ಬೆಂಗಳೂರು: ಜಿಕೆವಿಕೆ ವಿಶ್ವವಿದ್ಯಾಲಯ ಆಯೋಜಿಸಿರುವ ವಿಜ್ಞಾನ ಕಾಂಗ್ರೆಸ್ ಮೇಳವನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಈ ಹಿನ್ನೆಲೆ ಕೆಲವೊಂದು ಸಂಚಾರಿ ಮಾರ್ಗಗಳನ್ನು ಬದಲಾವಣೆ ಮಾಡಿ ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಆದೇಶಿಸಿದ್ದಾರೆ.
ಜಿಕೆವಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಇಂದು ರಾಜಭವನದಲ್ಲಿ ತಂಗಲಿದ್ದಾರೆ. ಹೀಗಾಗಿ ರಾಜಭವನದಿಂದ ಜಿಕೆವಿಕೆಗೆ ಸಂಚರಿಸುವ ಮಾರ್ಗ ಬದಲಾಯಿಸಿ, ಸಾರ್ವಜನಿಕರ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಲಾಗಿದೆ.
ನಾಳೆ ಸುರಂಜನದಾಸ್ ರಸ್ತೆ, ಟ್ರಿನಿಟಿ ಚರ್ಚ್ ರಸ್ತೆ, ಎಂಜಿ ರಸ್ತೆ, ಕಬ್ಬನ್ ರಸ್ತೆ, ಕಸ್ತೂರಿ ಬಾ ರಸ್ತೆ, ಕಬ್ಬನ್ ಪಾರ್ಕ್ ಒಳಭಾಗದ ರಸ್ತೆ , ಡಾ. ಬಿ.ಆರ್.ಅಂಬೇಡ್ಕರ್ ರಸ್ತೆ, ಎಂಎಸ್ ಬಿಲ್ಡಿಂಗ್ ಒಳ ಭಾಗದ ರಸ್ತೆ, ದೇವರಾಜ ಅರಸ್ ರಸ್ತೆ, ಪ್ಯಾಲೇಸ್ ರಸ್ತೆ, ಟಿ.ಚೌಡಯ್ಯ ರಸ್ತೆ ಬದಲಾವಣೆ ಮಾಡಲಾಗಿದೆ. ಜೊತೆಗೆ ಜನವರಿ 3ರಂದು ಕೂಡ ಕೆಲ ಗಣ್ಯರ ಓಡಾಟ ಇರುವ ಹಿನ್ನೆಲೆ ಹೆಚ್ಎಎಲ್ ರಸ್ತೆ, ಪ್ಯಾಲೇಸ್ ರಸ್ತೆ, ಟಿ.ಚೌಡಯ್ಯ ರಸ್ತೆ, ರಮಷ ಮಹರ್ಷಿ ರಸ್ತೆ, ಬಳ್ಳಾರಿ ರಸ್ತೆ, ನೆಹರು ವೃತ್ತ, ಎಸ್ಸಿ ರಸ್ತೆ, ಸಂಪಿಗೆ ರಸ್ತೆ, ಸರ್ಸಿ ರಾಮನ್ ರಸ್ತೆ, ನ್ಯೂ ಬಿ.ಇ.ಎಲ್ ರಸ್ತೆ, ಲಕ್ಷೀಪುರ ರಸ್ತೆ, ಮೇಜರ್ ಸಂದೀಪ್ ಉನ್ನಿ ಕೃಷ್ಣನ್ ರಸ್ತೆ, ದೊಡ್ಡಬಳ್ಳಾಪುರ ರಸ್ತೆ ಬದಲಾವಣೆ ಮಾಡಲಾಗಿದೆ.