ಬೆಂಗಳೂರು: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯ ಮಹಾಪೂರ ಹರಿದು ಬರುತ್ತಿದೆ. ಇಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವಿವಿಧ ನಿಗಮ, ಸಂಸ್ಥೆಗಳು ದೇಣಿಗೆ ನೀಡಿವೆ.
ಇಂದು ಸಿ. ಎಂ. ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಾಭಿವೃದ್ಧಿ ನಿಗಮದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿರುವ 5 ಕೋಟಿ ರೂ.ಗಳ ಚೆಕ್ಕನ್ನು ಸ್ವೀಕರಿಸಿದರು. ಇನ್ನು ಜಯದೇವ ಹೃದ್ರೋಗ ನಿರ್ದೇಶಕ ಡಾಕ್ಟರ್ ಸಿ.ಎನ್. ಮಂಜುನಾಥ ಅವರು ಸಿ ಎಂ ಗೆ ಸಂಸ್ಥೆಯ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 28 ಲಕ್ಷ ರೂಪಾಯಿಗಳ ಚೆಕ್ಕನ್ನು ಹಸ್ತಾಂತರಿಸಿದರು.
ನಿನ್ನೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ 4,73,68,314 ರೂ. ಜಮೆ ಆಗಿತ್ತು. ಇದಲ್ಲದೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಯಲ್ಲಿ 2,80,14,436 ರೂ ಮೊತ್ತದ ಡಿ. ಡಿ. ಗಳನ್ನು ಸ್ವೀಕರಿಸಲಾಗಿತ್ತು.ಈ ಸಂದರ್ಭದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ, ಮುಖ್ಯ ಅಭಿಯಂತರ ಲೋಕೇಶ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್. ಕೆ. ಅತೀಕ್ ಉಪಸ್ಥಿತರಿದ್ದರು. ಆಗಸ್ಟ್ 9 ರಿಂದ ಈವರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ಒಟ್ಟು 16,00,46,669 ರೂ. ಜಮೆಯಾಗಿದೆ.