ಬೆಂಗಳೂರು: ಕಾರು ಪಾರ್ಕ್ ಮಾಡುವ ವಿಚಾರಕ್ಕೆ ಕಿರಿಕ್ ನಡೆದು ವ್ಯಕ್ತಿಯ ಮೇಲೆ ಬೌನ್ಸರ್ಗಳು ಹಲ್ಲೆ ಮಾಡಿರುವ ಘಟನೆ ನಗರದ ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ನೆಡೆದಿದೆ.
ಸವೇರಿಯಾ ಹೋಟೆಲ್ಗೆ ಕುಟುಂಬ ಸಮೇತರಾಗಿ ಬಂದಿದ್ದ ಮೊಹಮ್ಮದ್ ರಿಫಾಜ್ ಪಾರ್ಕಿಂಗ್ಗೆ ಅಡ್ಡಲಾಗಿ ನಿಲ್ಲಿಸಿದ್ದ ಎರಡು ಬೆನ್ಜ್ ಕಾರ್ಗಳನ್ನು ತೆಗೆಯುವಂತೆ ಹಾರನ್ ಮಾಡಿದ್ದಾರೆ.
ಮಹೀನ್ ಎನ್ನುವವನಿಗೆ ಸೇರಿದ ಅಂಗರಕ್ಷರು ಮೊಹಮ್ಮದ್ಗೆ ಹೋಟೆಲ್ ಆವರಣದಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಮ್ಮ ಬಾಸ್ ಕಾರಿಗೆ ಹಾರನ್ ಮಾಡ್ತೀಯಾ ಎಂದು ಹಲ್ಲೆ ನಡೆದಿದೆ ಎನ್ನಲಾಗಿದೆ.
ಮೊಹಮ್ಮದ್ ರಿಫಾಜ್ಗೆ ಹಲ್ಲೆ ನಡೆಸಿದ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಕೈ ಮುಗಿದು ಬೇಡಿ ಕೊಂಡರು ಕರುಣೆ ತೋರಿಲ್ಲ. ಮಡಿವಾಳ ಠಾಣೆಯಲ್ಲಿ ಮಹೀನ್ ಹಾಗೂ ಅಂಗರಕ್ಷರ ವಿರುದ್ಧ ಎಫ್ಐ ಆರ್ ದಾಖಲಾಗಿದೆ.