ETV Bharat / state

ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣ: ವಶದಲ್ಲಿರುವ ಶಂಕಿತರಿಗೂ CCTVಯಲ್ಲಿ ಸೆರೆಯಾಗಿರುವವರಿಗೂ ಹೋಲಿಕೆಯೇ ಆಗ್ತಿಲ್ಲ!

ನಿವಾಸ ಹಿಂಭಾಗದಿಂದ ಆರೋಪಿಗಳು ನುಗ್ಗಿ ಕೃತ್ಯ ಎಸಗಿರುವುದನ್ನು ಮನಗಂಡಿರುವ ಶಾಸಕ ಸತೀಶ್ ರೆಡ್ಡಿ , ಘಟನೆ ಬಳಿಕ‌ ಎಚ್ಚೆತ್ತುಕೊಂಡಿದ್ದಾರೆ. ಮನೆಯ ಹಿಂಬದಿ ಸಂಪೂರ್ಣವಾಗಿ ಮುಚ್ಚುವ ಹಾಗೆ ವೆಲ್ಡಿಂಗ್ ಮಾಡಿಸುತ್ತಿದ್ದಾರೆ. ಅಲ್ಲದೇ ಹಿಂಬದಿ ಗೇಟ್ ಜೊತೆ ಹಿಂಬದಿ ರಸ್ತೆಗೂ ಸಿಸಿಟಿವಿ ಅಳವಡಿಕೆಗೆ ಪ್ಲಾನ್‌ ರೂಪಿಸಿದ್ದಾರೆ.

Case of setting fire to satish reddy  cars
ವಶದಲ್ಲಿರುವ ಶಂಕಿತರಿಗೂ CCTVಯಲ್ಲಿ ಸೆರೆಯಾಗಿರುವರಿಗೂ ಹೋಲಿಕೆಯಾಗುತ್ತಿಲ್ಲ!
author img

By

Published : Aug 13, 2021, 7:11 PM IST

Updated : Aug 13, 2021, 7:28 PM IST

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆಯ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದುಕೊಂಡಿರುವ ಶಂಕಿತರಿಗೂ ಸಿಸಿಟಿವಿಯಲ್ಲಿ ಸೆರೆಯಾಗಿರುವ ಆರೋಪಿಗಳಿಗೂ ಸಾಮ್ಯತೆ ಕಂಡು ಬರದ ಕಾರಣ ಕೃತ್ಯ ಎಸಗಿದ ದುಷ್ಕರ್ಮಿಗಳಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಪ್ರಕರಣ ಬೇಧಿಸಲು ರಚಿಸಲಾಗಿರುವ ಐದು ವಿಶೇಷ ತಂಡಗಳು ನಿರಂತರ ಕಾರ್ಯಾಚರಣೆ ನಡೆಸಿ ನಿನ್ನೆ ಇಬ್ಬರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದವು. ವಿಚಾರಣೆ ಸಂದರ್ಭದಲ್ಲಿ ಸೆರೆಯಾಗಿರುವ ಸಿಸಿಟಿವಿ ದೃಶ್ಯಾವಳಿಗಳಿಗೂ ವಶಕ್ಕೆ‌ ಪಡೆದುಕೊಂಡಿರುವ ಶಂಕಿತನ ಬಾಡಿ ಲಾಂಗ್ವೇಜ್ ಹೋಲಿಕೆಯಾಗುತ್ತಿಲ್ಲ. ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕ್ಷ್ಯಾಧಾರ ಲಭ್ಯವಾಗದ ಕಾರಣ ನಿಜವಾದ ಆರೋಪಿಗಳ ಪತ್ತೆಗಾಗಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ.

ವಾಹನ ಕಳ್ಳತನ ಮಾಡಿದ್ದ ಆರೋಪಿಗಳು

ತಡರಾತ್ರಿ ಸತೀಶ್ ರೆಡ್ಡಿ ಮನೆಗೆ ನುಗ್ಗಿ ಎರಡು ಕಾರುಗಳಿಗೆ ಬೆಂಕಿಯಿಟ್ಟ ಬಳಿಕ ತಲೆಮರೆಸಿಕೊಳ್ಳಲು ದುಷ್ಕರ್ಮಿಗಳು ಬಹಳ ಹೊತ್ತು ಅದೇ ಏರಿಯಾದಲ್ಲಿ ವಾಹನ‌ ಕಳ್ಳತನಕ್ಕೂ ಯತ್ನಿಸಿದ್ದಾರೆ. ಠಾಣಾ ವ್ಯಾಪ್ತಿಯೊಂದರಲ್ಲಿ ನಿಲ್ಲಿಸಲಾಗಿದ್ದ ಬೈಕ್ ಹಾಗೂ ಆಟೋ ಕಳ್ಳತನಕ್ಕೆ ಪ್ರಯತ್ನಿಸಿ ವಿಫಲರಾಗಿದ್ದಾರೆ. ‌ನಿರಂತರ ಪ್ರಯತ್ನದ ಬಳಿಕ ಒಂದು ಬಜಾಜ್ ಪ್ಲಾಟಿನಂ ಬೈಕ್ ಹ್ಯಾಂಡಲ್ ಮುರಿದು ಕಿಡಿಗೇಡಿಗಳು ಕಳ್ಳತನ ಮಾಡಿದ್ದಾರೆ.

ಇದಕ್ಕೂ ಮುನ್ನ ಮೂವರು ಆರೋಪಿಗಳು ಒಂದರಿಂದ ಎರಡು ಗಂಟೆಗಳ ಕಾಲ‌‌ ಏರಿಯಾ ಸುತ್ತಮುತ್ತ ಓಡಾಡಿದ್ದಾರೆ. ಮುಖ ಚಹರೆ ಗೊತ್ತಾಗದಿರಲು ದಾರಿ ಮಧ್ಯೆ ಚಪ್ಪಲಿ ಮತ್ತು ಬಟ್ಟೆ ಬದಲಾಯಿಸಿದ್ದಾರೆ. ಸುಮಾರು ಏಳರಿಂದ ಎಂಟು ಮನೆಗಳ ಮೇಲೆ ಹತ್ತಿ ಓಡಾಡಿದ್ದಾರೆ.‌ ಕೆಲಹೊತ್ತು ಅಲ್ಲೇ ಕುಳಿತು ವಿಶ್ರಾಂತಿ ಪಡೆದಿದ್ದಾರೆ. ಬಳಿಕ ಕದ್ದ ಬೈಕ್ ಮುಖಾಂತರ ತಲೆಮರೆಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನೆ ಬಳಿಕ ಎಚ್ಚೆತ್ತ ಸತೀಶ್ ರೆಡ್ಡಿ

ನಿವಾಸ ಹಿಂಭಾಗದಿಂದ ಆರೋಪಿಗಳು ನುಗ್ಗಿ ಕೃತ್ಯ ಎಸಗಿರುವುದನ್ನು ಮನಗಂಡಿರುವ ಶಾಸಕ ಸತೀಶ್ ರೆಡ್ಡಿ , ಘಟನೆ ಬಳಿಕ‌ ಎಚ್ಚೆತ್ತುಕೊಂಡಿದ್ದಾರೆ. ಮನೆಯ ಹಿಂಬದಿ ಸಂಪೂರ್ಣವಾಗಿ ಮುಚ್ಚುವ ಹಾಗೆ ವೆಲ್ಡಿಂಗ್ ಮಾಡಿಸುತ್ತಿದ್ದಾರೆ. ಅಲ್ಲದೆ ಹಿಂಬದಿ ಗೇಟ್ ಜೊತೆ ಹಿಂಬದಿ ರಸ್ತೆಗೂ ಸಿಸಿಟಿವಿ ಅಳವಡಿಕೆಗೆ ಪ್ಲಾನ್‌ ರೂಪಿಸಿದ್ದಾರೆ.

ಬೆಂಕಿ‌ ಇಡುವ ಕೆಲಸ ಯಾಕೆ ?

ಘಟನೆ ಸಂಬಂಧ ಸತೀಶ್ ರೆಡ್ಡಿ ನಿವಾಸಕ್ಕೆ ಸಂತೋಷ್ ಗುರೂಜಿ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಈ ವೇಳೆ, ಮಾಧ್ಯಮಗಳಿಗೆ ಮಾತನಾಡಿದ ಗುರೂಜಿ, ಕಳೆದ ವರ್ಷದಿಂದ ಹಲವು ಘಟನೆಗಳು ನಗರದಲ್ಲಿ ನಡೆಯುತ್ತಿವೆ‌. ಕಳೆದ ವರ್ಷ ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಇಡಲಾಗಿತ್ತು. ಈಗ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಡಲಾಗಿದೆ. ಕೇವಲ ಬೆಂಕಿ ಇಡುವ ಘಟನೆಗಳು ನಡೆಯುತ್ತಿವೆ. ಇದರ ಹಿಂದೆ ಬೇರೆ ಯಾರದ್ದೋ ಕೈವಾಡವಿದೆ ಎಂದು ಅಭಿಪ್ರಾಯಪಟ್ಟರು‌

ಘಟನೆ ರಾಜಕೀಯ ಪ್ರೇರಿತ ಇರಬಹುದು. ಆದರೆ, ಬೇಗೂರು ಕೆರೆಯ ಶಿವನ ಪ್ರತಿಮೆಯ ಘಟನೆ ನಡೆದ ಮೇಲೆ ಆಗಿರೋದ್ಯಾಕೆ..? ಹಿಂದೂಗಳನ್ನು ರೊಚ್ಚಿಗೇಳಿಸುವ ಕೆಲಸ ಮಾಡಲಾಗಿದೆ. ಇದು ಸುಪಾರಿ ಕೊಟ್ಟು ಮಾಡಿಸಿದಂತಿದೆ. ಈ ಬಗ್ಗೆ ಕಮಿಷನರ್ ಕಮಲ್ ಪಂತ್​ ಸೂಕ್ತ ತನಿಖೆ ನಡೆಸಬೇಕು‌‌ ಎಂದು ಆಗ್ರಹಿಸಿದರು.

ಬಿಜೆಪಿ ಸರ್ಕಾರ ಹಿಂದೂ‌ ಧರ್ಮದ ಬೆಂಬಲದಿಂದ ಬಂದಿರೋದನ್ನ ಮರೆಯಬಾರದು. ಈ ಘಟನೆಯ ಬಗ್ಗೆ ಸರ್ಕಾರ ಗಮನಹರಿಸಬೇಕಿದೆ. ಬರಿ ಬೆಂಕಿ ಇಡು ಕೆಲಸವಾಗುತ್ತಿದೆ. ಇದು ಹೀಗೆ ಮುಂದುವರಿದರೆ ಕರ್ನಾಟಕ ಪಶ್ಚಿಮ ಬಂಗಾಳ, ಬಿಹಾರ ಆಗಲಿದೆ. ಆಗ ನಾವು ಹಿಂದೂ ಶಿವಾಜಿ ಆಗಬೇಕಾಗಲಿದೆ ಎಂದು ಎಚ್ಚರಿಸಿದರು.

ಘಟನೆ ಸಂಬಂಧ ಸತೀಶ್ ರೆಡ್ಡಿ ಮನೆಗೆ ಪಾದ್ರಿ ಕೂಡ ಭೇಟಿ ನೀಡಿದ್ದಾರೆ. ನಿವಾಸದ ಮುಂದೆ ಪ್ರಾರ್ಥನೆ ಸಲ್ಲಿಸಿರುವ ಪಾದ್ರಿ, ಈ ರೀತಿ ಘಟನೆ ಆಗಬಾರದೆಂದು ರೆಡ್ಡಿ ಅವರಿಗೆ ಆಶೀರ್ವದಿಸಿದ್ದಾರೆ.

Last Updated : Aug 13, 2021, 7:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.