ಬೆಂಗಳೂರು: ಬಿಜೆಪಿ ಶಾಸಕರ ಬಂಡಾಯ ಸಭೆ ವಿಚಾರ ಸಂಬಂಧ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ಪಕ್ಷ ಯಡಿಯೂರಪ್ಪ ಸೇರಿ ಎರಡು ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈಗ ಭಿನ್ನಮತ ಮಾಡ್ತಿರೋರು ಹಿಂದೆ ಯಡಿಯೂರಪ್ಪ ಅವರಿಂದ ಸರ್ಕಾರ ಬಂತು ಅಂತ ಹೇಳಿದ್ದರು. ಅನೇಕ ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಶಕ್ತಿ ಗೊತ್ತಾಗಿದೆ. ಪಕ್ಷಕ್ಕೆ ಮುಜುಗರ ತರುವ ಇಂತಹ ಕೆಲಸ ಯಾರು ಮಾಡಬಾರದು.
10 ತಿಂಗಳು ಹಿಂದೆ ಯಾಕೆ ಇವರು ಸಭೆ ಮಾಡಿರಲಿಲ್ಲ. ಯಡಿಯೂರಪ್ಪ ಶ್ರಮದಿಂದ ಸರ್ಕಾರ ಬಂದಿದೆ. ಸ್ವಲ್ಪ ಜನ ಹೇಳಿದ್ರೆ ನಾಯಕತ್ವ ಬದಲಾಗೊಲ್ಲ, ಯಡಿಯೂರಪ್ಪ ಜೊತೆ ಶಾಸಕರು ಇಲ್ಲವಾ? ಯಡಿಯೂರಪ್ಪನವರೇ ನಮ್ಮ ನಾಯಕರು. ಅವರೇ ಮುಂದೆ ಅವಧಿ ಅಧಿಕಾರ ಮಾಡ್ತಾರೆ. ಇದೆಲ್ಲದ್ದನ್ನ ಹೈಕಮಾಂಡ್ ಸರಿ ಮಾಡುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಥಾನಮಾನ ಸಿಗದೇ ಇರೋದಕ್ಕೆ ಹೀಗೆ ಹೇಳೋದು ಸರಿಯಲ್ಲ. ಯತ್ನಾಳ್ ಹೇಳಿದ ತಕ್ಷಣ ನಾಯಕತ್ವ ಬದಲಾವಣೆ ಆಗೋಲ್ಲ. ಹೈಕಮಾಂಡ್ ಪ್ರಬಲವಾಗಿದೆ. ಅವರು ಎಲ್ಲಾ ನೋಡಿ ತೀರ್ಮಾನ ಮಾಡ್ತಾರೆ. ಯತ್ನಾಳ್ಗೆ ಪಕ್ಷ ಎಲ್ಲ ಸ್ಥಾನಮಾನ ಕೊಟ್ಟಿದೆ.
ಆದರೆ, ಹೀಗೆ ಮಾಡೋದು ಸರಿಯಲ್ಲ. ಯಡಿಯೂರಪ್ಪ ನಾಯಕ ಅಲ್ಲ ಅಂದ್ರೆ ಶಾಸಕಾಂಗ ಪಕ್ಷದಲ್ಲಿ ನಾವೇ ಆಯ್ಕೆ ಮಾಡಿದ್ದು ಅಲ್ಲವಾ? ಯಾವ ಬಾಯಲ್ಲಿ ಅವರು ನಾಯಕ ಅಲ್ಲ ಅಂತಾರೆ? ಅಂದು ದೇಶಕ್ಕೆ ಮೋದಿ, ರಾಜ್ಯಕ್ಕೆ ಯಡಿಯೂರಪ್ಪ ಅಂತ ಹೇಳಿದ್ರು. ಈಗ ಅವರ ಹೇಳಿಕೆ ಏನಾಯ್ತು? ನಾವೆಲ್ಲರೂ ಒಗ್ಗಟ್ಟಾಗಿ ಇರೋಣ. ಉಳಿದ ವರ್ಷ ಅಧಿಕಾರ ಪೂರೈಸೋಣ ಎಂದು ಆಶಯ ವ್ಯಕ್ತಪಡಿಸಿದರು.