ಬೆಂಗಳೂರು: ಕೊಡಗು ಪ್ರವಾಸದಲ್ಲಿದ್ದಾಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣ ಸಂಬಂಧ ಘಟನೆ ಕುರಿತು ಸಮಗ್ರವಾದ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ. ಪ್ರತಿಪಕ್ಷ ನಾಯಕರಿಗೆ ಅಗತ್ಯ ಭದ್ರತೆ ಕಲ್ಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್ ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಟ್ಟೆ ಪ್ರಕರಣ ಬಗ್ಗೆ ಸಿದ್ದರಾಮಯ್ಯನವರ ಜತೆ ಮಾತಾಡಿದೆ. ಅವರಿಗೆ ಜೀವ ಬೆದರಿಕೆ ಇದೆ ಅಂತ ಮಾಧ್ಯಮಗಳಲ್ಲಿ ಸುದ್ದಿ ಬಂತು. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ನಿಮಗೆ ಯಾರಿಂದಾದರೂ ಬೆದರಿಕೆ ಕರೆ ಬಂದಿದೆಯಾ ಅಂತ ವಿಚಾರಿಸಿದ್ದೇನೆ. ಪ್ರಕರಣದ ಕುರಿತು ಎಲ್ಲ ಮಾಹಿತಿ ಪಡೆದುಕೊಂಡಿದ್ದು, ವಿಪಕ್ಷ ನಾಯಕರಿಗೆ ಎಲ್ಲ ರೀತಿಯ ಭದ್ರತೆ ಕೊಡುವಂತೆ ಡಿಜಿಪಿಗೆ ಸೂಚನೆ ನೀಡಿದ್ದೇನೆ. ಕಾನೂನು ಸುವ್ಯವಸ್ಥೆ ಕಾಪಾಡುವಂತೆಯೂ ನಿರ್ದೇಶನ ನೀಡಿದ್ದೇನೆ ಎಂದರು.
ಧರ್ಮ ವಿಭಜನೆ ಕುರಿತ ಸಿದ್ದರಾಮಯ್ಯ ಅವರ ಪಶ್ಚಾತ್ತಾಪ ಬಗ್ಗೆ ಇಂದು ಮಾತನಾಡಲ್ಲ, ನಾಳೆ ಮಾತನಾಡುತ್ತೇನೆ ಎಂದ ಸಿಎಂ, ಹಾಗೆಯೇ ಹೈಕೋರ್ಟ್‌ನಿಂದ ಎಸಿಬಿ ರದ್ದು ಕುರಿತ ಸರ್ಕಾರದ ನಡೆ ವಿಚಾರದ ಬಗೆಗೂ ನಾಳೆ ಪ್ರತಿಕ್ರಿಯಿಸುವುದಾಗಿ ತಿಳಿಸಿದರು.
ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ: ಕಾಂಗ್ರೆಸ್ ನಾಯಕರ ಪ್ರತಿಭಟನೆ