ETV Bharat / state

ಬಡತನ ನಿರ್ಮೂಲನೆಗೆ ಜನಸಂಖ್ಯೆ ನಿಯಂತ್ರಣ ಅಗತ್ಯ, ಯುಪಿ ನಡೆ ಸ್ವಾಗತಾರ್ಹ: ಕೇಂದ್ರ ಸಚಿವ ಅಠಾವಳೆ - ರಾಮದಾಸ್ ಅಠಾವಳೆ

ಬಡತನ ನಿರ್ಮೂಲನೆಯಾಗಬೇಕು ಎಂದರೆ ಜನಸಂಖ್ಯೆ ನಿಯಂತ್ರಣವಾಗಬೇಕು. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆ ತರುತ್ತಿರುವುದು ಅನುಕೂಲಕರವಾಗಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ರು.

central minister ramdas atavale pressmeet
ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸುದ್ದಿಗೋಷ್ಟಿ
author img

By

Published : Jul 11, 2021, 4:40 PM IST

ಬೆಂಗಳೂರು: ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆ ತರಲಾಗುತ್ತಿದೆ. ಬಡತನ ನಿರ್ಮೂಲನೆಯಾಗಬೇಕು ಎಂದರೆ ಜನಸಂಖ್ಯೆ ನಿಯಂತ್ರಣವಾಗಬೇಕು ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಪ್ರತಿಪಾದಿಸಿದ್ದಾರೆ.

ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸುದ್ದಿಗೋಷ್ಟಿ

ಕುಮಾರಕೃಪಾ ಅತಿಥಿಗೃಹದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಉತ್ತರಪ್ರದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕರಡು ವಿಧೇಯಕ ರಚನೆ ಮಾಡಲಾಗಿದೆ. ಜನಸಂಖ್ಯೆ ಹೆಚ್ಚಳ ತಗ್ಗಿಸಲು ಈ ನಿಯಮ ತರಲಾಗುತ್ತಿದೆ. ಇದರ ಅರ್ಥ ಒಂದು ಕೋಮಿನ ಸಂಖ್ಯೆ ನಿಯಂತ್ರಿಸುವುದಲ್ಲ. ಪಾಕಿಸ್ತಾನಕ್ಕಿಂತ ಭಾರತದಲ್ಲಿ ಒಂದು ಕೋಮಿನ ಜನಸಂಖ್ಯೆ ಹೆಚ್ಚಿದೆ ಎಂದ ಮಾತ್ರಕ್ಕೆ ಇಲ್ಲಿ ಅವರ ಸಂಖ್ಯೆ ಹೆಚ್ಚಾಗುತ್ತಿದೆ ಅಂದಲ್ಲ. ಮೊದಲೆಲ್ಲಾ ಹೆಚ್ಚಾಗುತ್ತಿತ್ತು ಎನ್ನುವುದು ನಿಜ. ಆದರೆ ಈಗ ಮೂರ್ನಾಲ್ಕು ಪತ್ನಿಯರನ್ನು ಹೊಂದುವುದು ಕಡಿಮೆಯಾಗಿದೆ. ಇಂದು ಓರ್ವ ಪತ್ನಿಯನ್ನು ಸಾಕುವುದೇ ಕಷ್ಟವಾಗಿದೆ, ಇನ್ನೆಲ್ಲಿ ಮೂರ್ನಾಲ್ಕು ಪತ್ನಿಯರನ್ನು ಹೊಂದುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಸುಪ್ರೀಂಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಕಾನೂನು ತರಬೇಕಿದೆ. ಬಡತನ ಕಡಿಮೆ ಆಗಬೇಕು ಎಂದರೆ ಜನಸಂಖ್ಯೆ ಕಡಿಮೆ ಆಗಬೇಕು, ಹಿಂದೂ ಸೇರಿದಂತೆ ಇತರೆ ಧರ್ಮಗಳಲ್ಲೂ ಜನಸಂಖ್ಯೆ ಹೆಚ್ಚಾಗಿದೆ. ಅಲ್ಲಿಯೂ ಜನಸಂಖ್ಯೆ ಇಳಿಕೆ ಇಂದಿನ‌ ಅಗತ್ಯ ಎಂದರು‌.

ಮೀಸಲಾತಿ ಹೆಚ್ಚಿಸುವ ಅಧಿಕಾರ ರಾಜ್ಯಗಳಿಗಿದೆ:

ಮೀಸಲಾತಿ ಪ್ರಮಾಣ ಶೇ.50 ಮೀರಬಾರದು ಅಂತಾ ಕೋರ್ಟ್ ಹೇಳಿದೆ, ಇದು ನ್ಯಾಯಾಲಯದ ಅಭಿಪ್ರಾಯ. ಆದರೆ ಮೀಸಲಾತಿ ಹೆಚ್ಚಿಸುವ ಅಗತ್ಯ ಇದೆ. ಈ ಕುರಿತು ಕೇಂದ್ರ ಸರ್ಕಾರ ನಿಯಮ ರೂಪಿಸಬೇಕಿದೆ. ರಾಜ್ಯಗಳಿಗೆ ಮೀಸಲಾತಿ ಕೊಡುವ ಅಧಿಕಾರ ಇದೆ. ಸಂವಿಧಾನದ 102 ವಿಧಿಯನ್ವಯ ರಾಜ್ಯಗಳಿಗೂ ಮೀಸಲಾತಿ ಹೆಚ್ಚಿಸುವ ಅಧಿಕಾರ ಇದೆ. ಮೀಸಲಾತಿ ಹೆಚ್ಚಳ ಸಂಬಂಧ ಸಂವಿಧಾನದ ತಿದ್ದುಪಡಿ ಆಗಬೇಕಿದೆ ಎಂದರು.

ಜಾತಿ ಗಣತಿ ಆಗಬೇಕು:

ದೇಶದಲ್ಲಿ ಜಾತಿಗಣತಿಯಾಗಬೇಕು. ಇದರಿಂದ ಯಾವುದೇ ಕೋಮುವಾದ ಬೆಳೆಯಲ್ಲ.ನಾನು ಮುಂದಿನ ಬಾರಿ ಜಾತಿ ಗಣತಿಗೆ ಆಗ್ರಹಿಸುತ್ತೇನೆ ಇದರಿಂದ ಆಯಾ ಜಾತಿಯವರು ಎಷ್ಟು ಇದ್ದಾರೆ ಅಂತ ಗೊತ್ತಾಗುತ್ತದೆ. ಸಾಮಾಜಿಕ ಹಾಗೂ ಶೈಕ್ಷಣಿಕ ವಿಚಾರದಲ್ಲಿ ಅನುಕೂಲ ಆಗುತ್ತದೆ. ಎಸ್​​ಸಿ ಮತ್ತು ಎಸ್​ಟಿಯಲ್ಲಿ ಉಳ್ಳವರು ಪ್ರಯೋಜನ ಪಡೆಯುತ್ತಿದ್ದಾರೆ. ಹಾಗಾಗಬಾರದು, ಆರ್ಥಿಕವಾಗಿ ಹಿಂದುಳಿದವರಿಗೆ, ದುರ್ಬಲರಿಗೆ ಅನುಕೂಲ ಸಿಗುವಂತೆ ಆಗಬೇಕು ಎಂದ್ರು.

ದೇಶದಲ್ಲಿ ಜಾತಿ ವ್ಯವಸ್ಥೆ ನಿರ್ನಾಮ ಆಗಬೇಕು ಅಂದರೆ ಅಂತರ್ಜಾತಿ ವಿವಾಹ ಆಗಬೇಕು. ಇದರಿಂದ ಮಾತ್ರ ಜಾತಿ ವ್ಯವಸ್ಥೆ ನಿರ್ನಾಮ ಮಾಡಲು ಸಾಧ್ಯ. ಕರ್ನಾಟಕದಲ್ಲಿ ಬಸವಣ್ಣ ಆ ಕೆಲಸ ಮಾಡಿದ್ದರು. ಲಿಂಗಾಯತ ಧರ್ಮ ಹುಟ್ಟು ಹಾಕಿದ್ದರು. ಅಂತರ್ಜಾತಿ ವಿವಾಹ ಮಾಡಲು ಪ್ರೋತ್ಸಾಹ ನೀಡಿದ್ದರು. ಆ ವ್ಯವಸ್ಥೆ ಮತ್ತೆ ಜಾರಿಗೆ ಬರಬೇಕು ಎಂದರು.

ರಾಜ್ಯದಲ್ಲಿ ಜಾತಿ ಗಣತಿ ಅಂಗೀಕಾರಕ್ಕೆ ಸರ್ಕಾರ ವಿಳಂಬ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ರಾಜ್ಯದಲ್ಲಿ ಮಾತ್ರ ಜಾತಿ ಗಣತಿ ಮಾಡಿದರೆ ಉಪಯೋಗವಿಲ್ಲ. ದೇಶಾದ್ಯಂತ ಜಾತಿ ಗಣತಿಯಾಗಬೇಕು ಆಗ ಮಾತ್ರ ಯಾವ ಜಾತಿ ಎಷ್ಟಿದೆ ಅಂತ ತಿಳಿಯೋಕೆ ಸಾಧ್ಯ. ಮೀಸಲಾತಿ ನೀಡಲು ಸಾಧ್ಯವಾಗುತ್ತದೆ. ರಾಜ್ಯ ಸರ್ಕಾರ ಜಾತಿಗಣತಿ ಮಾಡಿದರೆ ಉಪಯೋಗವಿಲ್ಲ
ಕೇಂದ್ರ ಸರ್ಕಾರ ಜಾತಿ ಗಣತಿ ಮಾಡಲಿ, ಈ ಕುರಿತು ಪ್ರಧಾನಿ ಬಳಿ ಮನವಿ ಮಾಡುತ್ತೇನೆ ರಾಜ್ಯದ ಜಾತಿಗಣತಿಯ ಬಗ್ಗೆ ಕೂಡ ಕೇಂದ್ರ ಬಿಜೆಪಿ ನಾಯಕರ ಗಮನಕ್ಕೆ ತರುತ್ತೇನೆ ಎಂದರು.

ಕೇಂದ್ರದ ಯೋಜನೆಗಳ ಪ್ರಗತಿ ವರದಿ:

ದೇಶದಲ್ಲಿ 42.58 ಕೋಟಿ ಜನಧನ್ ಖಾತೆಗಳನ್ನು ತೆರೆಯಲಾಗಿದೆ 1.52 ಕೋಟಿ ಜನಧನ್ ಖಾತೆಗಳನ್ನು ರಾಜ್ಯದಲ್ಲಿ ತೆರೆಯಲಾಗಿದೆ. ಮುದ್ರಾ ಯೋಜನೆಯಡಿ ಉದ್ದಿಮೆದಾರರಿಗೆ 50 ಸಾವಿರದಿಂದ 10 ಲಕ್ಷದವರೆಗೆ ಸಾಲ ಸೌಲಭ್ಯ ಕೊಡಲಾಗುತ್ತಿದೆ. 30.18 ಕೋಟಿ ಜನರಿಗೆ ಈ ಯೋಜನೆಯಡಿ ಸಾಲ ಕೊಡಲಾಗಿದೆ 2.96 ಕೋಟಿ ಜನರಿಗೆ ರಾಜ್ಯದಲ್ಲಿ ಸಾಲ ಒದಗಿಸಲಾಗಿದೆ ಎಂದು ತಿಳಿಸಿದ್ರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 1.91 ಕೋಟಿ ಮನೆಗಳ ನಿರ್ಮಾಣ ಪೂರ್ಣವಾಗಿದ್ದು, 1.89 ಲಕ್ಷ ಮನೆಗಳು ರಾಜ್ಯದಲ್ಲಿ ಪೂರ್ಣಗೊಂಡಿವೆ. ಉಜ್ವಲಾ ಯೋಜನೆಯಡಿ 2015-21 ರವರೆಗೆ 35.20 ಕೋಟಿ ಜನರಿಗೆ ಯೋಜನೆಯ ಸೌಲಭ್ಯ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಉಜ್ವಲಾ ಯೋಜನೆಯ ಫಲಾನುಭವಿಗಳು 2.39 ಕೋಟಿ ಇದ್ದಾರೆ ಎಂದು ಕೇಂದ್ರದ ಯೋಜನೆಗಳ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.