ETV Bharat / state

ಏಪ್ರಿಲ್‌ 7ರಿಂದ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತಗೊಳ್ಳುವುದು ಶತಃಸಿದ್ಧ : ಕೋಡಿಹಳ್ಳಿ ಚಂದ್ರಶೇಖರ್ - Bangalore

ಸಾರಿಗೆ ನೌಕರರನ್ನ 6ನೇ ವೇತನ ಆಯೋಗದ ಅಡಿ ತರಬೇಕು ಅನ್ನೋದು ನಮ್ಮ ಪ್ರಮುಖ ಬೇಡಿಕೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು. ಏ.7ರಂದು ನಡೆಯುವ ‌ಸತ್ಯಾಗ್ರಹ ವಿಚಾರವಾಗಿ ಮಾತನಾಡಿ, 7ನೇ ತಾರೀಖು ಎಲ್ಲಾ ಸಾರಿಗೆ, ಬಸ್‌ಗಳು ಸ್ಥಬ್ದವಾಗುತ್ತವೆ..

Kodihalli Chandrasekhar
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್
author img

By

Published : Mar 30, 2021, 3:30 PM IST

ಬೆಂಗಳೂರು : ಸರ್ಕಾರ ಏಸ್ಮಾ ಜಾರಿ ಮಾಡಿದರೂ ನಾವು ಭಯ ಪಡುವುದಿಲ್ಲ. ಏ.7ರಿಂದ ಕರ್ನಾಟಕದಾದ್ಯಂತ ಬಸ್ ಸಂಚಾರ ಸ್ಥಗಿತವಾಗುವುದು ಶತಃಸಿದ್ಧ. ನಾಗರಿಕರೆಲ್ಲರೂ ಸಹಕರಿಸಬೇಕು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮನವಿ ಮಾಡಿದರು.

ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಬಗ್ಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆ ನೀಡಿರುವುದು..

ಸಾರಿಗೆ ನೌಕರರ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಏ.7ರಂದು ಮುಷ್ಕರಕ್ಕೆ ಸಾರಿಗೆ ನೌಕರರ ಕೂಟ ಕರೆ ನೀಡಿದೆ. ಮುಷ್ಕರ ಹತ್ತಿಕ್ಕಲು ನಿನ್ನೆ ಸಿಎಂ ಜೊತೆ ಸಾರಿಗೆ ಸಚಿವ ಲಕ್ಷ್ಮಣ್​ ಸವದಿ ಸಭೆ ಬೆನ್ನಲ್ಲೆ ಇಂದು ಸಾರಿಗೆ ನೌಕರರ ಕೂಟದದಿಂದ ಸುದ್ದಿಗೋಷ್ಠಿ ನಡೆಯಿತು.

ಏಪ್ರಿಲ್‌ 1ಕ್ಕೆ ಮತ್ತೊಂದು ಸುತ್ತಿನ ಮಾತುಕತೆಗೆ ಸಾರಿಗೆ ಇಲಾಖೆ ನಮ್ಮನ್ನ ಕರೆದಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ನಾವು ಮುಷ್ಕರ ಕೈ ಬಿಡಲು ಸಿದ್ಧ ಎಂದು ಒಕ್ಕೂಟದ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟಪಡಿಸಿದರು.

ಸಾರಿಗೆ ನೌಕರರನ್ನ 6ನೇ ವೇತನ ಆಯೋಗದ ಅಡಿ ತರಬೇಕು ಅನ್ನೋದು ನಮ್ಮ ಪ್ರಮುಖ ಬೇಡಿಕೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು. ಏ.7ರಂದು ನಡೆಯುವ ‌ಸತ್ಯಾಗ್ರಹ ವಿಚಾರವಾಗಿ ಮಾತನಾಡಿ, 7ನೇ ತಾರೀಖು ಎಲ್ಲಾ ಸಾರಿಗೆ, ಬಸ್‌ಗಳು ಸ್ಥಬ್ದವಾಗುತ್ತವೆ ಎಂದು ತಿಳಿಸಿದರು.

ಪ್ರತಿಭಟನೆಯ ರೂಪುರೇಷೆಗಳ ಬಗೆಗೆ ಕೋಡಿಹಳ್ಳಿ ವಿವರಣೆ ಕೂಡ ನೀಡಿದರು.

  • ಏಪ್ರಿಲ್ 1 ರಂದು ಎಲ್ಲಾ ಡಿಪೋಗಳಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ.
  • ಏಪ್ರಿಲ್ 2 ರಂದು ಬೆಂಗಳೂರಿನ ಸರ್ಕಲ್​​ಗಳಲ್ಲಿ ಕುಟುಂಬದವರೊಂದಿಗೆ ಸೇರಿ ಬಜ್ಜಿ ಬೊಂಡಾ ಮಾರಾಟ.
  • ಏಪ್ರಿಲ್ 3 ರಂದು ನೌಕರರು ಹಾಗೂ ಅವರ ಕುಟುಂಬದವರೊಂದಿಗೆ ನಗರಗಳ ಸರ್ಕಲ್​​ಗಳಲ್ಲಿ ಮಾನವ ಸರಪಳಿ ಮಾಡಿ ಭಿತ್ತಿಪತ್ರ ಪ್ರದರ್ಶನ.
  • ಏಪ್ರಿಲ್ 4 ರಂದು ಸಾರ್ವಜನಿಕರಿಗೆ ಕರಪತ್ರ ಹಂಚಿಕೆ.
  • ಏಪ್ರಿಲ್ 5 ರಂದು ಧರಣಿ ಸತ್ಯಾಗ್ರಹ.
  • ಏಪ್ರಿಲ್ 6 ರಂದು ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್​ ಮಾಹಿತಿ ನೀಡಿದರು.

ಓದಿ: ಸಾರಿಗೆ ನೌಕರರ ಬೇಡಿಕೆ ಈಡೇರದಿದ್ದರೆ ಏಪ್ರಿಲ್ ತಿಂಗಳಲ್ಲಿ ಮತ್ತೆ ಮುಷ್ಕರ : ಕೋಡಿಹಳ್ಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.