ETV Bharat / state

ಡಿಸೆಂಬರ್​ನಲ್ಲಿ ಬಿಬಿಎಂಪಿ‌ ಚುನಾವಣೆಗೆ ಸರ್ಕಾರ ಸಿದ್ಧತೆ ಮಾಡುತ್ತಿಲ್ಲ : ಸಿಎಂ ಬೊಮ್ಮಾಯಿ

ಎಲ್ಲಾ ವಾರ್ಡ್​​ಗಳಲ್ಲಿ ಜನಸೇವಕರ ನೇಮಕ ಆಗಿದೆ. ಎಲ್ಲಾ ಕಡೆ ಕೆಲಸ ಆರಂಭವಾಗಲಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿಎಂ ಕರೆ ನೀಡಿದರು. ಸರ್ಕಾರ ಜನರ ಮನೆ ಬಾಗಿಲಿಗೆ ಹೋಗುವ ಯೋಜನೆ ಇಂದು ಪ್ರಾರಂಭವಾಗಿದೆ. ಜನವರಿ 26ರಂದು ರಾಜ್ಯಾದ್ಯಂತ ಈ ಯೋಜನೆಯನ್ನು ಪ್ರಾರಂಭ ಮಾಡಲಾಗುತ್ತದೆ..

cm basavaraja bommai reaction on bbmp election
ಬಿಬಿಎಂಪಿ‌ ಚುನಾವಣೆ ಬಗ್ಗೆ ಸಿಎಂ ಪ್ರತಿಕ್ರಿಯೆ
author img

By

Published : Nov 1, 2021, 4:15 PM IST

ಬೆಂಗಳೂರು : ಡಿಸೆಂಬರ್​​ನಲ್ಲೇ ಬಿಬಿಎಂಪಿ ಚುನಾವಣೆ ನಡೆಸಬೇಕು ಎನ್ನುವ ಚಿಂತನೆ ಸರ್ಕಾರಕ್ಕೆ ಇಲ್ಲ. ಸದ್ಯ ಪ್ರಕರಣ ಸುಪ್ರೀಂಕೋರ್ಟ್​ನಲ್ಲಿದೆ. ಸರ್ವೋನ್ನತ ನ್ಯಾಯಾಲಯದ ಆದೇಶದಂತೆ ಬಿಬಿಎಂಪಿ ಚುನಾವಣೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಬಿಬಿಎಂಪಿ‌ ಚುನಾವಣೆ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿರುವುದು..

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಬಿಎಂಪಿ ಚುನಾವಣೆ ಅದರ ಪಾಡಿಗೆ ಅದು ಬರಲಿದೆ. ಡಿಸೆಂಬರ್​ನಲ್ಲೇ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎನ್ನುವುದು ನಿರಾಧಾರ, ಅಂತಹ ಸಿದ್ಧತೆಯಲ್ಲಿ ಸರ್ಕಾರ ತೊಡಗಿಲ್ಲ. ಸುಪ್ರೀಂಕೋರ್ಟ್ ಆದೇಶ ಬಂದ ನಂತರ ಚುನಾವಣೆ ಮಾಡುತ್ತೇವೆ. ಊಹಾಪೋಹದ ಯಾವುದೇ ಚರ್ಚೆಗೆ ನಾನು ಉತ್ತರ ಕೊಡಲ್ಲ ಎಂದರು.

ಬೆಂಗಳೂರಿನ ರಸ್ತೆಗುಂಡಿ ಮುಚ್ಚಲು ಪಾಲಿಕೆ ಮುಖ್ಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಮಳೆ ಬಂದಿರುವುದರಿಂದ ಸ್ವಲ್ಪ ತಡವಾಗಿದೆ. ಈಗಾಗಲೇ ಸಂಪೂರ್ಣವಾಗಿ ಎಲ್ಲಾ ಕ್ಷೇತ್ರದಲ್ಲಿ ಗುಂಡಿ ಮುಚ್ಚುವ ಕಾರ್ಯ ಪ್ರಾರಂಭವಾಗಿದೆ‌. ಒಂದು ವಾರ, ಹತ್ತು ದಿನ ಸಮಯ ಕೊಟ್ಟಿದ್ದೇನೆ. ನಂತರ ನಾನೇ ಕೆಲವು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡುತ್ತೇನೆ ಎಂದು ಸಿಎಂ ಸ್ಪಷ್ಟಪಡಿಸಿದರು.

ನಾನು ಮುಖ್ಯಮಂತ್ರಿ ಆದ ದಿನವೇ ನವೆಂಬರ್ 1ರಂದು ಆಡಳಿತ ಸುಧಾರಣೆಯ ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದೆ. ಆಡಳಿತ ಸುಧಾರಣಾ ವರದಿ ಬಂದ ನಂತರ ಅದನ್ನು ಅನುಸರಿಸುವುದರಲ್ಲಿ 'ಜನಸೇವಕ' ಒಂದಾಗಿ ಅದನ್ನು ಇಂದು ಅನುಷ್ಠಾನ ಮಾಡುತ್ತಿದ್ದೇವೆ.

ಸಾಂಕೇತಿಕವಾಗಿ ಇಂದು 10 ಮನೆಗಳನ್ನು ಆಯ್ಕೆ ಮಾಡಿದ್ದು, ಅಲ್ಲಿಗೆ ಖುದ್ದು ಭೇಟಿ ನೀಡಿ ಸವಲತ್ತು ವಿತರಿಸಿದ್ದೇನೆ. ಕೆಲವರಿಗೆ ಜಾತಿಪ್ರಮಾಣ ಪತ್ರ, ಇನ್ನು ಕೆಲವರಿಗೆ ನಿವಾಸ ದೃಢೀಕರಣ, ಮತ್ತೊಂದು ಕಡೆ ಖಾತೆ, ಇನ್ನೊಂದು ಕಡೆ ವೃದ್ಧಾಪ್ಯವೇತನ, ವಿಧವಾ ವೇತನ ಹೀಗೆ ಎಲ್ಲ ರೀತಿಯ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಿದ್ದೇನೆ.

ಎಲ್ಲಾ ವಾರ್ಡ್​​ಗಳಲ್ಲಿ ಜನಸೇವಕರ ನೇಮಕ ಆಗಿದೆ. ಎಲ್ಲಾ ಕಡೆ ಕೆಲಸ ಆರಂಭವಾಗಲಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿಎಂ ಕರೆ ನೀಡಿದರು. ಸರ್ಕಾರ ಜನರ ಮನೆ ಬಾಗಿಲಿಗೆ ಹೋಗುವ ಯೋಜನೆ ಇಂದು ಪ್ರಾರಂಭವಾಗಿದೆ. ಜನವರಿ 26ರಂದು ರಾಜ್ಯಾದ್ಯಂತ ಈ ಯೋಜನೆಯನ್ನು ಪ್ರಾರಂಭ ಮಾಡಲಾಗುತ್ತದೆ.

ಇದರ ಜೊತೆಗೆ ಪಡಿತರ ವಿತರಣಾ ವ್ಯವಸ್ಥೆಯನ್ನು ಕೂಡ ಮನೆ ಮನೆಗೆ ಕೊಡುವ ಯೋಜನೆ ಮಾಡಿದ್ದೇವೆ. ಹಲವಾರು ದೂರುಗಳನ್ನು ಸ್ವೀಕರಿಸಲು ಒಂದೇ ಸಹಾಯವಾಣಿಯನ್ನು ಮಾಡಿದ್ದೇವೆ. ಅದರ ಮೂಲಕ 155 ಇಲಾಖೆಗಳ ಮೂಲಕ ಬರುವ ದೂರುಗಳನ್ನು ಪರಿಶೀಲಿಸಲಾಗುತ್ತದೆ. ಸರ್ಕಾರ ಜನರ ಬಳಿಗೆ ಹೋಗಿ ಪ್ರಜಾಪ್ರಭುತ್ವದ ಮೇಲೆ ಇನ್ನಷ್ಟು ವಿಶ್ವಾಸ ಗಟ್ಟಿಯಾಗುವಂತೆ ಮಾಡಲಾಗುತ್ತದೆ ಎಂದು ಸಿಎಂ ಹೇಳಿದ್ರು.

ಇದನ್ನೂ ಓದಿ:ಕುಂದಾನಗರಿಯಲ್ಲಿ ಸರಳ ಕನ್ನಡ ರಾಜ್ಯೋತ್ಸವ: ನಾಡದೇವಿಗೆ ಪೂಜೆ ಸಲ್ಲಿಸಿದ ಸಚಿವ ಗೋವಿಂದ ಕಾರಜೋಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.