ಬೆಂಗಳೂರು: ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಸಿಡಿ ಯುವತಿಯ ಮೆಡಿಕಲ್ ಟೆಸ್ಟ್ ಮುಗಿದಿದ್ದು, ಆಡುಗೋಡಿ ವಿಚಾರಣಾ ಕೇಂದ್ರಕ್ಕೆ ಕರೆತರಲಿದ್ದಾರೆ. ನಿನ್ನೆ ಎಸ್ಐಟಿ ತನಿಖಾಧಿಕಾರಿಗಳ ಮುಂದೆ ಸಿಆರ್ಪಿಸಿ ಸೆಕ್ಷನ್ 161ರ ಅಡಿ ಯುವತಿಯ ಹೇಳಿಕೆ ದಾಖಲಿಸಿಕೊಂಡಿದ್ದು, ಇಂದು ಸಹ ವಿಚಾರಣೆ ಮುಂದುವರೆಸಲಿದ್ದಾರೆ. ನಿನ್ನೆ ಎಸ್ಐಟಿ ವಿಚಾರಣೆಯಲ್ಲಿ ಯುವತಿ ಹೇಳಿದ್ದೇನು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಯುವತಿ ಹೇಳಿಕೆ ಬೆನ್ನಲ್ಲೆ ಅಲರ್ಟ್ ಆದ ಜಾರಕಿಹೊಳಿ ಸಹೋದರರು: ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಗೆ ಸಿದ್ಧತೆ
ಎಸ್ಐಟಿ ತನಿಖಾಧಿಕಾರಿಗಳ ಮುಂದೆ ಯುವತಿ ಹೇಳಿದ್ದೇನು? : ಮೊದಲ ಬಾರಿಗೆ ವಿಧಾನಸೌಧಕ್ಕೆ ಹೇಗೆ ಹೋಗಿದ್ದೆ? - ಮೊಬೈಲ್ ನಂಬರ್ ಕೊಟ್ಟು ಯಾರಿಗೂ ಹೇಳಬಾರದು ಎಂದು ಮಲ್ಲೇಶ್ವರಂ ಪಿಜಿ ಅಂತಾ ಸೇವ್ ಮಾಡಿಸಿದ್ದರು. ಬಳಿಕ ಸಹಕಾರ ನೀಡಬೇಕೆಂದು ನನ್ನ ಮೇಲೆ ಎರಡು - ಮೂರು ಸಲ ದೈಹಿಕ ಸಂಪರ್ಕ ಬೆಳೆಸಿದ್ದರು. ನಮ್ಮ ಭಾಗದಲ್ಲಿ ಅವರು ಪ್ರಭಾವಿ ಸಚಿವರು.. ಏನಾದರೂ ಮಾಡುತ್ತಾರೆ ಎಂದು ಭಯಗೊಂಡು ಸುಮ್ಮನಿದ್ದೆ. ಆ ವೇಳೆ ನನಗೆ ನನ್ನ ಮೇಲೆಯೇ ಜಿಗುಪ್ಸೆ , ಭಯ ಕಾಡಿತ್ತು ಎಂದಿದ್ದಾಳೆ ಎಂದು ಹೇಳಲಾಗಿದೆ.
ತಾಯಿ ಬಳಿ ಈ ವಿಚಾರ ಹೇಳಲಿಲ್ಲ ಎಂದು ಕೇಳಿದಕ್ಕೆ ಉತ್ತರಿಸಿದ ಯುವತಿ ಹೇಗೆ ಹೇಳೋಕೆ ಸಾಧ್ಯ ಸರ್. ಯಾವ ಮಗಳು ತಾನೇ ತನ್ನ ಪೋಷಕರ ಬಳಿ ಇಂಥಾ ವಿಚಾರ ಹೇಳಿಕೊಳ್ಳೋಕೆ ಸಾಧ್ಯ. ಅದೂ ಅಲ್ಲದೆ ಲೈಂಗಿಕ ದೌರ್ಜನ್ಯ ನಡೆಸುವುದನ್ನು ರಮೇಶ್ ಜಾರಕಿಹೊಳಿ ವಿಡಿಯೋ ಮಾಡಿ ಇಟ್ಟುಕೊಂಡಿದ್ದರು. ಆಗಾಗ ಕಾಲ್ ಮಾಡಿ ಬರೋಕೆ ಹೇಳುತ್ತಿದ್ದರು. ಭಯಬಿದ್ದು ಹೋಗ್ತಿದ್ದೆ. ಅಲ್ಲದೆ ಅಶ್ಲೀಲವಾಗಿ ಬೈತಿದ್ರು. ನನಗೆ ಹಿಂಸೆಯಾಗಿ ಈ ವಿಚಾರವನ್ನು ಶ್ರವಣ್ ಬಳಿ ಹೇಳಿದೆ. ಶ್ರವಣ್ ನನ್ನ ಕ್ಲಾಸ್ಮೇಟ್. ವಿಟಿಯು ಪ್ರೊಟೆಸ್ಟ್ ವೇಳೆ ಪರಿಚಯವಾಗಿದ್ದ. ಶ್ರವಣ್ ಮೂಲಕ ನರೇಶಣ್ಣನ ಪರಿಚಯವಾಯಿತು. ನನಗೆ ಆಗುತ್ತಿರುವ ಹಿಂಸೆ ಬಗ್ಗೆ ಹೇಳಿದ್ದೆ. ಡಾಕ್ಯುಮೆಂಟ್ಸ್ ಇಲ್ಲದೆ ಏನೂ ಆಗುವುದಿಲ್ಲ ಅಂದ್ರು. ಹೀಗಾಗಿ ನಾನು ವಿಡಿಯೋ ಮಾಡಿಕೊಂಡು ಆರ್ಟಿ ನಗರದ ಪಿಜಿಯಲ್ಲಿ ಇಟ್ಟಿದ್ದೆ. ಇನ್ನೊಂದು ಕಾಪಿ ನರೇಶಣ್ಣನ ಕೈಗೆ ಕೊಟ್ಟಿದ್ದೆ. ವಿಡಿಯೋ ಯಾರು ಹೊರಗೆ ಬಿಟ್ಟರೋ ಅಂತಾ ಗೊತ್ತಿಲ್ಲ. ಸ್ನೇಹಿತ ಆಕಾಶ್ಗೆ ಈ ವಿಷಯ ಗೊತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ.