತ್ತು 20 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಿದರು. ಎಂಟು ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ''ಮಾಲ್ಮೀಕಿ ಮಹರ್ಷಿ ಎಲ್ಲರಿಗೂ ಸ್ಪೂರ್ತಿಯಾಗಲಿ. ಎಲ್ಲರೂ ಅವರಂತೆ ಸಾಧನೆ ಮಾಡಲಿ. ಅವರ ಸಾಧನೆ ಎಲ್ಲರಿಗೂ ದಾರಿ ದೀಪ ಆಗಲಿ. ನಮ್ಮ ಕಾಂಗ್ರೆಸ್ ಸರ್ಕಾರ ಎಸ್‌ಸಿಎಸ್‌ಪಿ ಟಿಎಸ್‌ಪಿಗೆ 34,000 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಯಾವುದೇ ಸರ್ಕಾರ ಬಂದರೂ ಎಸ್‌ಸಿಎಸ್‌ಪಿ ಟಿಎಸ್‌ಪಿ ಕಾನೂನನ್ನು ಬದಲಾಯಿಸಲು ಸಾಧ್ಯವಿಲ್ಲ. ನಾವು ನಮ್ಮ ಅವಧಿಯಲ್ಲಿ 88,000 ಕೋಟಿ ರೂ. ಖರ್ಚು ಮಾಡಿದ್ದೇವೆ. ಬಿಜೆಪಿ ಇದ್ದಾಗ ಐದು ವರ್ಷದಲ್ಲಿ ಕೇವಲ 25,000 ಕೋಟಿ ರೂ. ಖರ್ಚು ಮಾಡಿದ್ದರು'' ಎಂದು ಟೀಕಿಸಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾಲ್ಮೀಕಿ ಜಯಂತಿಯ ಅಂಗವಾಗಿ ಶಾಸಕರ ಭವನದ ಬಳಿಯಿರುವ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜನಹಳ್ಳಿ ಗುರುಪೀಠದ ವಾಲ್ಮೀಕಿ ಪ್ರಸಂನಾನಂದಪುರಿ ಸ್ವಾಮೀಜಿ , ಸಚಿವ ಕೆ.ಎನ್. ರಾಜಣ್ಣ, ಮಾಜಿ ಸಚಿವ ಆಂಜನೇಯ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.

CM Siddaramaiah
ಎಂಟು ಮಂದಿ ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು

ಎರಡು ಎಸ್ಟಿ ಮೀಸಲು ಕ್ಷೇತ್ರ ಗೆದ್ದು ತರುತ್ತೇವೆ: ಸಚಿವ ಬಿ.ನಾಗೇಂದ್ರ ಮಾತನಾಡಿ, ''28 ಕ್ಷೇತ್ರಗಳಲ್ಲಿ ನಮ್ಮ ಮತ ಮುಖ್ಯವಾಗಿವೆ. ನಾನು ಇಲ್ಲೊಂದು ಮಾತು ಕೊಡ್ತೇನೆ. ರಾಜಣ್ಣ, ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಮ್ಮ ಎರಡು ಎಸ್ಟಿ ಮೀಸಲು ಕ್ಷೇತ್ರ ಗೆದ್ದು ತರುತ್ತೇವೆ'' ಎಂದು ಭರವಸೆ ನೀಡಿದರು.

ಭಾಷಣಕ್ಕೆ ಮಾತ್ರ ಸೀಮಿತ ಆಗಬಾರದು: ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಕಳೆದ 16 ವರ್ಷಗಳಿಂದ ಬೇಡಿಕೆ ಇಡುತ್ತಲೇ ಬಂದಿದ್ದೆವು. ಈಗ ಸಿದ್ದರಾಮಯ್ಯ ಅದನ್ನ ನೀಡಿದ್ದಾರೆ. ಸಮಾಜದ ಏಳ್ಗೆಗಾಗಿ ಸಂಕಲ್ಪ ಮಾಡಬೇಕಿದೆ. ಸಮಾಜದ ಒಗ್ಗಟ್ಟು ಬಹಳ ಮುಖ್ಯ. ಇದು ಭಾಷಣಕ್ಕೆ ಮಾತ್ರ ಸೀಮಿತ ಆಗಬಾರದು. ಹೊರಗಡೆಯೂ ಇದು ಒಗ್ಗಟ್ಟು ಇರಬೇಕು‌ ಬೇರೆ ಸಮಾಜದ ಬಗ್ಗೆ ಹೊಟ್ಟೆಕಿಚ್ಚು ಇರಬಾರದು. ಸ್ವಾಭಿಮಾನದ ಬದುಕನ್ನು ನಾವು ಕಾಣಬೇಕಿದೆ. ಸರ್ಕಾರದ ವತಿಯಿಂದ ಜಯಂತಿ ಆಚರಣೆ ನಡೆಯುತ್ತೆ. ಇದು ಪ್ರತಿ‌ಗ್ರಾಮಕ್ಕೂ ಜಯಂತಿ ನಡೆಯಬೇಕು. ಧ್ವನಿ ಇಲ್ಲದವರು, ಅಸಹಾಯಕರಿಗೆ ನೆರವಾಗಬೇಕು. ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಕ್ಕೆ ಶಿಕ್ಷಣ ಸಿಗಬೇಕು'' ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕವಾಗಿ ಇನ್ನೂ ಮೇಲಕ್ಕೆ ಬಂದಿಲ್ಲ: ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ''ಸಮಸ್ಯೆಗಳಿಗೆ ಪರಿಹಾರ ಜಯಂತಿಯಲ್ಲಿ ಸಿಗಲಿದೆ. ರಾಮಾಯಣದ ಕೊಡುಗೆ ವಾಲ್ಮೀಕಿಯದ್ದು. ಎಂಟು ಜನ ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಜೊತೆ ನಗದು ಕೂಡ ನೀಡಲಾಗಿದೆ‌. ಇದು ಮತ್ತಷ್ಟು ಜನರಿಗೆ ಪ್ರೋತ್ಸಾಹ ನೀಡಬೇಕು. ವಾಲ್ಮೀಕಿ ಇತಿಹಾಸ ಆಳವಾಗಿ ಅಧ್ಯಯನ ನಡೆಸಬೇಕು. ರಾಜಕೀಯವಾಗಿ ಮೇಲುಗೈ ಸಾಧಿಸಿದ್ದೇವೆ. ಎಲ್ಲಾ ಸರ್ಕಾರಗಳು ತಮ್ಮದೇ ಕೊಡುಗೆ ನೀಡಿವೆ. ಹಣ ಸದುಪಯೋಗವಾಗಬೇಕು. ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಅವಕಾಶ ಸಿಗಬೇಕು. ಮೀಸಲಾತಿಯನ್ನು ಹಿಂದಿನ ಸರ್ಕಾರ ಕೊಟ್ಟಿದೆ. ಆದರೆ, ಅದು 9ನೇ ಶೆಡ್ಯೂಲ್​ಗೆ ಸೇರಿಸಬೇಕು'' ಎಂದರು.

ಇದನ್ನೂ ಓದಿ: ಆಪರೇಷನ್ ಕಮಲ ರಾಜ್ಯದಲ್ಲಿ ಸಂಪೂರ್ಣ ವಿಫಲವಾಗಲಿದೆ: ಸಚಿವ ಮಧು ಬಂಗಾರಪ್ಪ

Last Updated : Oct 28, 2023, 7:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.