ಬೆಂಗಳೂರು: ಕಾಂಗ್ರೆಸ್ ಇರುವವರೆಗೂ ದಲಿತರ ಭವಿಷ್ಯ ಶೂನ್ಯ ಎಂದು ಬೆಂಗಳೂರಿನಲ್ಲಿ ಬಿಜೆಪಿ ಪರಿಷತ್ ಸದಸ್ಯ ಚಲವಾದಿ ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಕೆಳ ಮನೆಯಲ್ಲಿ ಮತಾಂತರ ಕಾಯ್ದೆ ಅಂಗೀಕಾರವಾಗಿದೆ. ಮೇಲ್ಮನೆಯಲ್ಲಿ ಪಾಸ್ ಮಾಡಿ, ಅದಕ್ಕೆ ಇತಿಶ್ರೀ ಹಾಡುವ ಕೆಲಸ ಬಿಜೆಪಿ ಮಾಡಿದೆ.
ಬಲವಂತದ ಮತಾಂತರ ಆಗಬಾರದು ಅನ್ನೋದು ಉದ್ದೇಶ. ಮತಾಂತರ ಆಗಬೇಕು ಅನ್ನೋದಕ್ಕೂ ಅಡ್ಡಿ ಇಲ್ಲ. ಮತಾಂತರ ಆಗಲು ಬಯಸುವವರು ಅರ್ಜಿ ನೀಡಿದರೆ ಆಯ್ತು. ಬೊಮ್ಮಾಯಿ ಅವರು ತಂದಿರೋ ಕಾಯ್ದೆಗೆ ಸ್ವಾಗತ ಎಂದರು.
ಆದರೆ ಕಾಂಗ್ರೆಸ್ ನಾಯಕರು ತಾವು ಅಧಿಕಾರಕ್ಕೆ ಬಂದರೆ ಮತಾಂತರ ಬಿಲ್ ವಾಪಸ್ ಪಡೆಯೋದಾಗಿ ಹೇಳಿದ್ದಾರೆ. ನಿಮ್ಮ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ಭಾರತ್ ಜೋಡೋ ಕೆಲಸ ಮಾಡ್ತಿದ್ದಾರೆ. ಕಾಶ್ಮೀರ ನಮ್ಮದೇ ಅಲ್ಲ ಅನ್ನುವ ಹಾಗೆ ಮಾಡಿದ್ರಿ. ಆರ್ಟಿಕಲ್ 370 ತಂದು ನಮ್ಮದೇ ಅಂತ ಮಾಡಿದ್ದೇವೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 370 ತೆಗೆಯೋದಾಗಿ ಹೇಳಿದ್ದೀರಿ. ಇದು ಭಾರತ್ ಜೋಡೋ ಅಲ್ಲ, ಭಾರತ್ ಚೋಡೋ ಎಂದು ಕಿಡಿ ಕಾರಿದರು.
ತಳ ಸಮುದಾಯದಲ್ಲಿ ಮಾತ್ರ ಇಂತಹ ಸಮಸ್ಯೆ ಇರೋದು. ಅವರನ್ನ ಟಾರ್ಗೆಟ್ ಮಾಡಿ, ಮತಾಂತರ ಮಾಡುವ ಕೆಲಸ ಮಾಡಿದ್ದಾರೆ. ಮತಾಂತರ ಆಗಿ ಹೋಗಿ, ಬೀದಿ ಪಾಲಾಗಬೇಕು ಅನ್ನೋದು ಅವರ ಉದ್ದೇಶ. ದಲಿತರನ್ನ ಸರ್ವನಾಶ ಮಾಡಬೇಕು ಅನ್ನೋದು ಅವರ ಉದ್ದೇಶ. ದವಸ ಧಾನ್ಯ, ವಿದ್ಯಾಭ್ಯಾಸ, ಆರೋಗ್ಯ ಕೊಡ್ತೀವಿ ಅಂತ ಹೇಳಿ ಕ್ರೈಸ್ತ ಸಮುದಾಯ ಮತಾಂತರ ಮಾಡುತ್ತಿದೆ.
ಅವರ 75 ವರ್ಷದ ವಾರ್ಷಿಕ ಸಭೆಯಲ್ಲಿ ನಮ್ಮ ಕ್ರಿಶ್ಚಿಯನ್ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದರೆ ಅದು ಪರಿಶಿಷ್ಟ ಜಾತಿಗಳಿಂದ ಎಂದು ತಿಳಿಸಿದರು.
(ಇದನ್ನೂ ಓದಿ: ದಲಿತ ಸಹೋದರಿಯರ ಅತ್ಯಾಚಾರ ಕೊಲೆ ಪ್ರಕರಣ; ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ : ನಾರಾಯಣ ಸ್ವಾಮಿ)