ಬೆಂಗಳೂರು: ಅಮೆರಿಕದಲ್ಲಿ ನಡೆಯುತ್ತಿರುವ ಕಪ್ಪು ವರ್ಣೀಯರ ಪ್ರತಿಭಟನೆ ಕುರಿತು ಟ್ವಿಟರ್ನಲ್ಲಿ ಪ್ರಚೋದನಾತ್ಮಕ ಪೋಸ್ಟ್ ಮಾಡಿದ್ದ ಲೇಖಕ, ಚಿಂತಕ ಹಾಗೂ ಮೋದಿ ಅವರ ಕಟು ಟೀಕಾಕಾರ ಆಕಾರ್ ಪಟೇಲ್ ಮೇಲೆ ಪ್ರಕರಣ ದಾಖಲಾಗಿದೆ.
ಅಮೆರಿಕದಲ್ಲಿ ಕಪ್ಪು ವರ್ಣೀಯರು ಪ್ರತಿಭಟನೆ ನಡೆಸುತ್ತಿರುವಂತೆ ಭಾರತದಲ್ಲಿ ದಲಿತರು, ಮುಸ್ಲಿಮರು, ಆದಿವಾಸಿಗಳು, ಬಡವರು ಹಾಗೂ ಮಹಿಳೆಯರು ಪ್ರತಿಭಟನೆ ಮಾಡಬೇಕು. ಹೀಗೆ ಪ್ರತಿಭಟನೆ ಮಾಡಿದರೆ ವಿಶ್ವವು ಗುರುತಿಸುತ್ತದೆ. ಪ್ರತಿಭಟನೆ ಒಂದು ಕಲೆ ಎಂದು ಅವರು ಟ್ವೀಟ್ ಮಾಡಿದ್ದರು.
ಉತ್ತರ ವಿಭಾಗದ ಜೆ.ಸಿ ನಗರ ಇನ್ಸ್ಪೆಕ್ಟರ್ ನಾಗರಾಜ್ ಆಕಸ್ಮಿಕವಾಗಿ ಆಕಾರ್ ಪಟೇಲ್ರ ಈ ಟ್ವೀಟ್ ನೋಡಿದ್ದಾರೆ. ಇದು ಪ್ರತಿಭಟನೆಗೆ ಪ್ರಚೋದನೆ ನೀಡುವ ಕಾರಣ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಜೆ.ಸಿ.ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.