ಬೆಂಗಳೂರು: ಶಿವಾಜಿನಗರದ ನಿರ್ಬಂಧಿತ ವಲಯದ ಅಕ್ಕಪಕ್ಕದ ರಸ್ತೆಗಳಲ್ಲಿರುವ ಮಾಂಸದ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದ್ದಾರೆ.
ಶಿವಾಜಿನಗರದ ಚಾಂದಿನಿ ಚೌಕ್ ರಸ್ತೆಯ ಬಳಿ 5 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾದ ಕಾರಣ ಈ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ. ತರಕಾರಿ ಮಾರುಕಟ್ಟೆ,ಅಗತ್ಯ ಸೇವೆಗಳ ಅಂಗಡಿಗಳನ್ನು ಮಾತ್ರ ತೆರೆಯಲು ಅವಕಾವಿದೆ. ಇಂದು ಭಾನುವಾರವಾದ ಕಾರಣ ಕೆಲ ಮಾಂಸದಂಗಡಿ ತೆರೆಯಲು ಮುಂದಾಗಿದ್ದು, ಪೊಲೀಸರು ಅವರನ್ನ ತಡೆದು ಅಂಗಡಿಗಳನ್ನ ಮುಚ್ಚಿಸಿದ್ದಾರೆ.
ಪೂರ್ವ ವಿಭಾಗ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಸೀಲ್ಡೌನ್ ಪ್ರದೇಶಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.