ಬೆಂಗಳೂರು: ಜೆಮ್ಸ್ ಅಂಡ್ ಜ್ಯುವೆಲ್ಲರಿ ಎಕ್ಸ್ಪೋರ್ಟ್ ಪ್ರೊಮೋಷನ್ ಕೌನ್ಸಿಲ್ ಆಯೋಜಿಸಿದ್ದ ಇಂಡಿಯಾ ಇಂಟರ್ ನ್ಯಾಷನಲ್ ಜ್ಯುವೆಲ್ಲರಿ ಪ್ರೀಮಿಯರ್ ಷೋ- 2021 ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿನ್ನಾಭರಣ ತಯಾರಕರ ಕಲೆ ಅತ್ಯುತ್ತಮವಾಗಿದೆ. ಅಷ್ಟೇ ಅಲ್ಲ ಇದು ಸೂಕ್ಷ್ಮ ಕಲೆ ಎಂದು ಬಣ್ಣಿಸಿದ್ದಾರೆ.
ಹಿಂದಿ ಮಿಶ್ರಿತ ಇಂಗ್ಲಿಷ್ನಲ್ಲಿ ಮಾತನಾಡಿದ ಮುಖ್ಯಮಂತ್ರಿ, ಆಭರಣ ತಯಾರಕರಿಗೆ ಮಾತ್ರ ಕಲೆಯ ಸೂಕ್ಷ್ಮತೆ ಅರ್ಥವಾಗಿರುತ್ತದೆ. ಮರದ ಕಲೆಯಲ್ಲಿ ತಪ್ಪಾದರೆ ನಡೆಯುತ್ತದೆ ಆದರೆ ಚಿನ್ನದ ಆಭರಣ ತಯಾರಿಕೆಯಲ್ಲಿ ತಪ್ಪಾದರೆ ನಷ್ಟದ ಬಗ್ಗೆ ನನಗೆ ಗೊತ್ತಿದೆ. ಈ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಕೌಶಲ್ಯಾಭಿವೃದ್ಧಿ ಬಗ್ಗೆ ಒತ್ತು ನೀಡುತ್ತಿದ್ದಾರೆ ಎಂದರು.
ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ ರಮಣರೆಡ್ಡಿ, ಕೌನ್ಸಿಲ್ ಅಧ್ಯಕ್ಷ ಕೋಲಿನ್ ಷಾ, ಕಾರ್ಯಕಾರಿ ನಿರ್ದೇಶಕ ಸವ್ಯಸಾಚಿ ರೇ ಮೊದಲಾದವರು ಉಪಸ್ಥಿತರಿದ್ದರು.
ಓದಿ: ಕಾನೂನು ಬಾಹಿರವಾಗಿ ಶಾಲಾ ಕೊಠಡಿ ಗುತ್ತಿಗೆ ನೀಡಿದ ಆರೋಪ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್