ETV Bharat / state

ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ ಪೊಲೀಸರಿಗೆ ನಗರ ಆಯುಕ್ತರಿಂದ ಸನ್ಮಾನ.. - ವಲಸೆ ಕಾರ್ಮಿಕರಿಗೆ ಸಹಾಯ

ಕೊರೊನಾ ಬಂದ ಎರಡೂವರೆ ತಿಂಗಳಿನಲ್ಲಿ ಪೊಲೀಸ್​ ಇಲಾಖೆಯ ಕೆಲಸ ಅದ್ಭುತವಾಗಿತ್ತು. ಬಹಳಷ್ಟು ಸಿಬ್ಬಂದಿ ವಲಸೆ ಕಾರ್ಮಿಕರು, ಬಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದಾರೆ.

felicitates police
ನಗರ ಆಯುಕ್ತ
author img

By

Published : Jun 2, 2020, 3:43 PM IST

ಬೆಂಗಳೂರು: ಕೊರೊನಾ ವಾರಿಯರ್ ಆಗಿ ಕೆಲಸ ಮಾಡುವುದರ ಜೊತೆಗೆ ಕೆಲ ಪೊಲೀಸರು ಮಾನವೀಯತೆ ದೃಷ್ಟಿಯಿಂದ ಹಲವಾರು ಮಂದಿಗೆ ಸಹಾಯ ಮಾಡಿದ್ದಾರೆ. ಇಂತಹವರನ್ನು ಗುರುತಿಸಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸನ್ಮಾನ ಮಾಡುತ್ತಿದ್ದಾರೆ.

ಇಂದು ಅಮೃತಹಳ್ಳಿ ಠಾಣೆಯ ಕಾನ್‌ಸ್ಟೆಬಲ್ ಚಂದ್ರಪ್ಪ ಚಿಕ್ಕಬಿದರಿ ಅವರಿಗೆ ಸನ್ಮಾನ ಮಾಡಲಾಯಿತು. ಇವರು ವಿದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡುವ ಸಂದರ್ಭದಲ್ಲಿ ಅವರ ನಂಬರ್​​ ಪಡೆದು, ವಾಟ್ಸ್​ಆ್ಯಪ್ ಗ್ರೂಪ್ ಮಾಡಿ ಅದರಲ್ಲಿ ಕೂಲಿ ಕಾರ್ಮಿಕರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಸಂತಸದಿಂದ ಒಪ್ಪಿ ಕೆಲ ಅನಿವಾಸಿ ಭಾರತೀಯರು ಸಹಾಯ ಮಾಡಿದ್ದರು‌. ಈ ಮೂಲಕ ಕಾನ್‌ಸ್ಟೆಬಲ್ ಚಂದ್ರಪ್ಪ ಚಿಕ್ಕಬಿದರಿ ಕೂಲಿ ಕಾರ್ಮಿಕರಿಗೆ ದೇಣಿಗೆ ಹಣ ನೀಡಿ ಮಾನವೀಯತೆ ಮೆರೆದಿದ್ದರು. ಇದಕ್ಕೆ ನಗರ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಆಯುಕ್ತ ಭಾಸ್ಕರ್​ ರಾವ್​​

ನಗರ ಪೊಲೀಸ್‌ ಆಯುಕ್ತ ಭಾಸ್ಕರ್​ ರಾವ್​ ಮಾತನಾಡಿ, ಕೊರೊನಾ ಬಂದ ಎರಡೂವರೆ ತಿಂಗಳಿನಲ್ಲಿ ಪೊಲೀಸ್​ ಇಲಾಖೆಯ ಕೆಲಸ ಅದ್ಭುತವಾಗಿತ್ತು. ಬಹಳಷ್ಟು ಸಿಬ್ಬಂದಿ ವಲಸೆ ಕಾರ್ಮಿಕರು, ಬಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ ಕಾನ್‌ಸ್ಟೆಬಲ್, ಹೆಡ್​ ಕಾನ್‌ಸ್ಟೆಬಲ್, ಸಬ್ ಇನ್ಸ್​ಪೆಕ್ಟರ್ ಸೇರಿ ಇಲಾಖೆಯಲ್ಲಿ ಒಳ್ಳೇ ಕೆಲಸ ಮಾಡಿದವರನ್ನು ಗುರುತಿಸಿ ಸನ್ಮಾನ ಮಾಡಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.