ETV Bharat / state

83 ತೇಜಸ್ ವಿಮಾನಗಳ ಖರೀದಿಗೆ ಹೆಚ್​ಎಲ್​ ಜೊತೆ ಕೇಂದ್ರ ಸರ್ಕಾರ ₹48 ಸಾವಿರ ಕೋಟಿ ಒಪ್ಪಂದ

ಈ ಒಪ್ಪಂದಕ್ಕೆ ಇಂದು ನಡೆದ ಏರೋ ಇಂಡಿಯಾ 2021 ಉದ್ಘಾಟನಾ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಹಾಗೂ ರಕ್ಷಣ ಸಚಿವಾಲಯದ ಮಹಾನಿರ್ಧೇಶಕ ವಿಎಲ್​ ಕಾಂತರಾವ್​ ಅವರು ಹೆಚ್​ಎಎಲ್‌ ವ್ಯವಸ್ಥಾಪಕ ನಿರ್ದೇಶಕ ಆರ್‌. ಮಾಧದವನ್ ಅವರಿಗೆ ಈ ಒಪ್ಪಂದದ ಕರಾರು ಪತ್ರವನ್ನು ಹಸ್ಥಾಂತರಿಸಿದರು.

83 ತೇಜಸ್ ವಿಮಾನಗಳ ಖರೀದಿಗೆ ಹೆಚ್​ಎಲ್​ ಜೊತೆ ಕೇಂದ್ರ‌ ಒಪ್ಪಂದ
ರಾಜನಾಥ್​ ಸಿಂಗ್​
author img

By

Published : Feb 4, 2021, 12:35 AM IST

ಬೆಂಗಳೂರು : ಐತಿಹಾಸಿಕ 13ನೇ‌ ಆವೃತ್ತಿಯ ಏರೋ‌ ಇಂಡಿಯಾ 2021 ಇಂದು‌ ಭರ್ಜರಿ ಚಾಲನೆ ಕಂಡಿದೆ. ಇನ್ನು ಇದೇ ವೇಳೆ ಕೇಂದ್ರ ಸರ್ಕಾರ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ 83 ತೇಜಸ್ ಲೈಟ್ ಕಾಂಬ್ಯಾಟ್ ಯುದ್ಧ ವಿಮಾನ‌ಗಳನನ್ನು ಖರೀದಿಸಲು 48 ಸಾವಿರ ಕೋಟಿ ಕೊಟ್ಟು ಕೊಂಡುಕೊಳ್ಳುವ ಒಪ್ಪಂದಕ್ಕೆ ಬುಧವಾರ ಸಹಿಯಾಕಿದೆ.

ಈ ಒಪ್ಪಂದಕ್ಕೆ ಇಂದು ನಡೆದ ಏರೋ ಇಂಡಿಯಾ 2021 ಉದ್ಘಾಟನಾ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಹಾಗೂ ರಕ್ಷಣ ಸಚಿವಾಲಯದ ಮಹಾನಿರ್ಧೇಶಕ ವಿಎಲ್​ ಕಾಂತರಾವ್​ ಅವರು ಹೆಚ್​ಎಎಲ್‌ ವ್ಯವಸ್ಥಾಪಕ ನಿರ್ದೇಶಕ ಆರ್‌. ಮಾಧದವನ್ ಅವರಿಗೆ ಈ ಒಪ್ಪಂದದ ಕರಾರು ಪತ್ರವನ್ನು ಹಸ್ಥಾಂತರಿಸಿದರು.

ಇನ್ನು ಈ‌‌ ಒಪ್ಪಂದದ ಪ್ರಕಾರ ಕೇಂದ್ರ ಸರ್ಕಾರದ ಭದ್ರತಾ ಸಮಿತಿ 73 ತೇಜಸ್ Mk-IA ಮತ್ತು 10LCA ತೇಜಸ್ Mk-I ತರಬೇತಿ ಯುದ್ಧ ವಿಮಾನಗಳನ್ನು ಹೆಚ್‌ಎಎಲ್​ನಿಂದ ಕೊಂಡುಕೊಳ್ಳಲಿದೆ. ತೇಜಸ್ ಸಿಂಗಲ್ ಇಂಜಿನ್ ಯುದ್ಧ ವಿಮಾನವನ್ನ ಹೆಚ್​.ಎ.ಎಲ್ ಉತ್ಪಾದನೆ‌ ಮಾಡುತ್ತಿದ್ದು, ಈ‌ ವಿಮಾನವು ಯುದ್ಧದಲ್ಲಿ ಎದುರಾಗುವ ಕಠಿಣ ಸಯಮದಲ್ಲೂ ಉತ್ತಮ‌ ಕಾರ್ಯನಿರ್ವಹಿಸುವ ಕ್ಷಮತೆಯನ್ನ ಹೊಂದಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ:ರಕ್ಷಣಾ ಸಿಬ್ಬಂದಿ ಮಿಸೈಲ್ ಫೈರ್ ಪ್ರಕ್ರಿಯೆ ಹೇಗಿರುತ್ತೆ.. ಇಲ್ಲಿದೆ ಸಂಪೂರ್ಣ ವಿವರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.