ETV Bharat / state

ಮುಂದಿನ ವರ್ಷ ದೇಶದ ಆರ್ಥಿಕತೆ ಸಹಜ ಸ್ಥಿತಿಗೆ: ಕೇಂದ್ರ ಸಚಿವ ಡಿವಿಎಸ್​ - ದೇಶದ ಆರ್ಥಿಕತೆ ಸಹಜ ಸ್ಥಿತಿಗೆ ಬರಲಿದೆ

ವಿಶ್ವಬ್ಯಾಂಕ್‌ ವರದಿ ಪ್ರಕಾರ ಮುಂದಿನ ವರ್ಷದಲ್ಲಿ ಜಿಡಿಪಿ ಶೇಕಡಾ 8 ರಷ್ಟು ವೃದ್ಧಿ ಆಗುವ ಮೂಲಕ ಆರ್ಥಿಕತೆಯಲ್ಲಿ ಚೀನಾ ದೇಶವನ್ನು ಭಾರತ ಹಿಂದಿಕ್ಕಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

dv sadananda gowda
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ
author img

By

Published : Oct 18, 2020, 5:49 PM IST

ಬೆಂಗಳೂರು: 'ಕೋವಿಡ್‌ ಸಂಕಷ್ಟ ಕಾಲದಲ್ಲೂ ಅಪಾರ್ಟ್‌ಮೆಂಟ್‌ಗಳ ನಿರ್ಮಾಣದಂತಹ ಕಾರ್ಯಕ್ಕೆ ಚಾಲನೆ ಸಿಗುತ್ತಿರುವುದು, ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಪುನಶ್ಚೇತನಗೊಳ್ಳುವತ್ತ ದಾಪುಗಾಲು ಹಾಕುತ್ತಿರುವುದನ್ನು ತೋರಿಸುತ್ತವೆ. ವಿಶ್ವಬ್ಯಾಂಕ್‌ ವರದಿಯ ಪ್ರಕಾರ ಮುಂದಿನ ವರ್ಷ ದೇಶದ ಆರ್ಥಿಕತೆ ಹಾದಿಗೆ ಬರಲಿದೆ' ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಯಲಹಂಕದಲ್ಲಿ ಸಾಯಿಕಲ್ಯಾಣ್‌ ವಾಟರ್‌ ಎಡ್ಜ್‌ ವಸತಿ ಸಮುಚ್ಚಯ ಭೂಮಿ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಕೊರೊನಾ ಕಾಲದಲ್ಲಿ ಜಾಗತಿಕವಾಗಿ ಆರ್ಥಿಕತೆ ಕುಸಿತ ಕಂಡಿದೆ. ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ನಮ್ಮದು. ನಮ್ಮ ದೇಶದ ಆರ್ಥಿಕತೆಗೆ ಬಹಳಷ್ಟು ಆಘಾತ ಉಂಟಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಯೋಜನೆ, 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್‌ ಆರ್ಥಿಕತೆಗೆ ಒಳ್ಳೆಯ ಬಲವನ್ನು ನೀಡಿದೆ. ಮೊನ್ನೆ ಬಿಡುಗಡೆಯಾದ ವಿಶ್ವಬ್ಯಾಂಕ್‌ ವರದಿ ಪ್ರಕಾರ ಮುಂದಿನ ವರ್ಷದಲ್ಲಿ ಜಿಡಿಪಿ ಶೇ 8 ರಷ್ಟು ವೃದ್ಧಿ ಆಗುವ ಮೂಲಕ ಆರ್ಥಿಕತೆಯಲ್ಲಿ ಚೀನಾ ದೇಶವನ್ನು ಭಾರತ ಹಿಂದಿಕ್ಕಲಿದೆ. ಕೋವಿಡ್‌ ಸಮಯದಲ್ಲಿ ದೇಶದಲ್ಲಿ ಶೇ 40 ರಷ್ಟು ರಾಸಾಯನಿಕ ಗೊಬ್ಬರಗಳ ಮಾರಾಟ ಹೆಚ್ಚಾಗಿದೆ. ಕೃಷಿಯತ್ತ ಜನರ ಒಲವು ಹೆಚ್ಚಾಗಿರುವುದು ಸಂತಸದ ವಿಷಯವಾಗಿದೆ' ಎಂದರು.

'ಕೋವಿಡ್‌ ಸಮಯದಲ್ಲೂ ಸಾಯಿ ಕಲ್ಯಾಣ್‌ ನವರು 500 ಫ್ಲಾಟ್‌ಗಳ ನಿರ್ಮಾಣಕ್ಕೆ ಮುಂದಾಗಿರುವುದು ಒಳ್ಳೆಯ ಕಾರ್ಯ. ಇಂತಹ ಯೋಜನೆಗಳಿಂದಲೇ ಬೆಂಗಳೂರು ನಗರದಲ್ಲಿ ಉದ್ಯೋಗಾವಕಾಶ ಹೆಚ್ಚುವ ಮೂಲಕ ರಾಜ್ಯ ಹಾಗೂ ದೇಶದ ಆರ್ಥಿಕತೆಗೆ ಉತ್ತೇಜನ ದೊರಕಲಿದೆ' ಎಂದು ಹೇಳಿದರು.

'ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಅತ್ಯುತ್ತಮ ಕೆಲಸದಲ್ಲಿ ತೊಡಗಿಕೊಂಡಿದೆ. ಭಾರತೀಯ ಜನತಾ ಪಕ್ಷ ಕೆಲಸ ಮಾಡಿ ವೋಟ್‌ ಕೇಳುವ ಪಕ್ಷವಾಗಿದೆ. ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಗೆಲವು ಶತಸಿದ್ದ' ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.