ETV Bharat / state

ಗ್ರಾಮ ಒನ್ ಯೋಜನೆ ಯಶಸ್ವಿ ಅನುಷ್ಠಾನ; ಕೆಲ ಸೂಚನೆ ನೀಡಿದ ಸಿಎಂ

ಮಹತ್ವಾಕಾಂಕ್ಷೆಯ ಗ್ರಾಮ ಒನ್ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಸಿಎಂ ಬೊಮ್ಮಾಯಿ ಕೆಲ ಸೂಚನೆಗಳನ್ನು ನೀಡಿದ್ದಾರೆ. ಅವುಗಳು ಯಾವುವು ಎಂಬುದರ ಬಗ್ಗೆ ಇಲ್ಲಿದೆ ಡೀಟೇಲ್ಸ್​​​.

Gram one project, CM bommai tips on Gram one project, Gram one project news, Bangalore news, ಗ್ರಾಮ ಒನ್ ಯೋಜನೆ, ಗ್ರಾಮ ಒನ್ ಯೋಜನೆಗೆ ಸಿಎಂ ಬೊಮ್ಮಾಯಿ ಸಲಹೆ, ಗ್ರಾಮ ಒನ್ ಯೋಜನೆ ಸುದ್ದಿ, ಬೆಂಗಳೂರು ಸುದ್ದಿ,
ಗ್ರಾಮ ಒನ್ ಯೋಜನೆ ಯಶಸ್ವಿ ಅನುಷ್ಠಾನಕ್ಕಾಗಿ ಕೆಲ ಸೂಚನೆ ನೀಡಿದ ಸಿಎಂ
author img

By

Published : Jan 29, 2022, 1:42 PM IST

ಬೆಂಗಳೂರು: ಜ.26ರಂದು ಬೊಮ್ಮಾಯಿ ಸರ್ಕಾರ ರಾಜ್ಯಾದ್ಯಂತ ಗ್ರಾಮ ಒನ್ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಕೆಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಎಂ ತಿಳಿಸಿದ್ದಾರೆ.

ಸಿಎಂ ಸೂಚನೆ ಏನು?:

  • 2022ರ ಫೆಬ್ರವರಿ ಅಂತ್ಯದೊಳಗೆ ರಾಜ್ಯದ ಎಲ್ಲ 30 ಜಿಲ್ಲೆಗಳಿಗೆ ಈ ಯೋಜನೆ ಕಡ್ಡಾಯವಾಗಿ ವಿಸ್ತರಿಸಬೇಕಾಗಿದೆ.
  • ತಹಶೀಲ್ದಾರ್​ ಕಚೇರಿ ಮತ್ತು ಅಟಲ್ ಜನಸ್ನೇಹಿ ಕೇಂದ್ರಗಳಿಗೆ ಅಗತ್ಯ ಇರುವ ಕಂಪ್ಯೂಟರ್‌ಗಳು, ಇತರ ಮೂಲಸೌಕರ್ಯಗಳು ಮತ್ತು ಮಾನವ ಸಂಪನ್ಮೂಲವನ್ನು ಇ - ಆಡಳಿತ ಇಲಾಖೆ ಒದಗಿಸಬೇಕು. ಇದರಿಂದ ಗ್ರಾಮ ಒನ್‌ನಿಂದ ಸ್ವೀಕರಿಸಿದ ಅರ್ಜಿಗಳ ತ್ವರಿತ ವಿಲೇವಾರಿ ಮಾಡಲು ಸಾಧ್ಯವಾಗಲಿದೆ. ಇ - ಆಡಳಿತ ಇಲಾಖೆ ಕಂದಾಯ ಇಲಾಖೆಯೊಂದಿಗೆ ಚರ್ಚಿಸಿ ಗಣಕಯಂತ್ರ ಹಾಗೂ ಇತರ ಅವಶ್ಯಕತೆಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು.
  • ಆಯಾ ಕಾಲಕ್ಕೆ ಸ್ವೀಕರಿಸಲ್ಪಟ್ಟ ಎಲ್ಲ ಅರ್ಜಿಗಳನ್ನು ಪರಿಶೀಲಿಸುವುದು ಹಾಗೂ ಅವುಗಳನ್ನು ವಿಲೇವಾರಿ ಮಾಡುವ ಕೆಲಸವನ್ನಷ್ಟೇ ಅಟಲ್ ಜನಸ್ನೇಹಿ ಕೇಂದ್ರವು ನಿರ್ವಹಿಸಬೇಕು. ಅರ್ಜಿಗಳ ಸ್ವೀಕೃತಿ ಹಾಗೂ ಸೇವಾ ವಿತರಣೆ ಕಾರ್ಯಗಳನ್ನು ಗ್ರಾಮಒನ್ ಕೇಂದ್ರಗಳಿಂದ ನಿರ್ವಹಿಸಬೇಕು.
  • ಇ - ಆಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಇಡಿಸಿಎಸ್ ನಿರ್ದೇಶಕರು ದೈನಂದಿನ ಆಧಾರದ ಮೇಲೆ ಯೋಜನೆ ಪರಿಶೀಲಿಸಬೇಕು ಮತ್ತು ಜಿಲ್ಲಾಧಿಕಾರಿಗಳು ವರದಿ ಮಾಡುವ ಯಾವುದೇ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರವನ್ನು ತ್ವರಿತವಾಗಿ ನೀಡಬೇಕು.
  • ಕೇವಲ ಸಕಾಲ ಕಾಲಮಿತಿಯೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡುವ ಸಲುವಾಗಿ ಅಧಿಕಾರಿಗಳು ಅರ್ಜಿಗಳನ್ನು ಪದೇ ಪದೆ ತಿರಸ್ಕರಿಸುತ್ತಿರುವುದನ್ನು ಹಲವು ಸಂದರ್ಭಗಳಲ್ಲಿ ಗಮನಿಸಲಾಗಿದೆ. ಈ ಉದ್ದೇಶಕ್ಕಾಗಿ ಸಕಾಲ ಕಾಲಮಿತಿಯ ಅನುಸರಣೆಗಾಗಿ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಅರ್ಜಿಗಳನ್ನು ತಿರಸ್ಕರಿಸಬಾರದು.
  • ಅರ್ಜಿಯ ತಿರಸ್ಕರಣೆಗೆ ಕಾರಣಗಳನ್ನು ಎಲ್ಲ ಇಲಾಖೆಗಳ ಡ್ರಾಪ್‌ಡೌನ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು ಮತ್ತು ಇಂತಹ ತಿರಸ್ಕರಿಸುವ ಕಾರಣಗಳ ಪಟ್ಟಿಯ ಸಮಂಜಸತೆಯನ್ನು ಇ-ಆಡಳಿತ ಇಲಾಖೆ ಅನುಮೋದಿಸುತ್ತದೆ. ಕ್ಷುಲ್ಲಕ ಕಾರಣಗಳ ಆಧಾರದ ಮೇಲೆ ಅರ್ಜಿಗಳನ್ನು ತಿರಸ್ಕರಿಸುವುದನ್ನು ಈ ವ್ಯವಸ್ಥೆ ಖಚಿತಪಡಿಸುತ್ತದೆ.
  • ಇ-ಆಡಳಿತ ಇಲಾಖೆ ಸೇವೆ ಒದಗಿಸುತ್ತಿರುವ ಎಲ್ಲ ಇಲಾಖೆಗಳಿಗೆ ತಿರಸ್ಕೃತ ಪಕರಣಗಳ ಎಂ.ಐ.ಎಸ್ ವರದಿಯನ್ನು ಹಾಗೂ ಈ ತಿರಸ್ಕೃತ ಅರ್ಜಿಗಳನ್ನು ರಾಂಡೆಮ್ ಆಗಿ ಪರಿಶೀಲಿಸಲು ಸಾಫ್ಟ್‌ವೇರ್​ನಲ್ಲಿ ಅವಕಾಶ ಕಲ್ಪಿಸಬೇಕು. ಸದರಿ ವ್ಯವಸ್ಥೆಯ ಬಳಸಿ ಜಿಲ್ಲಾಧಿಕಾರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ತಿರಸ್ಕೃತ ಅರ್ಜಿಗಳನ್ನು ಪರಿಶೀಲಿಸಿ ಅವಶ್ಯಕತೆ ಇದ್ದಂತಹ ಸಂದರ್ಭದಲ್ಲಿ ತಪ್ಪಾಗಿ ತಿರಸ್ಕೃತ ಮಾಡುತ್ತಿರುವ ಅಧಿಕಾರಿ / ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ವಹಿಸಬೇಕು.
  • ತಿರಸ್ಕೃತಗೊಂಡ ಪ್ರಕರಣಗಳನ್ನು ಅಧಿಕಾರಿಗಳು ಹಾಗೂ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಯುವ ಎಂಪಿಕ್ / ಕೆಡಿಪಿ ಸಭೆಯಲ್ಲಿ ಪರಿಶೀಲಿಸಬೇಕು.
  • ಇ-ಆಡಳಿತ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ವಿವಿಧ ಇಲಾಖಾ ಮುಖ್ಯಸ್ಥರು, ಜಿಲ್ಲಾ ಮುಖ್ಯಸ್ಥರು ಮತ್ತು ನಿರ್ವಾಹಕರು ಸೇರಿದಂತೆ ಕೆಳಮಟ್ಟದಲ್ಲಿ ಪ್ರತಿದಿನವೂ ಸಂವಾದ ನಡೆಸುತ್ತಾರೆ.
  • ಎಲ್ಲ ಗ್ರಾಮಒನ್ ಆಪರೇಟರ್‌ಗಳಿಗೆ ಅನ್ವಯಿಸುವಂತೆ ಇ-ಆಡಳಿತ ಇಲಾಖೆಯಿಂದ ನೀತಿ ಸಂಹಿತೆ ಪ್ರಕಟಿಸಬೇಕು. ಇದನ್ನು ಎಲ್ಲ ಆಪರೇಟರ್‌ಗಳು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಎಲ್ಲಾ ಜಿಲ್ಲಾಧಿಕಾರಿಗಳು ಖಚಿತಪಡಿಸಬೇಕು.
  • ತಾಂತ್ರಿಕ, ಆಡಳಿತಾತ್ಮಕ ಮತ್ತು ಕಾನೂನು ಸಮಸ್ಯೆಗಳ ಬಗ್ಗೆ ಗ್ರಾಮ ಒನ್ ಆಪರೇಟರ್​​​ಗೆ ತರಬೇತಿ ನೀಡಬೇಕು. ಆಪರೇಟರ್‌ಗಳು ಐಟಿ ವ್ಯವಸ್ಥೆಯನ್ನು ತಾಂತ್ರಿಕವಾಗಿ ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ತಿಳಿದಿರಬೇಕು ಮತ್ತು ಸೇವೆಗಳನ್ನು ವಿತರಿಸುವ ಆಡಳಿತಾತ್ಮಕ ಕಾರ್ಯವಿಧಾನದ ಬಗ್ಗೆ, ಅವರುಗಳಿಗೆ ತಿಳಿವಳಿಕೆ ಇರಬೇಕು. ಅಂತಹ ಸೇವೆಗಳನ್ನು ಒದಗಿಸುವ ಕಾನೂನು ಪರಂತುಕಗಳ ಬಗ್ಗೆಯೂ ಸಹ ತಿಳಿವಳಿಕೆ ಇರಬೇಕು. ಇದು ಅವರಿಗೆ ಹೆಚ್ಚು ಪರಿಣಾಮಕಾರಿಯಾಗಿರಲು ಸಹಾಯ ಮಾಡುತ್ತದೆ ಹಾಗೂ ಗ್ರಾಮ ಒನ್ ಹೆಚ್ಚು ಜನಪ್ರಿಯ ಮತ್ತು ಯಶಸ್ವಿಯಾಗುತ್ತದೆ. ಇದಕ್ಕೆ ಇ - ಆಡಳಿತ ಇಲಾಖೆ ಸೂಕ್ತ ಮಾರ್ಗಸೂಚಿ ಹಾಗೂ ಕಾರ್ಯವಿಧಾನವನ್ನು ಹೊರತರಬೇಕು.
  • ಗ್ರಾಮ ಒನ್ ಆಪರೇಟರ್‌ಗಳಿಗೆ ಕಾಲಕಾಲಕ್ಕೆ ತರಬೇತಿಗಳನ್ನು ಆಯೋಜಿಸಬೇಕು ಮತ್ತು ಅವರ ಪ್ರಾವೀಣ್ಯತೆಯ ಮೇಲೆ ನಿಯಮಿತವಾಗಿ ಅವರುಗಳನ್ನು ಪರೀಕ್ಷಿಸಬೇಕು. ಅಸಮರ್ಥ ಗ್ರಾಮಜನ್ ಆಪರೇಟರ್‌ಗಳ ಪರವಾನಗಿ ರದ್ದುಗೊಳಿಸಲು ಕ್ರಮವಹಿಸಬೇಕು.
  • ನಾನು ವಾರಕ್ಕೊಮ್ಮೆ ಗ್ರಾಮಒನ್ ಆವರೇಟರ್‌ಗಳ, ತಹಶೀಲ್ದಾರರುಗಳ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಪರಿಶೀಲನಾ ಸಭೆಗಳನ್ನು ನಡೆಸುತ್ತೇನೆ. ಇ-ಆಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಇವರು ಕನಿಷ್ಠ ಮುಂದಿನ 2 ತಿಂಗಳವರೆಗೆ ಪ್ರತಿ ವಾರ ಸಭೆಯನ್ನು ಆಯೋಜಿಸುವ ಬಗ್ಗೆ ಖಚಿತಪಡಿಸಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.