ಬೆಂಗಳೂರು: ಕ್ರಿಸ್ ಮಸ್ ಹಬ್ಬ ಸಮಿಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಡಸ್ ಹೊಟೇಲ್ ನಲ್ಲಿ ಖ್ಯಾತ ನಟಿ ರಾಗಿಣೆ ದ್ವಿವೇದಿ ಕೇಕ್ ಮಿಕ್ಸಿಂಗ್ ಮಾಡುವ ಮೂಲಕ ಕ್ರಿಸ್ ಮಸ್ ಹಬ್ಬಕ್ಕೆ ಶುಭ ಕೋರಿದರು.
ಬಣ್ಣ ಬಣ್ಣದ ಚೆರ್ರಿಗಳು, ಖರ್ಜೂರ, ಪ್ಲಮ್ ಹಣ್ಣು, ಅಂಜೂರದ ಹಣ್ಣುಗಳು, ವಿವಿಧ ಬಗೆಯ ಒಣಹಣ್ಣುಗಳ ಮೇಲೆ ಜೇನುತುಪ್ಪ, ರಮ್ ಸುರಿದು ಹದವಾಗಿ ಕೇಕ್ ಮಿಕ್ಸಿಂಗ್ ಮಾಡುತ್ತಾ ನಟಿ ರಾಗಿಣಿ ಮತ್ತು ಇತರ ಗಣ್ಯರು ಕ್ರಿಸ್ ಮಸ್ ಹಬ್ಬದ ಸಡಗರವನ್ನು ಸಂಭ್ರಮಿಸಿದರು.
ವರ್ಷದ ಕೊನೆಯ ಹಬ್ಬವಾದ ಕ್ರಿಸ್ಮಸ್ ಗೆ ಸಿಲಿಕಾನ್ ಸಿಟಿ ಮಂದಿ ಸಜ್ಜಾಗುತ್ತಿದ್ದು, ನಗರದ ವಿವಿದ ಮಾಲ್ ಮತ್ತು ಹೋಟೆಲ್ಗಳು ಈ ಬಾರಿಯ ಹಬ್ಬಕ್ಕೆ ಜನರನ್ನು ರಂಜಿಸಲು ಮತ್ತು ಆಕರ್ಷಿಸಲು ಈಗಾಗಲೇ ತಯಾರಿ ನಡೆಸುತ್ತಿವೆ.