ಬೆಂಗಳೂರು: ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯ ಸಚಿವ ಸಂಪುಟ ಮಹತ್ವದ ಸಭೆ ನಡೆಯಲಿದ್ದು,ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಬೆಂಗಳೂರು ನಗರದಲ್ಲಿ ಲಾಕ್ ಡೌನ್ ಜಾರಿಗೊಳಿಸಬೇಕಾ? ಬೇಡಾವಾ ಎನ್ನುವ ನಿರ್ಧಾರ ಹೊರಬೀಳಲಿದೆ. ಜೊತೆಗೆ ಕರ್ನಾಟಕ ಕೈಗಾರಿಕೆ ಸೌಕರ್ಯ (ತಿದ್ದುಪಡಿ) ವಿಧೇಯಕ 2020 ಕ್ಕೆ ಅನುಮೋದನೆ ನೀಡುವ ಸಾಧ್ಯತೆ ಇದ್ದು, ಇನ್ನು ಹಲವು ಮಹತ್ವದ ನಿರ್ಧಾರ ಪ್ರಕಟಗೊಳ್ಳಲಿದೆ.
ಇಂದಿನ ಸಂಪುಟ ಸಭೆಯ ನಡಾವಳಿ ವಿವರ:
- 2020-21 ನೇ ಸಾಲಿನ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗೆ ಹೆಸರುಗಳನ್ನು ಶಿಫಾರಸ್ಸು ಮಾಡುವುದು.
- ಕರ್ನಾಟಕ ಶಾಸಕರು, ಜನಪ್ರತಿನಿಧಿಗಳ ವೇತನ ,ಪಿಂಚಣಿ,ಭತ್ಯೆ ಇತರೆ (ತಿದ್ದುಪಡಿ) ವಿಧೇಯಕ 2020 ಅನುಮೋದನೆ ಸಾಧ್ಯತೆ
- ವಿವಿಧ ಹಂತದಲ್ಲಿರುವ 9.74 ಲಕ್ಷ ವಸತಿ ಕಾಮಗಾರಿಗಳಿಗೆ 10,194 ಕೋಟಿ ರೂ ಬಿಡುಗಡೆ ಸಾಧ್ಯತೆ.
- ಜೀವ ರಕ್ಷಕ ಸಾಧನಗಳ(Advance life support) ಒಳಗೊಂಡ ಆ್ಯಂಬುಲೆನ್ಸ್ 120 ಗಳನ್ನು 32.04 ಕೋಟಿ ರೂ.ಗಳ ವೆಚ್ಚದಲ್ಲಿ ಖರೀದಿಗೆ ಅನುಮೋದನೆ
- ಕರ್ನಾಟಕ ಮುಂದ್ರಾಕ (ಎರಡನೆ ತಿದ್ದುಪಡಿ) ವಿಧೇಯಕ )2020 ಕ್ಕೆ ಅನುಮೋದನೆ ಸಾಧ್ಯತೆ
- ಕರ್ನಾಟಕ ಭೂಸುಧಾರಣೆ (2 ನೇ ತಿದ್ದುಪಡಿ) ವಿಧೇಯಕ 2020 ಕಲಂ 79ಎ,ಬಿ,ಸಿ ಮತ್ತು 80 ತೆಗೆದು ಹಾಕಿರುವ ಕಾರಣ ಸೆಕ್ಷನ್ 63 ತಿದ್ದುಪಡಿ ತಂದು ಜಮೀನು ಒಡೆತದ ಪ್ರಮಾಣವನ್ನು ಹೆಚ್ಚಳ ಮಾಡುವ ಕಾಯ್ದೆಗೆ ತಿದ್ದುಪಡಿಗೆ ಅನುಮೋದನೆ ಸಾಧ್ಯತೆ.
- ವಿವಿಧ ಖಾಸಗಿ ಸಂಸ್ಥೆಗಳು, ಸೊಸೈಟಿಗಳು,ಸಂಸ್ಥೆಗಳಿಗೆ ನೀಡಿರುವ ಜಮೀನು,ಜಾಗದ ಗುತ್ತಿಗೆಯನ್ನು ಶಾಶ್ವತವಾಗಿ ಸಂಸ್ಥೆಗಳಿಗೆ ಬಿಟ್ಟು ಕೊಡುವ ತೀರ್ಮಾನಕ್ಕೆ ಅನುಮೋದನೆ ಸಾಧ್ಯತೆ.
- ತಿರುಪತಿ ತಿರುಮಲದಲ್ಲಿ 200 ಕೋಟಿ ರೂ ಮೊತ್ತದಲ್ಲಿ ಕಲ್ಯಾಣ ಮಂಟಪ,ಯಾತ್ರಿ ನಿವಾಸ,ಇತರೆ ಸೌಲಭ್ಯ ಕಲ್ಪಿಸುವ ಯೋಜನೆಗೆ ಅನುಮೋದನೆ ನೀಡುವುದು.
- 406.41 ಕೋಟಿ ರೂ ರೈಲ್ವೆ ಲೈನ್ ಡಬ್ಲಿಂಗ್ ಕಾಮಗಾರಿಗೆ ಅನುಮೋದನೆ ನೀಡುವುದು.
- ಪಿಪಿಪಿ ಮಾದರಿಯಲ್ಲಿ ಉಪನಗರ ರೈಲು ಯೋಜನೆ ಅನುದಾನ ಕಡಿತಗೊಳಿಸಿ 15767 ಕೋಟಿ ರೂ ಯೋಜನೆಗೆ ಅನುಮೋದನೆ.
- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ 2020 ಕ್ಕೆ ಅನುಮೋದನೆ.
- ಕಾವೇರಿ ನೀರಾವರಿ ನಿಗಮಕ್ಕೆ ಶೇ 40 ಬಂಡವಾಳ ಮತ್ತು ರಾಜಸ್ವ ವೆಚ್ಚ ಮಾಡಲು ಅನುಮೋದನೆ ನೀಡುವುದು.