ETV Bharat / state

ಶ್ರೀರಾಮಲು ಪಿಎ ವಂಚನೆ ಆರೋಪ ಪ್ರಕರಣ : ಒಂದೇ ದಿನಕ್ಕೆ ವಿಚಾರಣೆ ಮುಗಿಸಿ ಬಿಟ್ಟು ಕಳುಹಿಸಿದ ಸಿಸಿಬಿ

author img

By

Published : Jul 2, 2021, 2:01 PM IST

ಆಪ್ತ ಸಹಾಯಕನನ್ನು ವಶಕ್ಕೆ ಪಡೆದುಕೊಂಡ ವಿಚಾರಕ್ಕೆ ಸಂಬಂಧಪಟ್ಟಂತೆ ವಿಜಯೇಂದ್ರ ನಡೆಗೆ ಸಚಿವ ಶ್ರೀರಾಮುಲು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ರಾಜಣ್ಣ ತಪ್ಪು ಮಾಡ್ತಿದ್ದಾನೆ ಅಂದ್ರೆ ನನ್ನ ಬಳಿ ಹೇಳಬಹುದಿತ್ತು. ನಾನು ಅವನ ಮೇಲೆ ಕ್ರಮಕೈಗೊಳ್ಳುತ್ತಿದ್ದೆ. ಅದು ಬಿಟ್ಟು ವಿಜಯೇಂದ್ರ ಏಕಾಏಕಿ ದೂರು ಕೊಟ್ಟಿದ್ದಾರೆ. ನನ್ನ ಇಮೇಜ್ ಹಾಳು ಮಾಡುವ ಕೆಲಸ ಮಾಡಲಾಗಿದೆ. ನನ್ನ ಆಪ್ತ ಮೋಸ ಮಾಡಿದ್ದರೆ ನನ್ನ ಗಮನಕ್ಕೆ ತರಬಹುದಿತ್ತು. ಇದರಲ್ಲಿ ನನ್ನ ತೇಜೋವಧೆಗೆ ಇಳಿದಿರಬಹುದು ಅನಿಸುತ್ತಿದೆ..

ccb-police-released-sriramulu-pa-from-enquiry
ಶ್ರೀರಾಮಲು ಪಿಎ ರಾಜಣ್ಣ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ‌ ಪುತ್ರ ವಿಜಯೇಂದ್ರ ಸೇರಿದಂತೆ ಸಚಿವರ ಹೆಸರಿನಲ್ಲಿ ಕೆಲಸ ಮಾಡಿ ಕೊಡುವುದಾಗಿ ಕೋಟ್ಯಂತರ ರೂಪಾಯಿ‌ ವಸೂಲಿ ಮಾಡಿದ ಆರೋಪ ಸಂಬಂಧ ಸಚಿವ ಶ್ರೀರಾಮಲು ಆಪ್ತ ಸಹಾಯಕನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ. ಅಲ್ಲದೆ ಮತ್ತೆ ವಿಚಾರಣೆಗೆ ಕರೆದಾಗ ಹಾಜರಾಗುವಂತೆ ಸೂಚಿಸಿದ್ದಾರೆ.

ಸಚಿವರ ಆಪ್ತ ಸಹಾಯಕ ರಾಜಣ್ಣನನ್ನು ವಶಕ್ಕೆ‌ ಪಡೆದುಕೊಳ್ಳುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪ ಕೇಳಿ ಬಂದಿತ್ತು. ಪ್ರಕರಣದ ದೂರುದಾರರಾಗಿರುವ ವಿಜಯೇಂದ್ರ ಟ್ವೀಟ್ ಮಾಡಿ ಸ್ಪಷ್ಟನೆಯನ್ನೂ ನೀಡಿದ್ದರು.

'ಸಾರ್ವಜನಿಕರು ಮೋಸ ಹೋಗಬಾರದೆಂಬ ಹಿತದೃಷ್ಟಿಯಿಂದ ಹಾಗೂ ನನ್ನ ವ್ಯಕ್ತಿತ್ವ ರಕ್ಷಣೆಗಾಗಿ, ಅನಿವಾರ್ಯವಾಗಿ ನೀಡಿದ ದೂರಿನ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ನನ್ನನೂ ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿರುವ ಮುಖಂಡರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ, ವಂಚಿಸುವವರ ಬಗ್ಗೆ ಸಮಾಜ ಎಚ್ಚರದಿಂದರಬೇಕೆಂದು ವಿನಂತಿಸುವೆ' ಎಂದಿದ್ದರು.

ಅದೇ ರೀತಿ ಮತ್ತೊಂದು ಟ್ವೀಟ್ ಮಾಡಿರುವ ವಿಜಯೇಂದ್ರ,'ಸಾರ್ವಜನಿಕ‌ ಕ್ಷೇತ್ರದಲ್ಲಿರುವಾಗ ನೆರವು ಕೇಳುವವರನ್ನು ಅನುಮಾನಿಸಿ ನೋಡಲಾಗದು. ಹಾಗೆಂದು ಎಚ್ಚರ ತಪ್ಪಲಾಗದು.‌ ಹೆಸರು ದುರುಪಯೋಗಪಡಿಸಿಕೊಂಡು ಕಳಂಕ ಹಚ್ಚುವ ವಂಚಕರಿಂದ ತುಸು ತೊಂದರೆ ಹೆಚ್ಚಾಗಿಯೇ ಬಾಧಿಸುತ್ತಿದೆ. ಇದು ವಿರೋಧಿಗಳಿಗೆ ಅಪಪ್ರಚಾರದ ಸರಕಾಗಿಯೂ ಬಳಕೆಯಾಗುತ್ತಿದೆ' ಎಂದಿದ್ದಾರೆ.

ವಿಜಯೇಂದ್ರ ನಡೆಗೆ ಶ್ರೀರಾಮಲು ಅಸಮಾಧಾನ?

ಆಪ್ತ ಸಹಾಯಕನನ್ನು ವಶಕ್ಕೆ ಪಡೆದುಕೊಂಡ ವಿಚಾರಕ್ಕೆ ಸಂಬಂಧಪಟ್ಟಂತೆ ವಿಜಯೇಂದ್ರ ನಡೆಗೆ ಸಚಿವ ಶ್ರೀರಾಮುಲು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ರಾಜಣ್ಣ ತಪ್ಪು ಮಾಡ್ತಿದ್ದಾನೆ ಅಂದ್ರೆ ನನ್ನ ಬಳಿ ಹೇಳಬಹುದಿತ್ತು. ನಾನು ಅವನ ಮೇಲೆ ಕ್ರಮಕೈಗೊಳ್ಳುತ್ತಿದ್ದೆ. ಅದು ಬಿಟ್ಟು ವಿಜಯೇಂದ್ರ ಏಕಾಏಕಿ ದೂರು ಕೊಟ್ಟಿದ್ದಾರೆ.

ನನ್ನ ಇಮೇಜ್ ಹಾಳು ಮಾಡುವ ಕೆಲಸ ಮಾಡಲಾಗಿದೆ. ನನ್ನ ಆಪ್ತ ಮೋಸ ಮಾಡಿದ್ದರೆ ನನ್ನ ಗಮನಕ್ಕೆ ತರಬಹುದಿತ್ತು. ಇದರಲ್ಲಿ ನನ್ನ ತೇಜೋವಧೆಗೆ ಇಳಿದಿರಬಹುದು ಅನಿಸುತ್ತಿದೆ ಎಂದು ಆಪ್ತರ ಬಳಿ ಶ್ರೀರಾಮಲು ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಓದಿ: ಕೋಟ್ಯಂತರ ರೂಪಾಯಿ ವಸೂಲಿ ಆರೋಪ: ಸಚಿವ ಶ್ರೀರಾಮುಲು ಆಪ್ತ ಸಹಾಯಕ ಅರೆಸ್ಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.