ETV Bharat / state

ಪೊಳ್ಳು ಭರವಸೆಗಳಿಗೆ ಬೆಲೆತೆರುವ ಮುನ್ನ ಒಮ್ಮೆ ಯೋಚಿಸಿ.. ಮತದಾರರಿಗೆ ಬೆಂಗಳೂರು ನಗರ ತಜ್ಞರ ಕಿವಿಮಾತು - ಈಟಿವಿ ಭಾರತ ಕನ್ನಡ ನ್ಯೂಸ್​​

ವಿಧಾನಸಭೆ ಚುನಾವಣೆ ಹಿನ್ನೆಲೆ ವಿವಿಧ ಮತಕ್ಷೇತ್ರದ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸುವುದಾಗಿ ಮತಯಾಚನೆ ಮಾಡುತ್ತಾರೆ. ಆದರೆ ಚುನಾವಣೆ ಮುಗಿದ ಮೇಲೆ ತಮ್ಮ ಆಶ್ವಾಸನೆಗಳು ಚುನಾವಣೆಯೊಂದಿಗೆ ಮುಗಿದು ಹೋಗುತ್ತವೆ. ಈ ಪೊಳ್ಳು ಭರವಸೆಗಳಿಂದಾಗಿ ಜನರು ಪರದಾಡುವಂತಾಗಿದೆ.

infrastructure-in-the-bengaluru-is-still-a-mirage
ಮಾದರಿ ಕ್ಷೇತ್ರ ಮಾಡುವುದಿರಲಿ ರಾಜಧಾನಿಯಲ್ಲಿ ಮೂಲಸೌಕರ್ಯ ಇನ್ನೂ ಮರೀಚಿಕೆ: ಪೊಳ್ಳು ಭರವಸೆಗಳಿಗೆ ಬೆಲೆತೆತ್ತ ರಾಜಧಾನಿ ಮತದಾರರು
author img

By

Published : May 4, 2023, 9:33 PM IST

ವಿನಯ್​ ಶ್ರೀನಿವಾಸ್​ ,ನಗರ ತಜ್ಞ

ಬೆಂಗಳೂರು : ಚುನಾವಣೆ ಬಂದಾಗ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಗೆಲ್ಲಿಸುವಂತೆ ಮತದಾರರಲ್ಲಿ ವಿನಂತಿಸಿಕೊಳ್ಳುವ ಅಭ್ಯರ್ಥಿಗಳು ಅಧಿಕಾರದಲ್ಲಿದ್ದಾಗ ಮಾದರಿ ಕ್ಷೇತ್ರವಿರಲಿ, ಮೂಲಸೌಕರ್ಯ ಮರೀಚಿಕೆ ಆಗಿರುವುದು ಅಲ್ಲಲ್ಲಿ ಕಂಡುಬರುತ್ತಿದೆ ಎನ್ನುವುದು ನಗರ ತಜ್ಞರ ಅಭಿಪ್ರಾಯವಾಗಿದೆ.

ಚುನಾವಣಾ ಸನಿಹದಲ್ಲಿರುವಾಗಲೇ ಮತ್ತೆ ಸಚಿವ ಹಾಗೂ ಶಾಸಕರಾಗಿ ಕಾರ್ಯನಿರ್ವಹಿಸಿದ್ದ ಆಭ್ಯರ್ಥಿಗಳು ಕ್ಷೇತ್ರದ ಮತದಾರರಲ್ಲಿ ಇನ್ನೊಂದು ಅವಧಿಗೆ ಗೆಲ್ಲಿಸಿದರೆ ಸರ್ವಾಂಗೀಣ ಅಭಿವೃದ್ಧಿ ಕಾಯಕ ಜೊತೆಗೆ ಮಾದರಿ ಕ್ಷೇತ್ರ ಮಾಡುವುದಾಗಿ ಉಚಿತ ಭರವಸೆ ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಲಿಕಾನ್ ವ್ಯಾಲಿ, ಐಟಿ-ಬಿಟಿ ಸಿಟಿ ಎಂದೇ ಪ್ರಸಿದ್ಧಿ ಪಡೆದಿರುವ ಬೆಂಗಳೂರು ಅಗತ್ಯ ಮೂಲಸೌರ್ಕಯವಿಲ್ಲದೆ ಸೊರಗುತ್ತಿದೆ‌. ಉದ್ಯೋಗ, ಉತ್ತಮ ಹವಾಮಾನ ಕಾರಣಕ್ಕಾಗಿಯೇ ಬೆಂಗಳೂರಿಗೆ ದೇಶದ ಮೂಲೆ ಮೂಲೆಗಳಿಂದ ವಲಸಿಗರು ಮಹಾನಗರಕ್ಕೆ ಬಂದು ಗೂಡು ಕಟ್ಟಿಕೊಳ್ಳುತ್ತಿದ್ದಾರೆ. ವಸತಿಹೀನ ಪ್ರದೇಶಗಳು‌ ವಸತಿ‌ ಪ್ರದೇಶಗಳಾಗಿ ಪರಿವರ್ತನೆಯಾಗುತ್ತಿವೆ.

ಗಗನಚುಂಬಿ ಕಟ್ಟಡಗಳು, ಅಪಾರ್ಟ್ ಮೆಂಟ್ ಗಳ ನಿರ್ಮಾಣ ದಿನೇ‌ ದಿನೇ ಹೆಚ್ಚಾಗುತ್ತಿವೆ. ಮಳೆ ನೀರು ಸರಾಗವಾಗಿ ಹರಿದುಹೋಗುವ ರಾಜಕಾಲುವೆಗಳು ಒತ್ತುವರಿಯಿಂದಾಗಿ ರಾಜಧಾನಿಯಲ್ಲಿ ಸಣ್ಣ ಪ್ರಮಾಣದ ಮಳೆಬಂದರೂ ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗುವುದು ಸರ್ವೇ ಸಾಮಾನ್ಯವಾಗಿದೆ.

ಕಳೆದ ವರ್ಷ ಸುರಿದಿದ್ದ ಮಳೆಗೆ ವೈಟ್ ಫೀಲ್ಡ್, ಬೆಳ್ಳಂದೂರು, ಎಚ್ಎಸ್ಆರ್ ಲೇಔಟ್ ಸುತ್ತಮುತ್ತ ಪ್ರದೇಶಗಳಲ್ಲಿರುವ ಐಟಿ ಕಂಪನಿಗಳಿಗೆ ಮಳೆ ನೀರು ನುಗ್ಗಿತ್ತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ ಬೆಂಗಳೂರಿಗೆ ಕಪ್ಪು ಚುಪ್ಪೆಯಾಗಿತ್ತು. ಐಟಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಮೋಹನ್ ದಾಸ್ ಪೈ, ಬಯೋಕಾನ್ ಸಂಸ್ಥೆಯ ಸಂಸ್ಥಾಪಕಿ ಕಿರಣ್ ಮಜುಂದಾರ್ ಸೇರಿದಂತೆ ಹಲವು ದಿಗ್ಗಜರು ವ್ಯವಸ್ಥೆ ವಿರುದ್ಧ ಕಿಡಿಕಾರಿ ಮೂಲಸೌರ್ಕಯ ಕಲ್ಪಿಸಲು ಒತ್ತಾಯಿಸಿದ್ದರು‌. ತೆಲಂಗಾಣ ರಾಜ್ಯದ ಐಟಿ ಸಚಿವ ಕೆ ಟಿ ರಾಮರಾವ್​ ಅವರು ಬೆಂಗಳೂರು ಮೂಲಸೌಕರ್ಯ ಸರಿಯಿಲ್ಲದಿರುವ ಬಗ್ಗೆ ಆರೋಪಿಸಿ ತಮ್ಮ ತಮ್ಮ ರಾಜ್ಯದಲ್ಲಿ ಕಂಪೆನಿಗಳನ್ನು ಸ್ಥಳಾಂತರಿಸಿದರೆ ಸಕಲ ಸೌಕರ್ಯ ಕಲ್ಪಿಸುವುದಾಗಿ ಕಂಪೆನಿಗಳಿಗೆ ಆಫರ್ ನೀಡಿದ್ದರು. ಇದು ಸರ್ಕಾರದ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ರಾಜಕಾಲುವೆ‌‌ ಮೇಲೆ‌ ಅನಧಿಕೃತವಾಗಿ ಕಟ್ಟಡ ನಿರ್ಮಾಣ, ಸೂಕ್ತ ಒಳಚರಂಡಿ ನಿರ್ಮಿಸದಿರುವುದು ಮಳೆ ನೀರು‌ ನುಗ್ಗಿ ರಸ್ತೆಗಳು ಕೆರೆಯಂತಾಗಲು ಕಾರಣವಾಗಿದೆ.

1 ಸೆಂಟಿಮೀಟರ್ ಮಳೆ ಬಂದರೂ ಅಕ್ಷರಶಃ ಕೆರೆ : ರಾಜಧಾನಿಯ ರಸ್ತೆಗಳು ಕೆರೆಗಳಾಗಿ ಮಾರ್ಪಾಡಾಗಲು ಕೇವಲ ಒಂದು ಸೆಂಟಿಮೀಟರ್ ಸಾಕಾಗಿದೆ. ಅಲ್ಪ‌ ಪ್ರಮಾಣದಲ್ಲಿ ಮಳೆ ಬಿದ್ದರೂ ತಗ್ಗು ಪ್ರದೇಶಗಳಲ್ಲಿ ವಾಸ ಮಾಡುವ ಜನರು ಬದುಕು ಮೂರಾಬಟ್ಟೆಯಾಗುತ್ತದೆ.‌ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (ಕೆಎಸ್ಎನ್ ಡಿಎಂಸಿ) ನಗರದಲ್ಲಿ ಪ್ರವಾಹ ಸೃಷ್ಟಿಗೆ ಭಾರಿ ಮಳೆ ಅವಶ್ಯಕತೆಯಿಲ್ಲ‌ ಎಂದಿದೆ.‌ ಬಿಬಿಎಂಪಿ ಮೂರು ವಲಯಗಳಲ್ಲಿ ಐದು ಪ್ರದೇಶಗಳು ಜಲಾವೃತಗೊಳ್ಳುತ್ತವೆ.‌

ಈ ಪೈಕಿ‌ ಮಹದೇವಪುರ ವಲಯದ ವರ್ತೂರು ವಾರ್ಡ್ ನ ಪಣತ್ತೂರು ಮುಖ್ಯರಸ್ತೆ, ದೊಡ್ಡನೆಕ್ಕುಂದಿ ವಾರ್ಡ್ ನ ವಿಬ್ ಗಯಾರ್ ಹೈಸ್ಕೂಲ್, ಯಲಹಂಕ ವಲಯದ ಜಕ್ಕೂರು, ರಾಚೇನಹಳ್ಳಿ, ಪೂರ್ವ ವಲಯದ ಸಿ.ವಿ. ರಾಮನ್ ನಗರದ ಅಬ್ದುಲ್ ಕಲಾಂ ರಸ್ತೆಯಲ್ಲಿ ಪ್ರವಾಹ ಭೀತಿ ಎದುರಾಗಲಿದೆ. ಅದೇ ರೀತಿ ವಾಡಿಕೆಗಿಂತ ಹೆಚ್ಚು ಮಳೆ ಬಂದರೆ ನಗರದ ಸಾವಿರಾರು ಪ್ರದೇಶಗಳು ಮಳೆ ನೀರಿನಿಂದ ಆವೃತವಾಗಲಿವೆ. ಈ ಪೈಕಿ ರಾಜಕಾಲುವೆಯಿಂದ ನೀರು ತುಂಬಿ 109 ಸ್ಥಳಗಳಲ್ಲಿ ಸಮಸ್ಯೆ ಎದುರಾಗಲಿದೆ ಎಂದು ಬಿಬಿಎಂಪಿಗೆ ಕೆಎಸ್ ಡಿಎಂಸಿ ವರದಿ‌ ನೀಡಿ ಎಚ್ಚರಿಸಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಕ್ರಮ ಕೈಗೊಳ್ಳುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ‌‌. ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯು ಸಮಸ್ಯೆ ಉಲ್ಬಣಗೊಳಿಸಲು ಮತ್ತೊಂದು ಕಾರಣವಾಗಿದೆ ಎಂಬುದು ನಗರ ತಜ್ಞರಾದ ವಿನಯ್​ ಶ್ರೀನಿವಾಸ್​ ಅಭಿಪ್ರಾಯ.

ಒತ್ತುವರಿಯಾದ ರಾಜಕಾಲುವೆಗಳ ತೆರವಿಗೆ ಮೀನಾಮೇಷ : ವೇಗವಾಗಿ ಪ್ರಗತಿ ಹೊಂದುತ್ತಿರುವ ಬೆಂಗಳೂರಿನಲ್ಲಿ ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಒಂದು ವೇಳೆ‌ ತೆರವಿಗೆ ಅಧಿಕಾರಿಗಳು ಮುಂದಾದರೆ ರಾಜಕಾರಣಿಗಳಿಂದ ಒತ್ತಡ ಉಂಟಾಗುತ್ತದೆ. 2016ರಿಂದ ಈವರೆಗೂ ನಗರದ 2626 ರಾಜಕಾಲುವೆಗಳು ಒತ್ತುವರಿಯಾಗಿದ್ದು ಈ ಪೈಕಿ 1890 ಕಡೆಗಳಲ್ಲಿ ಮಾತ್ರ ತೆರವುಗೊಳಿಸಲಾಗಿದೆ‌. ಬಾಕಿ 736 ಒತ್ತುವರಿಗಳನ್ನು ಇನ್ನೂ ತೆರವು ಮಾಡಲಾಗಿಲ್ಲ.

ತೆರವು ಆಗದ ಪ್ರದೇಶಗಳಲ್ಲಿ ವಸತಿ ಹಾಗೂ ವಾಣಿಜ್ಯ ಕಟ್ಟಡಗಳೇ ಅಧಿಕ ಸಂಖ್ಯೆಯಲ್ಲಿದೆ. ಮಳೆಗಾಲುವೆ ಬದಿಯಲ್ಲಿ ನಿರ್ಮಿಸಲಾದ ಕಟ್ಟಡಗಳಿಂದಾಗಿ ದೊಡ್ಡ ಸಮಸ್ಯೆಯಾದ ಹಿನ್ನೆಲೆ 2016 ರಲ್ಲೇ ಒತ್ತುವರಿದಾರರ ಮೇಲೆ ಗದಾಪ್ರಹಾರ ನಡೆಸಲಾಯಿತು‌. ಬೊಮ್ಮನಹಳ್ಳಿಯ ಅವನಿ ಶೃಂಗೇರಿ ನಗರ, ಕೋಡಿಚಿಕ್ಕನಹಳ್ಳಿ, ಅನುಗ್ರಹ ಬಡಾವಣೆ, ಆರ್.ಆರ್‌.ನಗರ ಹಲಗೇವಡೇರಹಳ್ಳಿ, ದೊಡ್ಡಬೊಮ್ಮಸಂದ್ರ, ಕಸವನಹಳ್ಳಿ ಹಾಗೂ ಕೈಗೊಂಡನಹಳ್ಳಿ ನಿರ್ಮಿಸಲಾಗಿದ್ದ ಅನಧಿಕೃತ ಕಟ್ಟಡಗಳನ್ನ ಕೆಡವಲಾಗಿತ್ತು. ಬುಲ್ಡೋಜರ್, ಹಿಟಾಚಿಗಳ ಆರ್ಭಟ ಹೆಚ್ಚಾಗುತ್ತಿದ್ದಂತೆ ಸ್ಥಳೀಯ ಪ್ರತಿನಿಧಿಗಳ ಒತ್ತಡದಿಂದಾಗಿ ಮರು ಸರ್ವೇ ನೆಪದಲ್ಲಿ ರಾಜಕಾಲುವೆಗಳ ದಿಕ್ಕನ್ನೇ ಅಧಿಕಾರಿಗಳು ಬದಲಾಯಿಸಿದ ಆರೋಪವಿದೆ. ಇದೀಗ ಚುನಾವಣೆ ಹತ್ತಿರ ಬಂದಂತೆ ಪ್ರಚಾರ ಕಾರ್ಯ ಬಿರುಸುಗೊಳಿಸಿರುವ ಆಯಾ ಪಕ್ಷದ ಆಭ್ಯರ್ಥಿಗಳು ಮಾದರಿ ಕ್ಷೇತ್ರ ಮಾಡುವುದಾಗಿ ಪೊಳ್ಳು ಆಶ್ವಾಸನೆ ನೀಡುತ್ತಿದ್ದಾರೆ‌.

ಕೊಂಚ ಸುಧಾರಣೆಯಾದ ಸಂಚಾರ ವ್ಯವಸ್ಥೆ : ಬೆಂಗಳೂರು ಎಂದಾಕ್ಷಣ ಮೊದಲು ನೆನಪು ಆಗೋದು ಟ್ರಾಫಿಕ್ ಜಾಮ್, ಕಿರಿದಾದ ರಸ್ತೆಗಳಲ್ಲಿ ಕಿಲೋಮಿಟರ್ ಗಟ್ಟಲೇ ನಿಲ್ಲುವ ವಾಹನಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ರಾಜಧಾನಿಗೆ ಸಂಪರ್ಕಿಸುವ ಮೈಸೂರು ರೋಡ್, ಗೊರಗುಂಟೆಪಾಳ್ಯ, ಬಳ್ಳಾರಿ ರೋಡ್, ಹಳೆ ಮದ್ರಾಸ್ ರಸ್ತೆ ಹಾಗೂ ಹೊಸೂರು ರೋಡ್ ಗಳಲ್ಲಿ ದಿನದ ಬಹುತೇಕ ವಾಹನ ದಟ್ಟಣೆಯಿಂದ ಕೂಡಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ‌.

ಕಳೆದ ವರ್ಷ ಬೆಂಗಳೂರಿಗೆ ಬಂದಿದ್ದ ನರೇಂದ್ರ ಮೋದಿ ಆಗಮನ ವೇಳೆ‌ ಸಂಚಾರ ದಟ್ಟಣೆ ಬಗ್ಗೆ ಚರ್ಚೆಯಾಗಿತ್ತು. ಈ ಸಂಚಾರ ದಟ್ಟಣೆ ನಿವಾರಣೆಗಾಗಿ ಕ್ರಮ‌ ಕೈಗೊಳ್ಳಲು ಮುಖ್ಯಮಂತ್ರಿ ಬೊಮ್ಮಾಯಿಗೆ ಮೋದಿ‌ ಸೂಚನೆ ನೀಡಿದ್ದರು. ಇದರಂತೆ ಹೊಸದಾಗಿ‌‌ ಐಪಿಎಸ್ ಹಿರಿಯ ಅಧಿಕಾರಿ ಸಲೀಂ ಅವರನ್ನು ವಿಶೇಷ ಸಂಚಾರ ಆಯುಕ್ತರನ್ನಾಗಿ ನೇಮಕ ಮಾಡಲಾಯಿತು. ಸಂಚಾರ ವ್ಯವಸ್ಥೆ ವಿಶೇಷ ಆಸಕ್ತಿ ಹೊಂದಿದ‌ ಪರಿಣಾಮ ನಗರದ ಟ್ರಾಫಿಕ್ ಜಾಮ್ ಕೊಂಚಮಟ್ಟಿಗೆ ಸುಧಾರಿಸಿದೆ.

ಏನೇ ಇರಲಿ‌, ಮಾದರಿ ಕ್ಷೇತ್ರವನ್ನು ಮಾಡುವುದಾಗಿ ಹೇಳಿ ಮತ ಭಿಕ್ಷೆ ಬೇಡುತ್ತಿರುವ ಆಭ್ಯರ್ಥಿಗಳು ಜಯಶಾಲಿಯಾದ ನಂತರ ರಸ್ತೆ, ರಾಜಕಾಲುವೆ ಒತ್ತುವರಿ ತೆರವು, ಸಂಚಾರ ದಟ್ಟಣೆ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲಸೌರ್ಕಯಗಳ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡು ಕಾರ್ಯನ್ಮೋಖವಾದಾಗ ಮಾತ್ರ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುವ ಮಾನ ಕಾಪಾಡಬಹುದಾಗಿದೆ.

ಇದನ್ನೂ ಓದಿ : ಗೋವಿಂದರಾಜನಗರ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನೇರ ಪೈಪೋಟಿ: ಯಾರ ಅದೃಷ್ಟ ಏನಿದೆಯೋ ಎಂದ ಮತದಾರರು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.