ಸ್ಯಾಂಡಲ್ವುಡ್ನ ಚಿರಂಜೀವಿ ಸರ್ಜಾ ಲಘು ಹೃದಯಘಾತದಿಂದಾಗಿ ಸಾಗರ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 17 ಅಕ್ಟೋಬರ್ 1984ರಂದು ಜನಿಸಿದ್ದ ಇವರು, ವಾಯುಪುತ್ರ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ರು.

ಸುಮಾರು 22 ಸಿನಿಮಾಗಳಲ್ಲಿ ನಟಿಸಿರುವ ಇವರಿಗೆ ನಟಿ ಮೇಘನಾ ರಾಜ್ ಮಡದಿಯಾಗಿದ್ದಾರೆ. ಅಲ್ಲದೆ ಬಹುಭಾಷಾ ನಟರಾದ ಅರ್ಜುನ್ ಸರ್ಜಾರ ಸೋದರಳಿಯ ಇವರು. ಚಿರುಗೆ ನಟ ಧ್ರುವ ಸರ್ಜಾ ಸಹೋದರ. ಇನ್ನೊಂದು ವಿಶೇಷ ಅಂದ್ರೆ ಕನ್ನಡದ ಹಿರಿಯ ನಟ, ಶಕ್ತಿ ಪ್ರಸಾದ್ ಅವರಿಗೆ ಚಿರಂಜೀವಿ ಮೊಮ್ಮಗ.


ಚಿರು, ಗಂಡೆದೆ, ವರದನಾಯಕ, ವಾಯುಪುತ್ರ, ಚಂದ್ರಲೇಖ, ರುದ್ರತಾಂಟ, ರಾಮಲೀಲಾ, ಸೀಜರ್, ಸಿಂಗಾ, ಅಮ್ಮಾ ಐ ಲವ್ ಯು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.


ವರದ ನಾಯಕ ಸಿನಿಮಾದಲ್ಲಿ ಸುದೀಪ್ ಜೊತೆ ಸಹೋದರನಾಗಿ ಕಾಣಿಸಿಕೊಂಡಿದ್ದು, ಚಿತ್ರ ಬಿಗ್ ಹಿಟ್ ನೀಡಿತ್ತು. ಅಲ್ಲದೆ ಇವರ ಹೆಸರಿನ ಮೇಲೆ ನಿರ್ಮಾಣವಾಗಿದ್ದ ಚಿರು ಚಿತ್ರ ಕೂಡ ದೊಡ್ಡ ಯಶಸ್ಸು ಕಂಡಿತ್ತು. ಚಿರಂಜೀವ ಅಭಿನಯಿಸಿದ ಕೊನೆಯ ಸಿನಿಮಾ ಶಿವಾರ್ಜುನ.
2017ರಲ್ಲಿ ಮೇಘನಾ ರಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡದ್ದ ಚಿರಂಜೀವಿ ಸರ್ಜಾ, 2018ರಲ್ಲಿ ಸಪ್ತಪದಿ ತುಳಿದಿದ್ದರು. ಚಿಕ್ಕ ವಯಸ್ಸಿನಲ್ಲೇ ಚಿರು ಚಿರನಿದ್ರೆಗೆ ಜಾರಿರುವುದು ಸ್ಯಾಂಡಲ್ವುಡ್ಗೆ ತುಂಬಲಾರದ ನಷ್ಟವಾಗಿದೆ.
