ETV Bharat / state

ರಮೇಶ್ ಜಾರಕಿಹೊಳಿ ಸಿಡಿ ಕೇಸ್​​​: ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾದ ಆರೋಪಿಗಳು - ನರೇಶ್ ಗೌಡ ಮತ್ತು ಶ್ರವಣ್

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳು ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ಹಾಜರಾಗುಂತೆ ನ್ಯಾಯಾಲಯ ಸೂಚಿಸಿತ್ತು.

CD case accused arrived for SIT  investigation
ನರೇಶ್ ಗೌಡ ಮತ್ತು ಶ್ರವಣ್
author img

By

Published : Jun 12, 2021, 1:02 PM IST

Updated : Jun 12, 2021, 1:20 PM IST

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ರೂವಾರಿಗಳು ಎಂದು ಹೇಳಲಾಗ್ತಿರುವ ನರೇಶ್ ಗೌಡ ಮತ್ತು ಶ್ರವಣ್ ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಈ ಇಬ್ಬರ ಮೇಲೆ ಸದಾಶಿವನಗರ ಠಾಣೆಯಲ್ಲಿ ಷಡ್ಯಂತ್ರ, ಬ್ಲ್ಯಾಕ್​​ಮೇಲ್ ಕೇಸ್‌ ದಾಖಲಾಗಿತ್ತು. ಇದೀಗ ಕೋರ್ಟ್ ಆದೇಶದಂತೆ ವಿಚಾರಣೆಗೆ ಹಾಜರಾಗಿದ್ದಾರೆ. ಷಡ್ಯಂತ್ರ, ಬ್ಲ್ಯಾಕ್​​ಮೇಲ್ ಆರೋಪ ಪ್ರಕರಣದಲ್ಲಿ ಇಬ್ಬರು ಸೆಷನ್ಸ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಆದರೆ, ಆರೋಪಿಗಳು 5 ದಿನಗಳ ಒಳಗೆ ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿತ್ತು.

ಇದೀಗ ನ್ಯಾಯಾಲಯ ಆದೇಶ ನೀಡಿದ 5ನೇ ದಿನ, ಅಂದರೆ ಕೊನೆಯ ದಿನ ಆರೋಪಿಗಳು ವಿಚಾರಣೆ ಎದುರಿಸಲು ಆಡುಗೋಡಿ ಟೆಕ್ನಿಕಲ್ ಸೆಲ್​ಗೆ ಆಗಮಿಸಿದ್ದಾರೆ. ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಆರೋಪಿಗಳು ಎಸ್​ಐಟಿ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ಮುಂದೆ ವಕೀಲರೊಂದಿಗೆ ಹಾಜರಾಗಿದ್ದಾರೆ. ಎಸ್​ಐಟಿ ಕೂಡ ವಿಚಾರಣೆಗೆ ಸಿದ್ಧತೆ ಮಾಡಿಕೊಂಡಿದೆ.

ಬೇಲ್ ಪಡೆದರೂ ತಪ್ಪದ ಸಂಕಷ್ಟ: ನೀರೀಕ್ಷಣಾ ಜಾಮೀನು ಪಡೆದು ವಿಚಾರಣೆಗೆ ಹಾಜರಾದರೂ ಆರೋಪಿಗಳಿಗೆ ಆತಂಕ ಶುರುವಾಗಿದೆ. ಯಾಕೆಂದರೆ ಕೋರ್ಟ್ ನೀಡಿದ ಆದೇಶ ಪ್ರತಿಯಲ್ಲಿ ಅಗತ್ಯವಿದ್ದರೆ ತನಿಖಾ ತಂಡಕ್ಕೆ ಆರೋಪಿಗಳನ್ನು ಬಂಧಿಸಲು ಅವಕಾಶ ನೀಡಲಾಗಿದೆ. ಹಾಗಾಗಿ ಎಸ್​ಐಟಿ ಆರೋಪಿಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ವಿಚಾರಣೆ ಆರಂಭಿಸಿದ ತನಿಖಾಧಿಕಾರಿ : ಆರೋಪಿಗಳು ಹಾಜರಾಗುತ್ತಿದ್ದಂತೆ ತನಿಖಾಧಿಕಾರಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಮೊದಲು ಆರೋಪಿಗಳ ಹುಟ್ಟಿದ ದಿನಾಂಕ, ವಿದ್ಯಾಭ್ಯಾಸ, ತಂದೆ, ತಾಯಿ, ಊರು, ಓದಿದ ಶಾಲೆಗಳು, ಮೊದಲು ಎಲ್ಲಿ ಕೆಲಸ ಪ್ರಾರಂಭಿಸಿದ್ದು, ಮೊದಲ ಸಂಬಳ, ಕೆಲಸ ಮಾಡಿದ ಸಂಸ್ಥೆಗಳು, ಆದಾಯದ ಮೂಲ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಎಸ್​ಐಟಿ ಕಲೆ ಹಾಕಲಿದೆ.

ಸುಮಾರು 64 ಕ್ಕೂ ಅಧಿಕ ಪ್ರಶ್ನೆಗಳನ್ನು ಎಸ್​ಐಟಿ ರೆಡಿ ಮಾಡಿಟ್ಟುಕೊಂಡಿರುವ ಮಾಹಿತಿಯಿದೆ. ಆರೋಪಿಗಳು ದಿನಪೂರ್ತಿ ವಿಚಾರಣೆ ಎದುರಿಸುವ ಸಾಧ್ಯೆತೆಯಿದೆ.

Last Updated : Jun 12, 2021, 1:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.