ETV Bharat / state

ನೆರೆ ಸಂತ್ರಸ್ತರಿಂದ ಕಮಿಷನ್ ವಸೂಲಿ ಆರೋಪ: ಶೀಘ್ರ ಕ್ರಮಕ್ಕೆ ಡಿಸಿಗಳಿಗೆ ಸಿಎಂ ಖಡಕ್​ ಸೂಚನೆ

ಸಂತ್ರಸ್ತರಿಂದ ಯಾರ್ಯಾರು ಕಮಿಷನ್ ಪಡೆದಿದ್ದಾರೆ ಪತ್ತೆ ಹಚ್ಚಿ. ಮೊದಲು ಕಮಿಷನ್ ಪಡೆದವರಿಂದಲೇ ಹಣ ವಾಪಸ್ ಕೊಡಿಸಬೇಕು, ನೆರೆ ಪರಿಹಾರ ಕೊಡಲು ಕಮಿಷನ್ ಪಡೆಯುವವರ ವಿರುದ್ಧ ಪೊಲೀಸರಿಗೆ ದೂರು ಕೊಡುವಂತೆ ಡಿಸಿಗಳಿಗೆ‌ ಸಿಎಂ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ.

ಸಿಎಂ
author img

By

Published : Nov 12, 2019, 1:28 PM IST

ಬೆಂಗಳೂರು: ನೆರೆಹಾನಿ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ಸೌಲಭ್ಯ ಕಲ್ಪಿಸಲು ಸರ್ಕಾರದ ನೆರವು ಕೊಡಿಸಲು ಯಾರಾದರೂ ಕಮಿಷನ್ ಅಥವಾ ಲಂಚ ಪಡೆದರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೆಲ ಗ್ರಾಮ ಪಂಚಾಯತ್ ಸದಸ್ಯರು, ರಾಜಕೀಯ ಪಕ್ಷಗಳ ಕೆಲವು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಕಮಿಷನ್ ಪಡೆಯುತ್ತಿರುವ ಆರೋಪಗಳು ಕೇಳಿಬಂದಿವೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸಿಎಂ ಕ್ಲಾಸ್ ತೆಗೆದುಕೊಂಡಿದ್ದಾರೆ. ದೂರವಾಣಿ ಮೂಲಕ ಮಾತನಾಡಿ ಸಂತ್ರಸ್ತರು ಇನ್ನೂ ನರಳುವಂತೆ ಮಾಡಬೇಡಿ. ಸರ್ಕಾರದ ಪರಿಹಾರ ಯಾವುದೇ ತೊಡಕಿಲ್ಲದೇ ಸಂತ್ರಸ್ತರಿಗೆ ತಲುಪುವಂತಾಗಲಿ ಎಂದು ಡಿಸಿಗಳಿಗೆ ಖಡಕ್ ಆಗಿ ಹೇಳಿದ್ದಾರೆ.

ನೆರೆ ಸಂತ್ರಸ್ತರಿಂದ ಕಮಿಷನ್ ಅಥವಾ ಲಂಚ ಪಡೆಯುತ್ತಿರುವವರ ವಿರುದ್ಧ ಸಿಎಂ ಬಿಎಸ್​ವೈ ಆಕ್ರೋಶಗೊಂಡಿದ್ದು, ನೀವು ಏನ್‌ ಮಾಡುತ್ತಿದ್ದೀರಾ? ಇಂಥದ್ದನ್ನೆಲ್ಲ ಗಮನಿಸಿ ಕ್ರಮ ಕೈಗೊಳ್ಳಿ. ಕ್ರಮ ಕೈಗೊಂಡು ವರದಿ ಕಳಿಸಿಕೊಡಿ‌ ಎಂದು ನೆರೆ, ಅತಿವೃಷ್ಟಿ ಪೀಡಿತ ಜಿಲ್ಲೆಗಳ ಡಿಸಿಗಳಿಗೆ ಸಿಎಂ ತಾಕೀತು ಮಾಡಿದ್ದಾರೆ.

ಸಂತ್ರಸ್ತರಿಂದ ಯಾರ್ಯಾರು ಕಮಿಷನ್ ಪಡೆದಿದ್ದಾರೆ ಅನ್ನೋದನ್ನು ಪತ್ತೆ ಹಚ್ಚಿ, ಮೊದಲು ಕಮಿಷನ್ ಪಡೆದವರಿಂದಲೇ ಹಣ ವಾಪಸ್ ಕೊಡಿಸಬೇಕು. ನೆರೆ ಪರಿಹಾರ ಕೊಡಲು ಕಮಿಷನ್ ಪಡೆಯುವವರ ವಿರುದ್ಧ ಪೊಲೀಸರಿಗೆ ದೂರು ಕೊಡುವಂತೆ ಡಿಸಿಗಳಿಗೆ‌ ಕಟ್ಟು ನಿಟ್ಟಿನ ಸಂದೇಶ ರವಾನಿಸಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳಿಂದ‌ ತಿಳಿದುಬಂದಿದೆ.

Intro:

ಬೆಂಗಳೂರು: ನೆರೆಹಾನಿ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ಸೌಲಭ್ಯ ಕಲ್ಪಿಸಲು ಸರ್ಕಸರದ ನೆರವು ಕೊಡಿಸಲು ಯಾರಾದರೂ ಕಮೀಷನ್ ಅಥವಾ ಲಂಚ ಪಡೆದುಕೊಂಡರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೆಲ ಗ್ರಾಮ ಪಂಚಾಯತ್ ಸದಸ್ಯರು, ರಾಜಕೀಯ ಪಕ್ಷಗಳ ಸ್ಥಳೀಯ ಕೆಲವು ಮುಖಂಡರು ಹಾಗು ಕಾರ್ಯಕರ್ತರ ಮೇಲೆ ಕಮೀಷನ್ ಪಡೆಯುತ್ತಿರುವ ಆರೋಪ ಕೇಳಿಬಂದಿದ್ದು,ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸಿಎಂ ಕ್ಲಾಸ್ ತೆಗೆದುಕೊಂಡಿದ್ದಾರೆ. ದೂರವಾಣಿ ಮೂಲಕ ಮಾತನಾಡಿ
ಸಂತ್ರಸ್ತರು ಇನ್ನೂ ನರಳುವಂತೆ ಮಾಡಬೇಡಿ
ಸರ್ಕಾರದ ಪರಿಹಾರ ಯಾವುದೇ ತೊಡಕಿಲ್ಲದೇ ಸಂತ್ರಸ್ತರಿಗೆ ತಲುಪುವಂತಾಗಲಿ ಎಂದು ಡಿಸಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ನೆರೆ ಸಂತ್ರಸ್ತರಿಂದ ಕಮೀಷನ್ ಪಡೆಯುತ್ತಿರುವ, ಲಂಚ ಪಡೆಯುತ್ತಿರುವವರ ವಿರುದ್ಧ ಸಿಎಂ ಬಿಎಸ್ವೈ ಆಕ್ರೋಶಗೊಂಡಿದ್ದು, ನೀವು ಏನ್‌ ಮಾಡುತ್ತಿದ್ದೀರಾ? ಇಂಥದ್ದನ್ನೆಲ್ಲ ಗಮನಿಸಿ ಕ್ರಮ ಕೈಗೊಳ್ಳಿ, ಕ್ರಮ ಕೈಗೊಂಡು ವರದಿ ಕಳಿಸಿಕೊಡಿ‌ ಎಂದು ನೆರೆ, ಅತಿವೃಷ್ಟಿ ಪೀಡಿತ ಜಿಲ್ಲೆಗಳ ಡಿಸಿಗಳಿಗೆ ಸಿಎಂ ಸೂಚಿಸಿದ್ದಾರೆ.

ಸಂತ್ರಸ್ತರಿಂದ ಯಾರ್ಯಾರು ಕಮೀಷನ್ ಪಡೆದಿದ್ದಾರೆ ಪತ್ತೆ ಹಚ್ಚಿ ಮೊದಲು ಕಮೀಷನ್ ಪಡೆದವರಿಂದಲೇ ಪಡೆದ ಹಣ ವಾಪಸ್ ಕೊಡಿಸಬೇಕು, ನೆರೆ ಪರಿಹಾರ ಕೊಡಲು ಕಮೀಷನ್ ಪಡೆಯೋರ ವಿರುದ್ಧ ಪೊಲೀಸ್ ದೂರು ಕೊಡುವಂತೆ ಡಿಸಿಗಳಿಗೆ‌ ಕಟ್ಟು ನಿಟ್ಟಿನ ಸಂದೇಶ ರವಾನಿಸಿದ್ದಾರೆ ಎಂದು ಸಿಎಂ ಕಚೇರಿ ಮೂಲಗಳಿಂದ‌ ತಿಳಿದುಬಂದಿದೆ.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.