ETV Bharat / state

'ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಮಾತುಗಳು ಕೀಳುಮಟ್ಟದ ಪ್ರಚಾರದ ಪ್ರಯತ್ನ'

ಹಂಸಲೇಖ ಅವರ ಸಂಗೀತ, ಸಾಹಿತ್ಯ ರಚನೆಯ ಬಗ್ಗೆ ನಮಗೆ ಗೌರವವಿದೆ. ಆದರೆ, ಅಂತಹ ವ್ಯಕ್ತಿ ಕೀಳುಮಟ್ಟದ ಟೀಕೆ ಮಾಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಆ ಸಮಯದಲ್ಲಿ ಅವರಿಗೆ ಏನೋ ಬುದ್ಧಿಭ್ರಮಣೆಯಾಗಿತ್ತು ಎನಿಸುತ್ತದೆ. ಸಮಸ್ತ ಹಿಂದೂ ಸಮಾಜ ಇದನ್ನು ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ (State BJP Spokesperson Capt.Ganesh Karnik) ಹೇಳಿದ್ದಾರೆ.

capt-ganesh-karnik-outrage-against-hamsalekha
ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್
author img

By

Published : Nov 16, 2021, 3:53 PM IST

ಬೆಂಗಳೂರು: ಗುರು ಪರಂಪರೆಗೆ ಹೊಸ ದಿಕ್ಕು ಕೊಟ್ಟಿದ್ದ ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ (Music Directer Hamsalekha) ಆಡಿರುವ ಮಾತುಗಳು ಕೀಳುಮಟ್ಟದ ಪ್ರಚಾರ ಪಡೆಯುವ ಪ್ರಯತ್ನ ಎಂದು ಬಿಜೆಪಿಯ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ಮಲ್ಲೇಶ್ವರಂನಲ್ಲಿರವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೇಜಾವರ ಶ್ರೀಗಳು ತನ್ನ ಇಡೀ ಜೀವನದ ಎಂಟು ದಶಕಗಳ ಕಾಲ ಸನ್ಯಾಸಿಯಾಗಿ ಸಮಸ್ತ ಹಿಂದೂ ಸಮಾಜವನ್ನು ಸಂಘಟಿಸುವಲ್ಲಿ ತೊಡಗಿಸಿಕೊಂಡಿದ್ದರು. ಸಮಾಜದಲ್ಲಿರುವ ಓರೆಕೋರೆಗಳನ್ನು ತಿದ್ದುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಅಂತಹವರ ವಿರುದ್ಧ ಟೀಕೆ ಕೆಟ್ಟ ಚಾಳಿ ಮತ್ತು ಅದರ ಮೂಲಕ ಪ್ರಚಾರ ಪಡೆಯುವ ಹಪಾಹಪಿತನ ಹಂಸಲೇಖ ಮಾಡಿದ್ದು ಅಕ್ಷಮ್ಯ ಎಂದು ಕಿಡಿಕಾರಿದರು.

'ಬುದ್ಧಿಭ್ರಮಣೆ'

ಹಂಸಲೇಖ ಅವರ ಸಂಗೀತ, ಸಾಹಿತ್ಯ ರಚನೆಯ ಬಗ್ಗೆ ನಮಗೆ ಗೌರವವಿದೆ. ಆದರೆ, ಅಂತಹ ವ್ಯಕ್ತಿ ಕೀಳು ಮಟ್ಟದ ಟೀಕೆ ಮಾಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಆ ಸಮಯದಲ್ಲಿ ಅವರಿಗೆ ಏನೋ ಬುದ್ಧಿಭ್ರಮಣೆಯಾಗಿತ್ತು ಎನಿಸುತ್ತದೆ. ಸಮಸ್ತ ಹಿಂದೂ ಸಮಾಜ ಇದನ್ನು ಖಂಡಿಸುತ್ತದೆ. ಬಿಜೆಪಿ ಹಂಸಲೇಖರ ಹೇಳಿಕೆಯನ್ನು ಖಂಡಿಸಿದೆ. ದೇವರು ಅವರಿಗೆ ಒಳ್ಳೆಯ ಬುದ್ದಿ ಕೊಡಲಿ, ಪೇಜಾವರಶ್ರೀಗಳ ಇಡೀ ಜೀವನದ ಸಂದೇಶ ತಿಳಿದುಕೊಳ್ಳುವ ಪ್ರಾಮಾಣಿಕ ಮನಸ್ಸನ್ನು ಭಗವಂತ ಕರುಣಿಸಲಿ ಎಂದಿದ್ದಾರೆ.

ಈಗಾಗಲೇ ಹಂಸಲೇಖ ಕ್ಷಮೆ ಯಾಚಿಸಿದ್ದಾರೆ. ಒಂದು ಸಾಲಿನಲ್ಲಿ ವಿಷಾದ ವ್ಯಕ್ತಪಡಿಸುವುದು ಬಹಳ ಸುಲಭ. ಆದರೆ, ಹಿಂದೂ ಸಮಾಜ ತುಂಬಾ ನೋವಿನಿಂದ ಅತ್ಯಂತ ಕಟುವಾಗಿ ಇದನ್ನು ಖಂಡಿಸುತ್ತಿದೆ. ಏನಾದರೂ ಪ್ರಾಯಶ್ಚಿತ್ತ ಮಾಡಿಕೊಳ್ಳುವುದಿದ್ದರೆ ಪೇಜಾವರ ಶ್ರೀಗಳು ಹಾಕಿಕೊಟ್ಟ ದಾರಿ, ಹೆಜ್ಜೆಗುರುತುಗಳನ್ನು ಅಳವಡಿಸಿಕೊಳ್ಳುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

'ಪುನೀತ್‌ರಂತೆ ಹಂಸಲೇಖ ಒಳ್ಳೆಯ ದಾರಿ ಹಿಡಿಯಲಿ'

ಪುನೀತ್ ರಾಜ್​ಕುಮಾರ್​ಗೆ ಇಡೀ ರಾಜ್ಯ ಶ್ರದ್ಧಾಂಜಲಿ ಸಮರ್ಪಣೆ ಮಾಡುತ್ತಿದೆ. ಪುನೀತ್ ಅವರಂತಹ ಸೆಲೆಬ್ರಿಟಿ ಎಲೆಮರೆ ಕಾಯಿಯಂತೆ ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಯನ್ನು ಮುಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಅವರಂತೆ ಹಂಸಲೇಖ ಒಳ್ಳೆಯ ದಾರಿಯಲ್ಲಿ ನಡೆಯಲಿ ಎಂದರು.

ಸ್ವತಃ ಬಿಳಿಗಿರಿರಂಗನ ಬಗ್ಗೆ ಹಂಸಲೇಖ ಏಕವಚನದಲ್ಲಿ ಮಾತನಾಡಿದ್ದಾರೆ. ಪುರಾಣಗಳನ್ನು, ಗ್ರಾಮೀಣ ಪ್ರದೇಶದ ನಂಬಿಕೆಗಳನ್ನು ಅಪಹಾಸ್ಯ ಮಾಡುವ ಕೆಲಸವನ್ನು ಹಂಸಲೇಖ ಮಾಡಿದ್ದಾರೆ. ವಿಚಾರವ್ಯಾದಿಗಳ ರೋಗ ಇವರಿಗೂ ಹಿಡಿದಿದೆ ಎಂದು ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಖಾರವಾಗಿ ನುಡಿದರು.

ಯಾರೆಲ್ಲಾ ಈ ರೀತಿ ಹೊಸ ಅವತಾರಗಳನ್ನು ಹಿಂದುತ್ವ, ಹಿಂದೂ ವಿಚಾರಧಾರೆ, ಹಿಂದೂ ದೇವತೆಗಳ ವಿರುದ್ಧ ಅವಹೇಳನ ಮಾಡಿ ಆ ಮೂಲಕ ತಾವು ದೊಡ್ಡ ವ್ಯಕ್ತಿ ಎಂದು ಭಾವಿಸಿಕೊಳ್ಳುತ್ತಾರೋ ಅವರೆಲ್ಲಾ ಕಾಲದ ಕರೆಯೋಲೆಗೆ ಕಳೆದುಹೋಗುತ್ತಾರೆ. ಹಿಂದೂ ಸಮಾಜದ ರೋಷದ ಅಗ್ನಿಯ ಒಳಗೆ ಇವರೆಲ್ಲ ಸುಟ್ಟು ಹೋಗಲಿದ್ದಾರೆ ಎಂದರು.

ಇದನ್ನೂ ಓದಿ: ಪೇಜಾವರ ಶ್ರೀಗಳಿಗೆ ಅವಮಾನ ವಿಚಾರ..ಹಂಸಲೇಖ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.