ETV Bharat / state

ಕೆಎಸ್ಸಾರ್ಟಿಸಿ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ: ರಾಜ್ಯ ಸಾರಿಗೆ ನಿಗಮಗಳ‌ ಪರಿಶೀಲನಾ ಸಭೆಯಲ್ಲಿ ಚರ್ಚೆ - ಪ್ರಯಾಣಿಕರಿಗೆ ದರ ಏರಿಕೆಯ ಶಾಕ್

ಖಾಸಗಿ ಕ್ಯಾಬ್, ನಮ್ಮ ಮೆಟ್ರೋದಂತಹ ಸೇವೆಗಳು ಬಂದರೂ ಕೂಡ ಇಂದಿಗೂ ಲಕ್ಷಾಂತರ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆಯನ್ನೇ ನೆಚ್ಚಿಕೊಂಡಿದ್ದಾರೆ. ಸುರಕ್ಷತೆಯ ಜೊತೆಗೆ ಕೈಗೆಟುಕುವ ಟಿಕೆಟ್ ದರ, ಟ್ರಾಫಿಕ್ ಸಮಸ್ಯೆಯಿಂದ ಪಾರಾಗುವುದು ಕೂಡ ಇದಕ್ಕೆ ಕಾರಣ. ಆದ್ರೀಗ ಟಿಕೆಟ್‌ ಬೆಲೆ ಏರಿಕೆ ವಿಚಾರ ಮುನ್ನೆಲೆಗೆ ಬಂದಿದ್ದು ಪ್ರಯಾಣಿಕರ ನಿದ್ದೆಗೆಡಿಸಿದೆ.

Bus ticket prices are going rise
ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ
author img

By

Published : Feb 23, 2020, 5:59 PM IST

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳ ಟಿಕೆಟ್ ದರ ಇಳಿಕೆ ಮಾಡಲಾಗುವುದು ಎಂದಿದ್ದ ಸಾರಿಗೆ ನಿಗಮಗಳು ಈಗ ಯೂಟರ್ನ್ ಹೊಡೆದಿವೆ.‌ ಸಾರಿಗೆ ಬಸ್‌ಗಳ ಟಿಕೆಟ್ ದರ ಏರಿಕೆಯ ಶಾಕ್ ನೀಡಲು ನಿಗಮಗಳು ಮುಂದಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ದರ ಹೆಚ್ಚಳಕ್ಕೆ ರಾಜ್ಯ ಸಾರಿಗೆ ನಿಗಮಗಳ‌ ಪರಿಶೀಲನಾ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ರಾಜ್ಯ ಬಜೆಟ್ ಅಧಿವೇಶನ ಮುಗಿಯೋದಕ್ಕೂ ಮೊದಲೇ ಪರಿಷ್ಕೃತ ದರ ಜಾರಿ ಮಾಡಲು ಚಿಂತನೆ ನಡೆದಿದೆ ಎನ್ನಲಾಗಿದೆ.

ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ

ಬಿಎಂಟಿಸಿ, ಕೆಎಸ್​ಆರ್​ಟಿಸಿ ಸೇರಿ ಎಲ್ಲಾ ನಿಗಮಗಳಲ್ಲೂ ದರ ಏರಿಕೆ ಚಿಂತನೆ ನಡೆದಿದೆ. ಶೀಘ್ರದಲ್ಲೇ ಈ ಕುರಿತಾಗಿ ಅಧಿಕೃತ ಆದೇಶ ಹೊರಬೀಳಲಿದೆ. ಪೆಟ್ರೋಲ್, ಡೀಸೆಲ್ ದರಗಳ ನಿರಂತರ ಏರಿಕೆ, ಸಾರಿಗೆ ಸಂಸ್ಥೆಗಳು ನಷ್ಟದತ್ತ ಸಾಗುತ್ತಿರುವುದು ದರ ಏರಿಕೆಗೆ ಕಾರಣ ಎನ್ನಲಾಗಿದೆ. ಈ ಹಿಂದೆ ಶೇ.15 ರಷ್ಟು ದರ ಹೆಚ್ಚಳಕ್ಕೆ ಮೈತ್ರಿ ಸರ್ಕಾರ ಮುಂದಾಗಿತ್ತು. ಆದರೆ ರಾಜ್ಯ ಸರ್ಕಾರ ಅದಕ್ಕೆ ಅನುಮತಿ ನೀಡಿರಲಿಲ್ಲ. ಪ್ರಯಾಣಿಕರ ಮೇಲೆ ಅನಗತ್ಯ ಬರೆ ಸರಿಯಲ್ಲ ಎಂದು ತಿಳಿಸಿತ್ತು. ಈಗ ಮತ್ತೆ ಪ್ರಯಾಣ ದರ ಹೆಚ್ಚಿಸುವ ಬಗ್ಗೆ ಸರ್ಕಾರದ ಜೊತೆಗೂ ಮಾತುಕತೆ ನಡೆಯುತ್ತಿದೆ.‌

ಸಾರಿಗೆ ನಿಗಮಗಳು ಕಳೆದ 5 ವರ್ಷಗಳಿಂದ ಬಸ್ ದರ ಹೆಚ್ಚಳ ಮಾಡಿಲ್ಲ. ಹಾಗಾಗಿ ನಷ್ಟದಲ್ಲಿರುವ ನಿಗಮಗಳ ಹೊರೆಯ ಪ್ರಮಾಣ ಇಳಿಸಲು ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರವೂ ಸಹಮತ ವ್ಯಕ್ತಪಡಿಸಿದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.