ETV Bharat / state

ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ.ಗಳ ಅನುದಾನ ಬಿಡುಗಡೆ: ಸಿಎಂ ಬೊಮ್ಮಾಯಿ - ಈಟಿವಿ ಭಾರತ ಕನ್ನಡ

ರಾಜ್ಯ ಬಜೆಟ್​ನಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ. ಅನುದಾನ - ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಘೋಷಣೆ - ಕನ್ನಡ ಸಾಹಿತ್ಯವನ್ನು ಪ್ರಶಂಸಿಸಿದ ಬೊಮ್ಮಾಯಿ

Gadinada Chethana State Award
ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ
author img

By

Published : Feb 3, 2023, 10:42 AM IST

Updated : Feb 3, 2023, 10:54 AM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮಾತನಾಡುತ್ತಿರುವುದು

ಬೆಂಗಳೂರು: ಮಾರ್ಚ್ ಅಂತ್ಯದೊಳಗೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಿದ್ದು, ಈ ಬಾರಿಯ ಬಜೆಟ್​ನಲ್ಲಿಯೂ 100 ಕೋಟಿ ರೂ. ಅನುದಾನ ನೀಡಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಘೋಷಿಸಿದರು. ಕುಮಾರಪಾರ್ಕ್​ನಲ್ಲಿರುವ ಗಾಂಧಿ ಭವನದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗಡಿಭಾಗದಲ್ಲಿ ಶಿಕ್ಷಣ, ಕೈಗಾರಿಕೆ, ಮೂಲ ಸೌಕರ್ಯ, ಕನ್ನಡ ಭಾಷಾ ಅಭಿವೃದ್ಧಿಗಳ ಬಗ್ಗೆ ಕೆಲಸ ಮಾಡುವ ಅವಶ್ಯಕತೆ ಇದ್ದು, ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಇದೇ ವರ್ಷದ ಮಾರ್ಚ್ 31ರೊಳಗೆ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಈ ಅನುದಾನಕ್ಕೆ ಕ್ರಿಯಾಯೋಜನೆಯನ್ನು ಸಿದ್ದಪಡಿಸಿ ಸಲ್ಲಿಸಲು ಸೂಚಿಸಿದರು. ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಈಗಾಗಲೇ 25 ಕೋಟಿ ನೀಡಲಾಗಿದೆ. ಮುಂದಿನ ಆಯವ್ಯಯದಲ್ಲಿಯೂ 100 ಕೋಟಿ ರೂ.ಗಳ ಅನುದಾನವನ್ನು ಒದಗಿಸುವ ಭರವಸೆ ನೀಡಿದ ಸಿಎಂ, ಗಡಿಭಾಗದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಗಡಿ ಆಚೆಗೆ ಇರುವ ಕನ್ನಡಿಗರು ನಮ್ಮವರು. ಅವರ ಬೇಡಿಕೆಗೂ ಸ್ಪಂದಿಸುವ ಕೆಲಸ ನಾವು ಮಾಡುತ್ತೇವೆ ಎಂದು ಭರವಸೆ ನೀಡಿದರು.

ಗಡಿಭಾಗದ ಜನರ ಭವಿಷ್ಯ ಸುನಿಶ್ಚಿತಗೊಳಿಸುವುದು ನನ್ನ ಕರ್ತವ್ಯ: ಕರ್ನಾಟಕದ ಮುಖ್ಯಮಂತ್ರಿಯಾಗಿ ಭಾಷೆ, ಗಡಿಭಾಗದವರ ರಕ್ಷಣೆ, ಪೋಷಣೆ ಮತ್ತು ಭವಿಷ್ಯವನ್ನು ಸುನಿಶ್ಚಿತಗೊಳಿಸುವುದು ನನ್ನ ಕರ್ತವ್ಯ. ನಮ್ಮ ಗಡಿಯಲ್ಲಿನ ಕನ್ನಡಿಗರ ಅಭಿವೃದ್ಧಿಯ ಬಗ್ಗೆ ಮೊದಲು ನಾವು ಗಮನಹರಿಸಬೇಕು. ಅವರನ್ನು ಎಂದಿಗೂ ನಿರ್ಲಕ್ಷ್ಯ ಮಾಡುವುದಿಲ್ಲ. ಗಡಿಭಾಗದ ಕನ್ನಡಿಗರಿಗೆ ಎಲ್ಲಾ ಸೌಕರ್ಯಗಳ ಜೊತೆಗೆ ಅವಕಾಶಗಳನ್ನು ನೀಡಿ, ಭವಿಷ್ಯ ಬರೆಯುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.

ಪ್ರಾದೇಶಿಕ ರಾಜ್ಯಗಳ ಭಾಷೆವಾರು ಆದಾಗ ಸಹಜವಾಗಿ ವ್ಯತ್ಯಾಸಗಳು ಬಂದೇಬರುತ್ತವೆ. ನಿಖರವಾದ ರೇಖೆಯನ್ನು ಯಾವುದೇ ರಾಜ್ಯ ಅಥವಾ ದೇಶದ ನಡುವೆ ಎಳೆಯಲು ಸಾಧ್ಯವಿಲ್ಲ. ಗಡಿ ಭಾಗದಲ್ಲಿ ಜನರು ಯಾವುದೇ ಭಾಷೆ ಮಾತನಾಡಿದರೂ ನೆಮ್ಮದಿಯಿಂದ ಜೀವನ ನಡೆಸುತ್ತಾರೆ. ನಾನು ಬೆಳಗಾವಿ ಅಧಿವೇಶನಕ್ಕೆ ಹೋದಾಗ ಗಡಿ ಭಾಗದ ಗ್ರಾಮಗಳಿಗೆ ಭೇಟಿ ನೀಡಿದ್ದೆ. ನನ್ನೊಂದಿಗೆ ಅಲ್ಲಿನ ಜನರು ಪ್ರೀತಿಯಿಂದ ಮಾತನಾಡುತ್ತಾರೆ. ಜನರ ಮಧ್ಯೆ ಇಲ್ಲದಿರುವ ಸಮಸ್ಯೆಗಳನ್ನು ಬೆಳೆಸಿಕೊಂಡು ಹೋಗುವುದು ರಾಜ್ಯಕ್ಕಾಗಲಿ, ದೇಶಕ್ಕಾಗಲಿ ಒಳಿತನ್ನು ತರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ: ಆಂಧ್ರ - ಕರ್ನಾಟಕ ಪ್ರಯಾಣಿಕರಿಗೆ ಗುಡ್ ನ್ಯೂಸ್: ಹೆಚ್ಚಿನ ಅಂತಾರಾಜ್ಯ ಬಸ್ ಸಂಚಾರಕ್ಕೆ ಒಪ್ಪಂದ

ಕನ್ನಡಕ್ಕೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು: ಕನ್ನಡದ ಶಬ್ಧ ಭಾವಾರ್ಥದಲ್ಲಿ ಶ್ರೀಮಂತವಾಗಿದೆ. ಈ ಭಾಷೆಯಲ್ಲಿ ಸ್ಪಷ್ಟತೆಯಿದ್ದು, ಕನ್ನಡಕ್ಕೆ ಭವ್ಯವಾದ ಭವಿಷ್ಯ ಇದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಕನ್ನಡಕ್ಕೆ ಅಂತರ್ಗತ ಶಕ್ತಿಯಿದ್ದು, ಯಾವುದೇ ಸರ್ಕಾರದ ರಕ್ಷಣೆಯ ಅವಶ್ಯಕತೆ ಬರುವುದಿಲ್ಲ. ಈ ಬಾರಿ ಕನ್ನಡಕ್ಕೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಅರಸಿ ಬಂದಿವೆ. ಎಲ್ಲ ಭಾಷೆಗಳ ಪೈಪೋಟಿ, ಪ್ರಭಾವವನ್ನು ಎದುರಿಸಿ ಕನ್ನಡವು ಸಾಹಿತ್ಯ ಜ್ಞಾನಪೀಠ ಪ್ರಶಸ್ತಿ ಪಡೆಯುತ್ತಿದೆ ಎಂದರು.

Gadinada Chethana State Award
ಗಡಿನಾಡ ಚೇತನ ರಾಜ್ಯ ಪ್ರಶಸ್ತಿ ಪ್ರದಾನ

ಸಾರ್ವಜನಿಕ ಸಾಹಿತ್ಯವೇ ಶ್ರೇಷ್ಠ ಸಾಹಿತ್ಯ: ಅರ್ಹತೆಯ ಆಧಾರದ ಮೇಲೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕನ್ನಡದಲ್ಲಿ ಅದ್ಭುತ ಸಾಹಿತ್ಯವಿದೆ. ಜೀವನಕ್ಕೆ ಬದುಕು ತೋರಿಸುವ ವಚನ ಮತ್ತು ದಾಸ ಸಾಹಿತ್ಯವು ಬದುಕಿಗೆ ಹತ್ತಿರವಿದ್ದು ಜನಪ್ರಿಯವಾಗಿ ಸಾರ್ವಜನಿಕವಾಗುತ್ತದೆ. ಸಾರ್ವಜನಿಕ ಸಾಹಿತ್ಯವೇ ಶ್ರೇಷ್ಠ ಸಾಹಿತ್ಯ. ಅರ್ಥ, ಒಳಾರ್ಥಗಳನ್ನು ಸಾಮಾನ್ಯ ಜನರಿಗೆ ಅತ್ಯಂತ ಸರಳವಾಗಿ ತಿಳಿಸುವುದೇ ಇದರ ಕೆಲಸ. ಜ್ಞಾನವನ್ನು ಸರಳವಾಗಿ ಅಭಿವ್ಯಕ್ತಪಡಿಸಲು ಸಾಧ್ಯವಾಗದಿದ್ದರೆ ಆ ಸಾಹಿತ್ಯ ನಿಘಂಟಾಗುತ್ತದೆ.

ನಮಗೆ ನಿಘಂಟಿನ ಸಾಹಿತ್ಯದ ಅಗತ್ಯವಿಲ್ಲ. ಸರಳ, ಸಾರ್ವಜನಿಕರ ಸಾಹಿತ್ಯ ನಮಗೆ ಬೇಕಾಗಿದೆ ಮತ್ತು ಕನ್ನಡದಲ್ಲಿ ಇದು ಸಾಧ್ಯವಿದೆ. ಕನ್ನಡ ಉಳಿದಿದ್ದರೆ, ಬೆಳೆದಿದ್ದರೆ ಅದಕ್ಕೆ ಸಾಹಿತಿಗಳೇ ಮೂಲ ಕಾರಣ ಎಂದು ನುಡಿದರು.

ಕನ್ನಡದ ಏಕೀಕರಣ ಸುಲಭವಾಗಿರಲಿಲ್ಲ... ಗಡಿನಾಡಿನಲ್ಲಿ ಲಿಗಾಡೆ, ಪಟ್ಟದ್ದೇವರು ಆ ಕಾಲದಲ್ಲಿ ಮಾಡಿರುವ ಕೆಲಸ ಗಟ್ಟಿತನದ್ದು. ಕನ್ನಡದ ಏಕೀಕರಣ ಸುಲಭವಾಗಿರಲಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ನಂತರದಲ್ಲಿ ಆಡಳಿತಗಾರರು ಕನ್ನಡದ ಏಕೀಕರಣಕ್ಕೆ ಹೆಚ್ಚಿನ ಮಹತ್ವ ನೀಡಿದಕ್ಕಾಗಿಯೇ ಕನ್ನಡದ ಮನಸ್ಸುಗಳು ಒಂದಾದವು. ಅಂದು ಕೂಡ ಸಾಹಿತ್ಯವೇ ಮಹತ್ವದ ಪಾತ್ರವನ್ನು ವಹಿಸಿತ್ತು. ಇಂತಹ ಕನ್ನಡ ನಾಡಿನಲ್ಲಿ ಹುಟ್ಟಿದ್ದು ನಮ್ಮ ಪುಣ್ಯ. ಗಡಿ ಪ್ರಾಧಿಕಾರ ಉತ್ತಮ ಕೆಲಸವನ್ನು ಮಾಡಿದೆ. ಅವರ ಶಕ್ತಿಗೆ ಅಗತ್ಯ ಸಹಕಾರ, ಅನುದಾನವನ್ನು ಸರ್ಕಾರ ನೀಡಲಿದೆ. ಉತ್ತಮ ಕ್ರಿಯಾಯೋಜನೆ ತಯಾರಿಸಿ ಎಂದರು.

ಜೊತೆಗೆ ಪ್ರಶಸ್ತಿ ವಿಜೇತರಿಗೆ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ್, ಎಂ.ಎಸ್.ಸಿಂಧೂರ, ಮಾಜಿ ಸಚಿವೆ ಲೀಲಾ ದೇವಿ ಆರ್.ಪ್ರಸಾದ್, ಅಶೋಕ್ ಚಂದರಗಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಜಿಎಸ್​ಟಿ ಪರಿಹಾರ ಹಣ: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದೆ ಬರೋಬ್ಬರಿ 12,101 ಕೋಟಿ ರೂ. ಬಾಕಿ!

Last Updated : Feb 3, 2023, 10:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.