ETV Bharat / state

ಸಿಎಎ ಪ್ರತಿಭಟನೆ ವೇಳೆ ನಿಷೇಧಾಜ್ಞೆ ಜಾರಿ ಹೈ ಕೋರ್ಟ್​ ಗರಂ: ಆರ್ಡರ್ ನೋಡಿ ಮಾತನಾಡುವೆ ಎಂದ ನಗರ ಆಯುಕ್ತರು

author img

By

Published : Feb 14, 2020, 6:59 PM IST

ಪೌರತ್ವ ಕಿಚ್ಚು ರಾಜ್ಯಾದ್ಯಂತ ಹೆಚ್ಚಾದಾಗ ಸಿಲಿಕಾನ್ ಸಿಟಿಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್​ ಅವರು ಪ್ರತಿಭಟನೆಯನ್ನ ಹತ್ತಿಕ್ಕಲು ನಗರದಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿದ್ದರು. ಆದರೆ ಇದು ಕಾನೂನು ಬಾಹಿರ ಎಂದು ಹೈಕೋರ್ಟ್ ಹೇಳಿದೆ.

CAA protest High Court Garam on police
ಸಿಎಎ ಪ್ರತಿಭಟನೆ ವೇಳೆ ನಿಷೇಧಾಜ್ಞೆ ಜಾರಿ ಹೈ ಕೋರ್ಟ್​ ಗರಂ

ಬೆಂಗಳೂರು: ಪೌರತ್ವ ಕಿಚ್ಚು ರಾಜ್ಯಾದ್ಯಂತ ಹೆಚ್ಚಾದಾಗ ಸಿಲಿಕಾನ್ ಸಿಟಿಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್​ ಅವರು ಪ್ರತಿಭಟನೆಯನ್ನ ಹತ್ತಿಕ್ಕಲು ನಗರದಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿದ್ದರು. ಆದರೆ ಇದು ಕಾನೂನು ಬಾಹಿರ ಎಂದು ಹೈಕೋರ್ಟ್ ಹೇಳಿದೆ.

ಇದರ ಬಗ್ಗೆ ಇಂದು ನಗರ ಪೊಲೀಸ್​​ ಆಯುಕ್ತರು ಮಾತನಾಡಿ ನ್ಯಾಯಾಲಯ ಏನ್ ಆರ್ಡರ್ ಪಾಸ್ ಮಾಡಿದೆ, ಅನ್ನೋದ್ರ ದಾಖಲೆ ನನಗೆ ಲಭ್ಯವಾಗಿಲ್ಲ. ನ್ಯಾಯಾಲಯ ಪ್ರತಿ ಸಿಕ್ಕ ತಕ್ಷಣ ಇದರ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದಿದ್ದಾರೆ.

ಏನಿದು ಪ್ರಕರಣ:

2019ರ ಡಿಸೆಂಬರ್ 18ರಿಂದ ಮೂರು ದಿನಗಳ ಕಾಲ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಇದನ್ನ ಪ್ರಶ್ನಿಸಿ ರಾಜ್ಯಸಭಾ ಸದಸ್ಯ ಪ್ರೊ.ಎಂ. ಬಿ. ರಾಜೀವ್ ಗೌಡ, ಶಾಸಕಿ ಸೌಮ್ಯ ರೆಡ್ಡಿ, ಇತರರು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಕಾರಣ ನಿನ್ನೆ ನ್ಯಾಯಾಲಯ ನಗರದಲ್ಲಿ ಕಲಂ144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು ಅಕ್ರಮ ಹಾಗೂ ಕಾನೂನು ಬಾಹಿರ. ಹಾಗೆ ಇದರಲ್ಲಿ ಪೊಲೀಸರು ಲೋಪ ಎಸಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.