ETV Bharat / state

ಕೊರೊನಾ 4ನೇ ಅಲೆ ವೇಳೆ ಮಕ್ಕಳ ಬಗ್ಗೆ ಎಚ್ಚರವಹಿಸಿ: ವೈರಸ್‌ ತಡೆಗೆ ಲಸಿಕೆಯೇ ರಾಮಬಾಣ - ನಾಲ್ಕನೇ ಅಲೆ ಬರುವ ಮುನ್ನವೇ ಬೂಸ್ಟರ್ ಡೋಸ್ ಪಡೆಯಿರಿ

ರಾಜ್ಯದಲ್ಲಿ ಕೊರೊನಾ ಸೋಂಕಿನ ನಾಲ್ಕನೇ ಅಲೆ ಬರುವ ಎಚ್ಚರಿಕೆಯನ್ನು ಆರೋಗ್ಯ ಇಲಾಖೆ ನೀಡಿದೆ. ಈ ಅಲೆಯಲ್ಲಿ ಸೋಂಕು ಉಲ್ಬಣಕ್ಕೆ ರೂಪಾಂತರಿ ಒಮಿಕ್ರಾನ್​ನ ಉಪತಳಿ BA.2.12 ಕಾರಣವಾಗಬಹುದು ಎಂದು ಹೇಳಲಾಗ್ತಿದೆ. ಹೀಗಾಗಿ ಮಾಸ್ಕ್​ ಧರಿಸುವುದನ್ನು ಕಡ್ಡಾಯ ಮಾಡಿದ್ದು, ಎಲ್ಲೆಂದರಲ್ಲಿ ಉಗುಳಿದರೆ ದಂಡ ತೆರಬೇಕಾಗುತ್ತದೆ.

ಕೊರೊನಾ
ಕೊರೊನಾ
author img

By

Published : Apr 26, 2022, 3:22 PM IST

ಬೆಂಗಳೂರು: ರಾಜ್ಯದಲ್ಲಿ ಸದ್ಯ ಕೋವಿಡ್ ಪರಿಸ್ಥಿತಿ ಹೇಗಿದೆ ಅಂದರೆ 'ಹೋದ್ಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿ' ಅನ್ನೋ ಹಾಗಿದೆ. ಮೂರನೇ ಅಲೆಯ ಪ್ರಭಾವ ಕಡಿಮೆ ಆಗ್ತಿದೆ ಎನ್ನುವಾಗಲೇ ನಾಲ್ಕನೇ ಅಲೆಯ ಎಚ್ಚರಿಕೆಯನ್ನು ಆರೋಗ್ಯ ಇಲಾಖೆ ನೀಡಿದೆ. ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿದ್ದು, ಎಲ್ಲೆಂದರಲ್ಲಿ ಉಗುಳುವುದಕ್ಕೆ ಬ್ರೇಕ್ ಹಾಕಲಾಗಿದೆ.

ನಾಲ್ಕನೇ ಅಲೆಯಲ್ಲಿ ಸೋಂಕು ಉಲ್ಬಣಕ್ಕೆ ರೂಪಾಂತರಿ ಒಮಿಕ್ರಾನ್​ನ ಉಪತಳಿ BA.2.12 ಕಾರಣವಾಗಬಹುದು ಎಂದು ಹೇಳಲಾಗ್ತಿದೆ. ರಾಜ್ಯದಲ್ಲಿ ಇಬ್ಬರಲ್ಲಿ ಈ ಸೋಂಕು ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ದೃಢಪಡಿಸಿಲ್ಲ. ಇನ್ನೆರಡು-ಮೂರು ದಿನಗಳಲ್ಲಿ ವರದಿ ಬರುವ ಸಾಧ್ಯತೆ ಇದೆ. ಹಾಗಾದರೆ ನಾಲ್ಕನೇ ಅಲೆಯಲ್ಲಿ ಯಾವ ವಯೋಮಾನದವರು ಟಾರ್ಗೆಟ್ ಆಗಲಿದ್ದಾರೆ. ಲಸಿಕೆ ರಾಮಬಾಣವಾಗಿ ಕೆಲಸಕ್ಕೆ ಬರಲಿದೆಯೇ? ಈ ಎಲ್ಲ ವಿಷಯಗಳ ಕುರಿತು ತಜ್ಞರು ಹೇಳಿದ್ದೇನು ನೋಡೋಣ.

ರಾಜ್ಯಕ್ಕೆ ಕೊರೊನಾ 4ನೇ ಅಲೆ ಕಂಟಕವಾಗಲಿದ್ದು, ಕೆಲವೇ ವಾರಗಳಲ್ಲಿ ಎಂಟ್ರಿ ಕೊಡುವ ಬಗ್ಗೆ ತಜ್ಞ ವೈದ್ಯ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು. ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರೂ ಆಗಿರುವ ಡಾ. ಮಂಜುನಾಥ್, 4ನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಲು ಸೂಚನೆ ನೀಡಿದ್ದಾರೆ‌. ಮುಂಬರುವ ಅಲೆಯಲ್ಲಿ ಮಕ್ಕಳು ಬಾಧಿತರಾಗುವ ಆತಂಕ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಇನ್ನೂ ಲಸಿಕೆ ಸಿಗದಿರುವ ಕಾರಣ ಸೋಂಕು ತಗಲುವ ಭೀತಿಯಿದೆ. ದೆಹಲಿ, ಮುಂಬೈ ನಗರಗಳಲ್ಲಿ ಮಕ್ಕಳಲ್ಲಿ ಸೋಂಕಿನ ಪ್ರಕರಣಗಳು ಪತ್ತೆಯಾಗಿದೆ. ಹೀಗಾಗಿ ಲಸಿಕೆ ಪಡೆಯದ 12 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಪಾಸಿಟಿವ್ ಆಗ್ತಿದೆ.‌ ಮಕ್ಕಳ ಬಗ್ಗೆ ಜಾಗ್ರತೆ ವಹಿಸಲು ಸಲಹೆ ನೀಡಿದ್ದು, 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೋವಿಡ್ ಲಸಿಕೆ ಕೊಡಿಸಲು ಪೋಷಕರಲ್ಲಿ ಮನವಿ ಮಾಡಿದ್ದಾರೆ.

ಬೂಸ್ಟರ್ ಡೋಸ್ ಪಡೆಯಿರಿ: ದಿನೇ ದಿನೇ ಎಲ್ಲೆಡೆ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ನಾಲ್ಕನೇ ಅಲೆಯ ಆಗು ಹೋಗುಗಳು ತಿಳಿದಿಲ್ಲ. ಆದರೆ ಒಮಿಕ್ರಾನ್​​ನಂತೆ ಸೋಂಕು ಹರಡುವ ಸಾಧ್ಯತೆ ಇದೆ. ಸೋಂಕು ಹೆಚ್ಚಾಗಲು ಪ್ರಮುಖ ಕಾರಣ ಜನಸಂದಣಿ. ಹೀಗಾಗಿ ಜನಸಂದಣಿ ಇರುವ ಕಡೆಗಳಲ್ಲಿ ಜನ ಮಾಸ್ಕ್ ಧರಿಸುವುದೊಳಿತು. ನಾಲ್ಕನೇ ಅಲೆ ಬರುವ ಮುನ್ನವೇ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಿ ಎಂದು ತಜ್ಞ ವೈದ್ಯ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೂ ಆಗಿರುವ ಡಾ. ಸತ್ಯನಾರಾಯಣ ಮೈಸೂರು ಜನರಿಗೆ ಸಲಹೆ ನೀಡಿದ್ದಾರೆ.

ರೂಪಾಂತರಿ ಪತ್ತೆಗೆ ಕ್ಲಿನಿಕಲ್ ಸರ್ವಿಲೆನ್ಸ್: ಪ್ರಸ್ತುತ ಕೋವಿಡ್-19 ರೋಗಿಗಳಲ್ಲಿ ಹೊಸ ಹಾಗೂ ವಿಭಿನ್ನ ರೋಗಲಕ್ಷಣಗಳನ್ನು ಕಂಡು ಹಿಡಿಯಲು ಆರೋಗ್ಯ ಇಲಾಖೆ ತಯಾರಿ ನಡೆಸಿದೆ‌. ಇದಕ್ಕಾಗಿ ಆರಂಭಿಕ ಹಂತದಲ್ಲೇ ರೋಗ ಲಕ್ಷಣಗಳನ್ನು ಗುರುತಿಸಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಸರ್ವಿಲೆನ್ಸ್ ಆರಂಭಿಸಿದೆ. ಇದರಲ್ಲಿ ಪ್ರಮುಖವಾಗಿ ಹೊಸ ರೂಪಾಂತರಿ ವೈರಸ್​ ಅನ್ನು ಮೊದಲೇ ಗುರುತಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಆ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ.

ಇದನ್ನೂ ಓದಿ: 6-12 ವರ್ಷದೊಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್​; 5-12 ವರ್ಷದ ಮಕ್ಕಳಿಗೆ ಕಾರ್ಬೆವಾಕ್ಸ್ ಲಸಿಕೆ

ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸೂಚನೆ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ‌. ಕೋವಿಡ್- 19ನ 1ನೇ, 2ನೇ ಮತ್ತು 3ನೇ ಅಲೆಯಲ್ಲಿ ವೈರಸ್​ನ ರೋಗಲಕ್ಷಣಗಳು ಪ್ರತಿ ಹಂತದಲ್ಲೂ ವಿಭಿನ್ನ ರೀತಿಯಲ್ಲಿ ಬದಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ Omicron ಸ್ವಭಾವವನ್ನು ದಕ್ಷಿಣ ಆಫ್ರಿಕಾದ ವೈದ್ಯರು ಗುರುತಿಸಿದ್ದರು.‌ ಹೀಗಾಗಿ ಪರಿಣಾಮಕಾರಿಯಾಗಿ ವೈರಸ್​ನ ವಿರುದ್ಧ ಹೋರಾಡಲು ಸಹಕಾರಿಯಾಗಿತ್ತು.‌ ಹೀಗಾಗಿ ಸದ್ಯ ಕೋವಿಡ್ ರೋಗಿಗಳಲ್ಲಿ ಹೊಸ ರೋಗಲಕ್ಷಣಗಳು, ವಿಭಿನ್ನ ರೋಗಲಕ್ಷಣಗಳ ಆರಂಭಿಕ ಗುರುತಿಸುವಿಕೆಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಕಣ್ಗಾವಲು ಪ್ರಾರಂಭಿಸಲಾಗಿದೆ. ಅಂತಹ ಪ್ರಕರಣಗಳ ಕ್ಲಿನಿಕಲ್ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್​ಗೆ ಕಳಿಸಿ, ಲ್ಯಾಬ್‌ಗಳಲ್ಲಿ ಯಾವುದಾದರೂ ಹೊಸ ರೂಪಾಂತರವನ್ನು ಮೊದಲೇ ಪತ್ತೆಹಚ್ಚಲು ಕಳುಹಿಸಬೇಕು. ಪಾಕ್ಷಿಕ ವರದಿಯನ್ನು ರಾಜ್ಯ ಕಣ್ಗಾವಲು ಘಟಕಕ್ಕೆ ಕಳುಹಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.