ETV Bharat / state

ಸೈಲೆಂಟ್​ ಸುನೀಲನಿಗೆ ಗಾರ್ಬೇಜ್​ ಕಾಂಟ್ರ್ಯಾಕ್ಟ್ ಸಿಕ್ಕಿದ್ದು ಹೇಗೆ, ಸರ್ಕಾರಿ ಅಧಿಕಾರಿಗಳಿಗೂ ಹಾಕಿದ್ನಾ ಆವಾಜ್​?

ಹಿರಿಯ ಪೊಲೀಸ್​ ಸಿಬ್ಬಂದಿಯ ಮಾತಿಗೆ ಕ್ಯಾರೆ ಎನ್ನದ ರೌಡಿ ಶೀಟರ್ ಸೈಲೆಂಟ್ ಸುನೀಲನ ಚಟುವಟಿಕೆಗಳು ಹೆಚ್ಚಾಗುತ್ತಿದ್ದು ಇವುಗಳನ್ನು ಕತ್ತರಿಸಿ ಹಾಕಲು ನಗರದ ಪೊಲೀಸರು ತಯಾರಿ ನಡೆಸಿದ್ದಾರೆ. ಅದು ಏನಿರಬಹುದು?

ರೌಡಿ ಶೀಟರ್ ಸೈಲೆಂಟ್ ಸುನೀಲನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಮುಂದಾದ ಸಿಸಿಬಿ
author img

By

Published : May 1, 2019, 1:12 PM IST

ಬೆಂಗಳೂರು: ಪೊಲೀಸರ ಮುಂದೆಯೇ ಬಾಲ ಬಿಚ್ಚಿದ್ದ ರೌಡಿ ಶೀಟರ್ ಸೈಲೆಂಟ್ ಸುನೀಲನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಸಿಸಿಬಿ ತಯಾರಿ ನಡೆಸಿದೆ.

ಇತ್ತೀಚೆಗೆ ಚುನಾವಣೆ ಹಿನ್ನೆಲೆ ರೌಡಿ ಪರೇಡ್​​ ಮಾಡುತ್ತಿದ್ದಾಗ ಸಿಸಿಬಿ ಹೆಚ್ಚುವರಿ ಪೊಲೀಸ್​​​ ಆಯುಕ್ತ ಅಲೋಕ್​ ಕುಮಾರ್​ ಅವರನ್ನು ಗುರಾಯಿಸುವ ಮೂಲಕ ಕಣ್ಣು ಕೆಂಪು ಮಾಡಿದ್ದ. ಈ ಬಗ್ಗೆ ಅಲೋಕ್​ ಕುಮಾರ್​ ಕೂಡ ರೌಡಿಗೆ ಖಡಕ್​​ ವಾರ್ನಿಂಗ್​ ಮಾಡಿದ್ದರು. ​ಈ ವಿಡಿಯೋ ವೈರಲ್​ ಸಹ ಆಗಿತ್ತು.

ರೌಡಿ ಶೀಟರ್ ಸೈಲೆಂಟ್ ಸುನೀಲನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಮುಂದಾದ ಸಿಸಿಬಿ

ಅಂದೇ ಈತನ ಬಗ್ಗೆ ಮತ್ತಷ್ಟು ವಿಚಾರಣೆ ನಡೆಸಿದಾಗ ಸರ್ಕಾರಿ ಟೆಂಡರ್​ ನಡೆಸುವ ಸಂಗತಿಯನ್ನು ಬಾಯ್ಬಿಟ್ಟಿದ್ದ.

ಕ್ರಿಮಿನಲ್​ಗಳ ಕೈಯಲ್ಲಿ ಸರ್ಕಾರಿ ಅಧಿಕಾರಿಗಳು ನಡೆಸುವ ಗಾರ್ಬೇಜ್ ಟೆಂಡರ್​​ ಹೇಗೆ ಬಂತು ಅನ್ನೋ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ಈ ಬಗ್ಗೆ ಸಿಸಿಬಿ ಪೊಲೀಸರು ಇದೀಗ ತನಿಖೆ ಕೈಗೊಂಡಿದ್ದಾರೆ. ರೌಡಿ ಶೀಟರ್ ಸೈಲೆಂಟ್ ಸುನೀಲ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ವೈಟ್​ ಫೀಲ್ಡ್​ ಹಾಗೂ ಮಾರತ್​ ಹಳ್ಳಿ ಗಾರ್ಬೇಜ್ ಟೆಂಡರ್​ ಪಡೆದಿದ್ದನಂತೆ. ಹಾಗಾಗಿ ಅನುಮಾನ ಬಂದಿದ್ದರಿಂದ ಪೊಲೀಸರು ತನಿಖೆಗೆ ಮುಂದುವರೆಸಿದ್ದಾರೆ ಎನ್ನಲಾಗುತ್ತಿದೆ.

ಮತ್ತೊಂದೆಡೆ ಪರೇಡ್​ನಲ್ಲಿ ಸಿಸಿಬಿಯು ಸುನೀಲಗೆ ವರ್ಕ್ ಮಾಡಿದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಪ್ರಮುಖ ರಾಜಕಾರಣಿಯೊಬ್ಬರ ಆಪ್ತ ಕಾರ್ಯದರ್ಶಿಯಿಂದ ಕರೆ ಮಾಡಿಸಿ ತನ್ನನ್ನು ಬಿಡುವಂತೆ ಹೇಳಿಸಿದ್ದನಂತೆ. ಹಾಗಾಗಿ ಸಿಲಿಕಾನ್​ ಸಿಟಿಯಲ್ಲಿ ಈತನ ಚಟುವಟಿಕೆಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆ ಹಾಗೂ ಈತನೊಂದಿಗೆ ರಾಜಕಾರಣಿಗಳಿಗಿರುವ ನಂಟಸ್ಥಿಕೆಗೆ ಬ್ರೇಕ್​ ಹಾಕಲು ಪೊಲೀಸರು ಮುಂದಾಗಿದ್ದಾರೆ. ಹಾಗಾಗಿ ಹಳೆ ಪ್ರಕರಣಗಳಿಗೆ ಮರು ಜೀವ ಕೊಡುವ ನಿಟ್ಟಿನಲ್ಲಿ‌ ಅನಧಿಕೃತವಾಗಿರುವ ಕೆಲ ಪ್ರಕರಣಗಳ ಬಗ್ಗೆ ನೊಂದವರಿಂದ ದೂರು ನೀಡಿಸುವ ಪ್ರಯತ್ನ ನಡೆದಿದೆ.

Intro:ಸೈಲೆಂಟ್ ಸುನೀಲನ ಹೆಡೆಮುರಿಕಟ್ಟಲು ಮುಂದಾದ ಸಿಸಿಬಿ
ಹಳೇ ಕೇಸುಗಳಿಗೆ ಮರು ಜೀವ ಕೊಡುವ ನಿಟ್ಟಿನಲ್ಲಿ ತನಿಖೆ ಚುರುಕು

ಭವ್ಯ

ರೌಡಿ ಶೀಟರ್ ಸೈಲೆಂಟ್ ಸುನೀಲನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಸಿಸಿಬಿ ತಯಾರಿ ನಡೆಸಿದೆ.. ಇತ್ತಿಚ್ಚೆಗೆ ಚುನಾವಣೆ ಹಿನ್ನೆಲೆ ರೌಡಿ ಪರೇಡ್ ವೇಳೆ ಅಲೋಕ್ ಕುಮಾರ್ ಜೊತೆ ಗುರಾಯಿಸಿ ರೆಸ್ಪೆಕ್ಟ್ ಕೊಡದೆ ಇರುವ ವಿಚಾರಕ್ಕೆ ಅಲೋಕ್ ಗರಂ ಆಗಿದ್ರು.. ಈ ವೇಳೆ ಈತನ ವಿಚಾರಣೆ ನಡೆಸಿದಾಗ ಈತ ಇತ್ತಿಚ್ಚೆಗೆ
ಸರ್ಕಾರಿ ಟೆಂಡರ್ ನಡೆಸು ವ ವಿಚಾರ ಬಾಯಿಬಿಟ್ಟಿದ್ದ..
ಕ್ರಿಮಿನಲ್ ಕೈಯಲ್ಲಿ ಸರ್ಕಾರಿ ಅಧಿಕಾರಿಗಳು ನಡೆಸುವ ಗಾರ್ಬೇಜ್ ಟೆಂಡರ್ ಹೇಗೆ ಬಂತು ಅನ್ನೋ ಅನುಮಾನ ಕಾಡಿದೆ ಸಿಸಿಬಿಗೆ.. ಯಾಕಂದ್ರೆ ವೈಟ್ ಫೀಲ್ಡ್ ,ಮಾರತ್ ಹಳ್ಳಿ ಗಾರ್ಬೇಜ್ ಟೆಂಡರ್ ಸೈಲೆಂಟ್ ಸುನೀಲ ನಡೆಸುತ್ತಿದ್ದಾನೆ..ಸರ್ಕಾರಿ ಅಧಿಕಾರಿಗಳಿಗೆ ಬೆದರಿಸಿ ಟೆಂಡರ್ ಪಡೆದಿದ್ದನ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ.

ಮತ್ತೊಂದೆಡೆ ಪರೇಡ್ ನಲ್ಲಿ ಸಿಸಿಬಿ ಸುನೀಲಗೆ ವರ್ಕ್ ಮಾಡಲು ಮುಂದಾದಾಗ ಪ್ರಮುಖ ರಾಜಕಾರಣಿ ಪಿಎಸ್ ಯಿಂದ ಕರೆ ಬಂದಿತ್ತು..ಮಾಧ್ಯಮಗಳಲ್ಲಿ ಸುದ್ಧಿ ಪ್ರಸಾರವಾಗುತಿದ್ದಂತೆ ಸೈಲೆಂಟ್ ಸುನೀಲನ ಬಿಡುವಂತೆ ಕರೆ ಮಾಡಿದ್ದ ರಾಜಕಾರಣಿಯೊಬ್ಬರ ಪರ್ಸನಲ್ ಸೆಕ್ರೆಟರಿ.. ಹೀಗಾಗಿ ಈತನ ಚಟುವಟಿಕೆ ಸಿಲಿಕಾನ್ ಸಿಟಿಯಲ್ಲಿ ಜಾಸ್ತಿಯಾಗುವ ಹಿನ್ನೆಲೆ ಈತನ ಇನ್ಪ್ಯೂಯೆನ್ಸ್ ಇರುವ ರಾಜಕಾರಣಿಗಳಿಗೆ ಬ್ರೇಕ್ ಹಾಕಲು ಮುಂದಾಗಿ ಹಳೇ ಕೇಸುಗಳಿಗೆ ಮರು ಜೀವ ಕೊಡುವ ನಿಟ್ಟಿನಲ್ಲಿ‌ ಅನಧಿಕೃತವಾಗಿರುವ ಕೆಲ ಪ್ರಕರಣಗಳ ಬಗ್ಗೆ ನೊಂದವರಿಂದ ದೂರನೀಡಿಸೋ ಪ್ರಯತ್ನ ನಡೆಸಿ ಸುನೀಲನ ಹೆಡೆಮುರಿ ಕಟ್ಟೋಕ್ಕೆ ಸಿಸಿಬಿ ರೆಡಿಯಾಗಿದೆ‌

Body:KN_BNG_01-1-19-SUNIL_BHAVYA_7204498Conclusion:KN_BNG_01-1-19-SUNIL_BHAVYA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.