ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಮಾಫಿಯಾ, ಅಪರಾಧ ಚಟುವಟಿಕೆಗಳು ದಿನೇದಿನೆ ಹೆಚ್ಚಾಗುತ್ತಿವೆ. ಸದ್ಯ ಡ್ರಗ್ಸ್ ಮಾಫಿಯಾ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ನಗರ ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ.
ನಗರ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಕಮಲ್ ಪಂಥ್ ಅವರು ಬಸವೇಶ್ವರ ನಗರ, ಚಂದ್ರಾಲೇಔಟ್ ಹಾಗೂ ಉಪ್ಪಾರಪೇಟೆ ಠಾಣೆಗಳಿಗೆ ಖುದ್ದು ಭೇಟಿ ನೀಡಿ ಸಿಬ್ಬಂದಿ ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.
ನಗರದಲ್ಲಿ ನಡೆಯುವ ಕ್ರೈಂ ರೇಟ್, ಮಾದಕ ದ್ರವ್ಯ ಸೇವನೆ ಪ್ರಕರಣಗಳ ಕುರಿತು ಹದ್ದಿನ ಕಣ್ಣಿಡುವಂತೆ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ್ದಾರೆ. ಕೊರೊನಾ ಬಂದ ನಂತರ ಅಪರಾಧ ಚಟುವಟಿಕೆ ಕೊಂಚ ಮಟ್ಟಿಗೆ ತಣ್ಣಗಾಗಿತ್ತು.
ಆದರೀಗ ಮತ್ತೆ ನಗರದಲ್ಲಿ ಒಂದಲ್ಲ ಒಂದು ಅಪರಾಧ ಚಟುವಟಿಕೆ ಬೆಳಕಿಗೆ ಬರುತ್ತಿರುವ ಕಾರಣ ಎಲ್ಲಾ ಪೊಲೀಸರು ಅಲರ್ಟ್ ಆಗಿರುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.