ETV Bharat / state

‘ಕನ್ನಡ ಚಿತ್ರರಂಗದ ಮತ್ತೊಂದು ಮುಕುಟ ಕಳಚಿದೆ.. ಅಣ್ಣಾವ್ರು, ಶಂಕ್ರಣ್ಣನನ್ನು ಕಳೆದುಕೊಂಡಷ್ಟೇ ದುಃಖವಾಗಿದೆ: ವಿಜಯ್​​

ಮಿಲನ ಸಿನಿಮಾದಲ್ಲಿ ಅವರ ಜೊತೆ ನಟಿಸಿದ್ದೆ. ಅವರಂದರೆ ತುಂಬಾ ಗೌರವ. ಶಂಕರ್ ನಾಗ್, ಅಣ್ಣಾವ್ರನ್ನು ಕಳೆದುಕೊಂಡಷ್ಟೇ ನೋವಾಗಿದೆ. ಇದು ಕನ್ನಡ ಇಂಡಸ್ಟ್ರಿಗೆ ಬ್ಲಾಕ್ ಡೇ ಎಂದು ನಟಿ ಪೂಜಾಗಾಂಧಿ ಕಣ್ಣೀರಿಟ್ಟರು.

cinema stars in kantheerava stadium
cinema stars in kantheerava stadium
author img

By

Published : Oct 30, 2021, 10:48 AM IST

ಬೆಂಗಳೂರು: ಪುನೀತ್​ ಅಂತಿಮ ದರ್ಶನಕ್ಕೆ ಕಂಠೀರವ ಸ್ಟುಡಿಯೋಕ್ಕೆ ಅಭಿಮಾನಿಗಳ ಸಾಗರವೇ ಹರಿದುಬರುತ್ತಿದೆ. ಗಣ್ಯಾತಿಗಣ್ಯರು, ಇತರ ಚಿತ್ರರಂಗದ ಕಲಾವಿದರು ಕೂಡ ಅಪ್ಪುವಿನ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಅಪ್ಪು ಅಗಲಿಕೆಗೆ ಕಂಬನಿ ಮಿಡಿದ ಗಣ್ಯರು

ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಪೂಜಾ ಗಾಂಧಿ, ಮಿಲನ ಸಿನಿಮಾದಲ್ಲಿ ಅವರ ಜೊತೆ ನಟಿಸಿದ್ದೆ. ಅವರಂದರೆ ತುಂಬಾ ಗೌರವ. ಶಂಕರ್ ನಾಗ್, ಅಣ್ಣಾವ್ರನ್ನು ಕಳೆದುಕೊಂಡಷ್ಟೇ ನೋವಾಗಿದೆ. ಇದು ಕನ್ನಡ ಇಂಡಸ್ಟ್ರಿಗೆ ಬ್ಲಾಕ್ ಡೇ ಎಂದು ಕಣ್ಣೀರಿಟ್ಟರು.

ಸಾಹಿತಿ ಮನೋಹರ್, ನಟ ನಿರಂಜನ್ ಶೆಟ್ಟೆ, ಕೆಜಿಎಫ್​ ವಿಲನ್ ಪಾತ್ರಧಾರಿ ಅವಿನಾಶ್, ಸಾಹಿತಿ ವಿ.ನಾಗೇಂದ್ರ ಪ್ರಸಾದ್, ರಾಜೇಶ್ ಕೃಷ್ಣನ್, ನಟ ಚೇತನ್​, ಪೂಜಾಗಾಂಧಿ, ಟಿ.ಎನ್.ಸೀತಾರಾಮ್ ಸೇರಿ ಇಡೀ ಚಿತ್ರರಂಗದ ಬಳಗವೇ ವೀರ ಕನ್ನಡಿಗನ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಟಿ.ಎನ್​. ಸೀತಾರಾಮ್​

ಕಿರುತೆರೆ ನಿರ್ದೇಶಕ ಟಿ.ಎನ್​.ಸೀತಾರಾಮ್ ಮಾತನಾಡಿ, ಅಣ್ಣಾವ್ರನ್ನು ಕಳೆದುಕೊಂಡಿದ್ದಾಗ ಇದ್ದ ಭಾವವೇ ಈಗಲೂ ಇದೆ. ತಂದೆಯಂತೆಯೇ ಸರಳತೆ, ಸಜ್ಜನಿಕೆ, ಜ್ಞಾನ, ಪ್ರೀತಿ ಆತ್ಮೀಯತೆ ಅಪ್ಪುಗೂ ಇತ್ತು. ತುಂಬು ಜೀವನ ನಡೆಸುತ್ತಿದ್ದ

ಕಿರುತೆರೆ ನಿರ್ದೇಶಕರಾದ ಟಿಎನ್ ಸೀತಾರಾಮ್ ಮಾತನಾಡಿ, ಅಣ್ಣಾವ್ರನ್ನು ಕಳ್ಕೊಂಡಾಗ ಇದ್ದ ಭಾವವೇ ಈಗಲೂ ಇದೆ. ಅದೇ ಸರಳತೆ, ಸಜ್ಜನಿಕೆ, ಜ್ಞಾನ, ಪ್ರೀತಿ ಆತ್ಮೀಯತೆ ಇತ್ತು. ತುಂಬು ಜೀವನ ನಡೆಸುತ್ತಿದ್ದ ಅವರು 46 ಕ್ಕೆ ಹೋಗ್ತಿರೋದು ಬಹಳ ಆಶ್ಚರ್ಯವಾಗುತ್ತೆ. ಅವರು ತುಂಬಾ ಸರಳತೆಯಿಂದ ಇದ್ರು. ಭೂಮಿಗೆ ಅಂಟಿಕೊಂಡ ಮನುಷ್ಯರಾಗಿದ್ರು. ಯುವಜನ ಹೇಗೆ ಬದುಕಬೇಕು ಎಂಬುದನ್ನು ಸಿನಿಮಾದಲ್ಲಿ ತೋರಿಸಕೊಡುವ ಮೂಲಕ ಯೂತ್ ಐಕಾನ್ ಆಗಿದ್ರು. ಒಟಿಟಿಯಲ್ಲೂ ಒಳ್ಳೆಯ ಕಂಟೆಂಟ್​ಗಳನ್ನು ತರುವ ಯೋಚನೆಯಲ್ಲಿದ್ದರು ಎಂದರು.

ಕಣ್ಣೀರಿಟ್ಟ ಅಜನೀಶ್​ ಲೋಕನಾಥ್, ದೊಡ್ಡಣ್ಣ​

ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಾತನಾಡಿ, ನವೆಂಬರ್​ ಒಂದಕ್ಕೆ ಕರ್ನಾಟಕಕ್ಕೆ ಒಳ್ಳೆಯ ಸುದ್ದಿ ಕೊಡೋಣ ಅಂತಾ ಹೇಳಿದ್ರು. ಆದರೆ, ಈಗ ಅವರೇ ಇಲ್ಲ ಎಂದು ಕಣ್ಣೀರಿಟ್ಟರು.ದೊಡ್ಡ ಮನೆಗೆ ಇದೊಂದು ಆಘಾತ. ಅಪ್ಪು, 46 ವರ್ಷದ ಜೀವಿತ ಅವಧಿಯಲ್ಲಿ 100 ವರ್ಷದ ಸಾಧನೆ ಮಾಡಿದ್ದಾರೆ ಎಂದು ಹಿರಿಯ ನಟ ದೊಡ್ಡಣ್ಣ ಭಾವುಕರಾದರು.

ಅಂತಿಮ ದರ್ಶನ ಪಡೆದ ಜನಾರ್ದನ ರೆಡ್ಡಿ

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಇದು ಒಪ್ಪಲಾರದ ಸತ್ಯ. ರಾಜ್ ಕುಮಾರ್ ಎಂದು ಬಳ್ಳಾರಿ ಮುಖ್ಯ ರಸ್ತೆಗೆ ಹೆಸರಿಟ್ಟಾಗ ಪುನೀತ್ ಬಂದಿದ್ರು. ನನ್ನ ಮಗನ‌ ಸಿನಿಮಾ ಮಾಡಲು ಇವರ ಸಲಹೆ ಪಡೆದಿದ್ದೆವು ಎಂದರು. ಯಾವುದಾದರೊಂದು ನೆಪ ಮಾಡಿಕೊಂಡು ಅಣ್ಣನನ್ನು ನೋಡಲು ಹೋಗ್ತಿದ್ದೆ. ಈಗ ಅಪ್ಪು ಸರ್ ಇಲ್ಲಾಂದ್ರೆ ನಂಬಲಾಗ್ತಿಲ್ಲ ಎಂದು ಗೀತ ರಚನೆಕಾರ ವಿ.ನಾಗೇಂದ್ರ ಪ್ರಸಾದ್​​ ಹೇಳಿದರು.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್​​ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಗಣ್ಯಾತಿಗಣ್ಯರು!

ಚಿತ್ರ ನಿರ್ಮಾಪಕ ಕೆ.ಮಂಜು ಮಾತನಾಡಿ, ಕನ್ನಡ ಚಿತ್ರರಂಗದ ಮುತ್ತು ಕಳಚಿದಂತಿದೆ. ಇವತ್ತು ಅವ್ರು ನಮ್ಮ‌ ಜೊತೆ ಇಲ್ಲ ಅಂತಾ ತುಂಬಾ ನೋವಾಗ್ತಿದೆ. ಅವರು ನಿಜವಾಗಿಯೂ ಮನಸ್ಸಿನಿಂದ‌ ಬದುಕುತ್ತಿದ್ದರು. ಫ್ಯಾಮಿಲಿ ಸಿನಿಮಾ ಮಾಡಬೇಕು ಅಂತಿದ್ದೋರು ಅಪ್ಪು. ನನ್ನ ಮಗನ ಜತೆ ಎರಡು ಗಂಟೆ ಕೂತು ಮಾತನಾಡಿದ್ದರು. ಪಡ್ಡೆಹುಲಿ ಸಿನಿಮಾಕ್ಕೆ ಒಂದು ದಿನ ಅಥಿತಿ ಪಾತ್ರ ಮಾಡಿದ್ದರು. ಅಪ್ಪು ಸಿಂಪಲ್ ಸ್ಟಾರ್ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.